Saturday, August 9, 2025

Latest Posts

ಫರ್ಮೆಂಟೆಡ್ ಫುಡ್ ಎಂದರೇನು..? ಇದನ್ನು ನಾವು ಪ್ರತಿದಿನ ಸೇವಿಸುತ್ತೇವೆ. ಹಾಗಾದ್ರೆ ಇದು ಒಳ್ಳೆಯದಾ..?

- Advertisement -

Health Tips: ಫರ್ಮೆಂಟೆಡ್ ಫುಡ್ ಅನ್ನು ಭಾರತೀಯರು ಹೆಚ್ಚಾಗಿ ಸೇವಿಸುತ್ತಾರೆ. ಅದರಲ್ಲೂ ಪ್ರತಿದಿನ ಸೇವಿಸುತ್ತಾರೆ. ಹಾಗಾದ್ರೆ ಫರ್ಮೆಂಟೆಡ್‌ ಫುಡ್ ಅಂದ್ರೇನು..? ಇದರ ಸೇವನೆಯಿಂದ ಆರೋಗ್ಯಕ್ಕೆ ಲಾಭವಾಗತ್ತಾ..? ನಷ್ಟವಾಗತ್ತಾ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಫರ್ಮೆಂಟೆಡ್ ಫುಡ್ ಅಂದ್ರೆ ಇಡ್ಲಿ, ದೋಸೆ, ಮೊಸರು, ಉಪ್ಪಿನಕಾಯಿ ಇಂಥ ಆಹಾರಗಳು. ನಾವು ಉಪ್ಪಿನಕಾಯಿ ಮಾಡಿಟ್ಟು, ವರ್ಷಪೂರ್ತಿ ತಿನ್ನುತ್ತೇವೆ. ರಾತ್ರಿ ಮೊಸರನ್ನು ಹೆಪ್ಪಿಗೆ ಹಾಕಿದ್ರೆ, ಬೆಳಿಗ್ಗೆ ಮೊಸರು ರೆಡಿಯಾಗತ್ತೆ. ಇನ್ನು ದೋಸೆ, ಇಡ್ಲಿ ಮಾಡುವಾಗ, ಮೊದಲ ದಿನ ಅಕ್ಕಿ, ಹೆಸರು, ಮೆಂತ್ಯೆ ನೆನೆಸಿಟ್ಟು, ರುಬ್ಬಿ ಹಿಟ್ಟು ತಯಾರಿಸಿ. ಮರುದಿನ ಹುಳಿ ಬಂದ ಬಳಿಕ, ಇಡ್ಲಿ, ದೋಸೆ ರೆಡಿ ಮಾಡುತ್ತೇವೆ. ಇದೇ ಫರ್ಮೆಂಟೆಡ್ ಫುಡ್.

ಇದರಲ್ಲಿ ಕಾರ್ಬೋಹೈಡ್ರೇಟ್, ಪ್ರೋಟಿನ್ ಅಂಶವಿರುವ ಕಾರಣ, ಇದು ಆರೋಗ್ಯವನ್ನು ಅತ್ಯುತ್ತಮವಾಗಿ ಇಡುತ್ತದೆ. ಡಯಟ್ ಮಾಡುವವರಿಗೆ, ರೋಗಿಗಳಿಗೆ ಇದು ಅತ್ಯುತ್ತಮ ತಿಂಡಿ. ಇದರ ಸೇವನೆಯಿಂದ ಆರೋಗ್ಯ ಉತ್ತಮವಾಗಿರುತ್ತದೆ. ಇಡ್ಲಿ, ದೋಸೆಯನ್ನು ಹೆಚ್ಚು ಎಣ್ಣೆ ಬಳಸದೇ ಮಾಡುವ ಕಾರಣ, ಬೆಳಿಗ್ಗೆ ಇದರ ಸೇವನೆ ಆರಾಮವಾಗಿ ಮಾಡಬಹುದು.

ಅಲ್ಲದೇ, ಇದು ಆರಾಮವಾಗಿ ಜೀರ್ಣವಾಗುತ್ತದೆ. ಹಾಗಾಗಿ ಇಂಥ ಆಹಾರ ಸೇವನೆಯಿಂದ, ಯಾವುದೇ ಹೊಟ್ಟೆ ಸಮಸ್ಯೆ ಬರುವುದಿಲ್ಲ. ಏಕೆಂದರೆ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲು ಇಂಥ ಆಹಾರ ಸಹಕಾರಿಯಾಗಿದೆ. ಡಯಾಬಿಟೀಸ್, ಹೃದಯ ಸಮಸ್ಯೆ, ಕಿಡ್ನಿ ಸಮಸ್ಯೆ ಸೇರಿ ಹಲವು ಗಂಭೀರ ಸಮಸ್ಯೆ ಬಾರದಂತೆ ತಡೆಯುವ ತಾಕತ್ತು, ಈ ಫರ್ಮೆಂಟೆಡ್ ಆಹಾರಗಳಿಗಿದೆ.

ನಿಮ್ಮ ತ್ವಚೆ ನ್ಯಾಚುರಲ್ ಆಗಿ ಗ್ಲೋ ಆಗಲು ಏನು ಮಾಡಬೇಕು..?

ನುಗ್ಗೆಕಾಯಿ ಸೇವನೆಯಿಂದಾಗುವ ಆರೋಗ್ಯಕರ ಲಾಭಗಳು..

ಹೆಚ್ಚು ಚಿಂತೆ ಮಾಡುವುದರಿಂದಲೂ ಶುರುವಾಗುತ್ತದೆ ಹೊಟ್ಟೆಯ ಸಮಸ್ಯೆ..

- Advertisement -

Latest Posts

Don't Miss