Spiritual: ಗಂಗಾಸ್ನಾನ ತುಂಗಾಪಾನ ಮಾಡಿದ್ದಲ್ಲಿ, ಜೀವನದ ಸಕಲ ಪಾಪ ನಾಶವಾಗುತ್ತದೆ ಎಂದು ಹೇಳಲಾಗುತ್ತದೆ. ಅಂದರೆ ಗಂಗೆಯಲ್ಲಿ ಮಿಂದೇಳಬೇಕು ಮತ್ತು ತುಂಗಾ ನದಿಯ ನೀರು ಕುಡಿಯಬೇಕು ಎಂದು ಹೇಳುತ್ತಾರೆ. ಹಾಗಾದರೆ ಗಂಗಾದೇವಿ ನಿಜವಾಗಿಯೂ ಪಾಪನಾಶಿನಿಯಾ..?ಯಾಕೆ ಜನ ಗಂಗಾ ನದಿಯಲ್ಲಿ ಮೀಯುತ್ತಾರೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಒಮ್ಮೆ ಓರ್ವ ಋಷಿ ಈ ರೀತಿಯಾಗಿ ಯೋಚನೆ ಮಾಡಿದ. ಎಲ್ಲರೂ ತಾವು ಮಾಡಿದ ಪಾಪ ಕಳೆಯಲು, ಗಂಗೆಗೆ ಹೋಗಿ ಸ್ನಾನ ಮಾಡುತ್ತಾರೆ. ಹಾಗಾದರೆ ಎಲ್ಲವನ್ನೂ ತನ್ನತ್ತ ಸೆಳೆದುಕೊಂಡಿರುವ ಗಂಗೆ ಪಾಪಿಯಲ್ಲವೇ ಎಂದು ಯೋಚಿಸಿದ. ಇದಕ್ಕೆ ಉತ್ತರ ಕಂಡುಕೊಳ್ಳಲು, ಬ್ರಹ್ಮನಿಗಾಗಿ ತಪಸ್ಸು ಮಾಡಿದ. ಬ್ರಹ್ಮ ಪ್ರತ್ಯಕ್ಷನಾದಾಗ, ಋಷಿ ಇದೇ ಪ್ರಶ್ನೆ ಕೇಳಿದ. ಅದಕ್ಕೆ ಬ್ರಹ್ಮ, ಹಾಗಾದರೆ ಈ ಪ್ರಶ್ನೆ ಸ್ವತಃ ಗಂಗೆಯ ಬಳಿಯೇ ಕೇಳುವ ಬಾ ಎಂದು ಇಬ್ಬರೂ ಗಂಗೆಯ ಬಳಿ ಹೋದರು.
ಗಂಗೆಯ ಬಳಿ ಬಂದು, ಎಲ್ಲರ ಪಾಪವನ್ನೂ ತೊಳೆಯುವ ನೀವು ಪಾಪಿಯಲ್ಲವೇ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಗಂಗೆ, ನಾನ್ಯಾಕೆ ಪಾಪಿಯಾಗಲಿ..? ನಾನು ಎಲ್ಲ ನೀರನ್ನು ಸಮುದ್ರಕ್ಕೆ ಸೇರಿಸುತ್ತೇನೆ ಎನ್ನುತ್ತಾಳೆ. ಇಬ್ಬರೂ ಸೇರಿ, ಸಮುದ್ರದ ಬಳಿ ಹೋಗಿ, ಸಾಗರ ದೇವನಲ್ಲಿ ಈ ರೀತಿ ಪ್ರಶ್ನಿಸುತ್ತಾರೆ. ಗಂಗೆಯ ಪಾಪ ತೆಗೆದುಕೊಂಡ ನೀವು ಪಾಪಿಯಲ್ಲವೇ ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಸಮುದ್ರ ದೇವ, ನಾನ್ಯಾಕೆ ಪಾಪಿಯಾಗಲಿ..? ನಾನು ನನ್ನ ನೀರನ್ನು ಮೋಡಕ್ಕೆ ಕೊಡುತ್ತೇನೆ ಎನ್ನುತ್ತಾನೆ.
ಆಗ ಋಷಿ ಮತ್ತು ಬ್ರಹ್ಮ ದೇವಿ ಸೇರಿ, ಮೋಡದ ಬಳಿ ಹೋಗಿ, ಇದೇ ರೀತಿ ಪ್ರಶ್ನಿಸುತ್ತಾರೆ. ಆಗ ಮೇಥರಾಜ ಹೇಳುತ್ತಾನೆ, ನಾನ್ಯಾಕೆ ಪಾಪಿಯಾಗಲಿ..? ನಾನು ಭೂಮಿಗೆ ಮಳೆ ಸುರಿಸುತ್ತೇನೆ. ಆ ಮನೆ ಬರುವಿಕೆಗಾಗಿ ಕಾದ ರೈತ, ಬೆಳೆ ಬೆಳೆಯುತ್ತಾನೆ. ಆ ಬೆಳೆಯನ್ನು ಮನುಷ್ಯ ಯಾವ ರೀತಿ, ಖರೀದಿಸಿ ತಿನ್ನುತ್ತಾನೆ. ಅವನಿಗೆ ಪಾಪ, ಪುಣ್ಯಗಳೆಲ್ಲ ಹೋಗುತ್ತದೆ ಎಂದು ಮೇಘರಾಜ ಹೇಳುತ್ತಾನೆ.
ಅಂದರೆ, ನಾವು ಅನ್ನಕ್ಕಾಗಿ ಅಕ್ಕಿ ಖರೀದಿಸುವಾಗ, ಅದಕ್ಕೆ ಕೊಡುವ ದುಡ್ಡು ನಿಯತ್ತಿನಿಂದ ದುಡಿದ ದುಡ್ಡಾಗಿರಬೇಕು. ಅನ್ನ ತಿನ್ನುವಾಗ, ನಮ್ಮ ಮನಸ್ಸು ಒಳ್ಳೆಯದರ ಬಗ್ಗೆಯೇ ಯೋಚಿಸಬೇಕು. ಲಂಚದ ದುಡ್ಡು, ಮೋಸದ ದುಡ್ಡಲ್ಲಿ ಅಕ್ಕಿ ಖರೀದಿಸಿ ತಂದು ಉಂಡರೆ ಮತ್ತು ಉಣ್ಣುವಾಗ ಇನ್ನೊಬ್ಬರಿಗೆ ಕೆಟ್ಟದ್ದು ಬಗೆದರೆ, ಅದೇ ದೊಡ್ಡ ಪಾಪ ಎಂದು ಮೇಘರಾಜ ಹೇಳುತ್ತಾನೆ.
ಈ ಸಮಯದಲ್ಲಿ ಎಂದಿಗೂ ಕಸ ಗುಡಿಸಬಾರದು.. ಇದರಿಂದ ದರಿದ್ರ ಸಂಭವಿಸುವ ಸಾಧ್ಯತೆ ಹೆಚ್ಚು..
ವೃದ್ಧೆ ಜಗನ್ನಾಥನಿಗೆ ಮೀನಿನ ಖಾದ್ಯ ನೈವೇದ್ಯ ಮಾಡಿದಾಗ ನಡೆಯಿತೊಂದು ಪವಾಡ..