Recipe: ಸಂಜೆ ಏನಾದ್ರೂ ಸ್ನ್ಯಾಕ್ಸ್ ತಿನ್ನಬೇಕು ಅನ್ನಿಸಿದಾಗ, ಈಸಿಯಾಗಿ ಮನೆಯಲ್ಲೇ ಮಾಡಿಕೊಂಡು ತಿನ್ನಬಹುದಾದ ಚಾಟ್ ಅಂದ್ರೆ, ಪಾಪ್ಡಿ ಚಾಟ್. ಹಾಗಾಗಿ ನಾವಿಂದು ಪಾಪ್ಡಿ ಚಾಟ್ ಹೇಗೆ ತಯಾರಿಸೋದು ಅಂತಾ ಹೇಳಲಿದ್ದೇವೆ.
ಪಾಪ್ಡಿಯನ್ನು ನೀವು ಮನೆಯಲ್ಲೇ ತಯಾರಿಸಬಹುದು. ಮೈದಾ, ಅಕ್ಕಿ ಹಿಟ್ಟು, ರವಾ, ಕಾರ್ನ್ ಫ್ಲೋರ್ ಬಳಸಿ, ಪಾನೀಪುರಿ ರೀತಿ, ಪಾಪ್ಡಿಯನ್ನ ಮನೆಯಲ್ಲೇ ತಯಾರಿಸಬಹುದು. ಅಥವಾ ಅಂಗಡಿಯಲ್ಲಿ ಸಿಗುವ ಪಾಪ್ಡಿಯನ್ನ ಕೂಡ ತರಬಹುದು. ಜೊತೆಗೆ ಖಾರಾಬೂಂದಿ, ಸೇವ್, ಕೊಂಚ ಸಕ್ಕರೆ ಬೆರೆಸಿದ ಮೊಸರು, ಸಣ್ಣಗೆ ಕತ್ತರಿಸಿದ, ಈರುಳ್ಳಿ, ಟೊಮೆಟೋ, ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಕ್ಯಾರೆಟ್ ತುರಿ, ಚಾಟ್ ಮಸಾಲೆ ಪುಡಿ, ಖಾರದ ಪುಡಿ, ನೆನೆಸಿ ಬೇಯಿಸಿದ ಕಪ್ಪು ಕಡಲೆಕಾಳು, ಒಂದು ಬೇಯಿಸಿ, ತುಂಡರಿಸಿದ ಬಟಾಟೆ, ರುಚಿಗೆ ತಕ್ಕಷ್ಟು ಕಪ್ಪು ಉಪ್ಪು ಇದ್ರೆ ಸಾಕು.
ಮೊದಲು ಪ್ಲೇಟ್ ತೆಗೆದುಕೊಂಡು, ಅದರ ಮೇಲೆ ನಿಮಗೆ ಬೇಕಾದಷ್ಟು ಪಾಪ್ಡಿ ಹಾಕಿ. ಬಳಿಕ ಕಡಲೆ, ಬಟಾಟೆ, ಚಾಟ್ ಮಸಾಲೆ, ಗರಂ ಮಸಾಲೆ, ಖಾರದ ಪುಡಿ, ಕಪ್ಪು ಉಪ್ಪು, ಮೊಸರು, ಖಾರಾಬೂಂದಿ, ಈರುಳ್ಳಿ, ಟೊಮೆಟೋ, ಕೊತ್ತೊಂಬರಿ ಸೊಪ್ಪು, ಮೆಣಸಿನಕಾಯಿ, ಕ್ಯಾರೆಟ್ ತುರಿ, ಖಾರಾ ಬೂಂದಿ, ಸೇವ್ ಹಾಕಿ. ಇದಾದ ಬಳಿಕ ಮತ್ತೆ ಮೇಲಿನಿಂದ ಕಡಲೆ ಮತ್ತು ಪಾಪ್ಡಿ ಹಾಕಿದ್ರೆ, ಚಾಟ್ ರೆಡಿ.
ನಿಮ್ಮ ತೂಕವನ್ನು ಆರೋಗ್ಯಕರವಾಗಿ ಹೆಚ್ಚಿಸಲು ಈ ನಿಯಮವನ್ನು ಅನುಸರಿಸಿ..