Sunday, December 15, 2024

Latest Posts

ರಾತ್ರಿ ಇಂಥ ಆಹಾರಗಳನ್ನು ಸೇವಿಸಬಾರದು.. ಇದು ಆರೋಗ್ಯಕ್ಕೆ ಹಾನಿಕಾರಕ

- Advertisement -

Health: ನಾವು ಸೇವಿಸುವ ಆಹಾರಗಳು, ನಮ್ಮ ಭವಿಷ್ಯದ ಆರೋಗ್ಯ ಸಮಸ್ಯೆಗಳಿಗೆ, ಅಥವಾ ಆರೋಗ್ಯಕರ ಜೀವನಕ್ಕೆ ನಾವು ಹಾಕುವ ಅಡಿಪಾಯವಾಗಿದೆ. ಹಾಗಾಗಿ ನಾವು ಯವ್ವನದಲ್ಲಿರುವಾಗಲೇ, ನಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿ, ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ಇಂದು ನಾವು ರಾತ್ರಿ ಯಾವ ರೀತಿಯ ಆಹಾರಗಳನ್ನು ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ..

ಬೇಕರಿ ತಿಂಡಿ. ಬೇಕರಿ ತಿಂಡಿಯನ್ನು ಹೆಚ್ಚಾಗಿ ಮೈದಾ ಮತ್ತು ಸಕ್ಕರೆಯಿಂದಲೇ ಮಾಡಲಾಗುತ್ತದೆ. ಹಾಗಾಗಿ ಮೈದಾ ತಿಂಡಿಯನ್ನು ರಾತ್ರಿ ಹೊತ್ತು ಸೇವಿಸಬಾರದು. ಇದು ಸರಿಯಾಗಿ ಜೀರ್ಣವಾಗದೇ, ನಮ್ಮ ದೇಹದಲ್ಲಿ ಬೊಜ್ಜು ಹೆಚ್ಚಾಗಲು ಇದು ಕಾರಣವಾಗುತ್ತದೆ.

ಮೊಸರು. ಮೊಸರು ಕೂಡ ತಂಪಾದ ಆಹಾರವಾಗಿದೆ. ಹಾಗಾಗಿ ಇದನ್ನ ನಾವು ಸೂರ್ಯನ ಬೆಳಕು ಇರುವ ಸಮಯದಲ್ಲಿ ಸೇವಿಸಬೇಕು. ರಾತ್ರಿ ಸಮಯದಲ್ಲಿ ಮೊಸರು ಸೇವಿಸುವುದು ದೇಹದಲ್ಲಿ ಸ್ಲೋ ಪಾಯ್ಸನ್ ರೀತಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿಯ ಪ್ರಭಾವ ಕಡಿಮೆಯಾಗುತ್ತದೆ.

ದೇಹಕ್ಕೆ ತಂಪು ನೀಡುವ ಹಣ್ಣು-ತರಕಾರಿ. ದೇಹಕ್ಕೆ ತಂಪು ನೀಡುವ ಹಣ್ಣು ತರಕಾರಿಗಳನ್ನು ಯಾವುದೇ ಕಾರಣಕ್ಕೂ ರಾತ್ರಿ ಹೊತ್ತು ಸೇವಿಸಬಾರದು. ಏಕೆಂದರೆ, ಇವುಗಳನ್ನು ಸೂರ್ಯನ ಬೆಳಕಿರುವಾಗ ಸೇವಿಸಬೇಕು. ಆಗಲೇ ಅದರ ಉತ್ತಮ ಪ್ರಯೋಜನ ನಮಗೆ ಸಿಗುತ್ತದೆ.  ಅದೇ ರಾತ್ರಿ ಹೊತ್ತು ನೀವು ಇಂಥ ಹಣ್ಣು- ತರಕಾರಿ ಸೇವಿಸಿದ್ದಲ್ಲಿ, ಕೆಮ್ಮು, ನೆಗಡಿ ಬರುವ ಸಾಧ್ಯತೆ ಇರುತ್ತದೆ.

ಸಿಹಿ ತಿಂಡಿ. ಸಿಹಿ ತಿಂಡಿಯನ್ನ ನಾವು ಎಷ್ಟು ಮಿತವಾಗಿ ಸೇವಿಸುತ್ತೇವೋ ಅಷ್ಟು ಉತ್ತಮ. ಅದರಲ್ಲೂ ರಾತ್ರಿ ಹೊತ್ತು ಯಾವುದೇ ಕಾರಣಕ್ಕೂ ಸಿಹಿ ತಿಂಡಿ ತಿನ್ನಬಾರದು. ಏಕೆಂದರೆ, ರಾತ್ರಿ ನಾವು ಯಾವುದೇ ಆಹಾರವನ್ನು ತಿಂದು ಮಲಗಿಬಿಡುತ್ತೇವೆ. ನಮಗೆ ವ್ಯಾಯಾಮಕ್ಕಾಗಿ, ಇತರ ಕೆಲಸಗಳಿಗೆ ಸಮಯವಿರುವುದಿಲ್ಲ. ಹಾಗಾಗಿ ರಾತ್ರಿ ಸಿಹಿ ತಿಂದರೆ, ಅದು ಜೀರ್ಣವಾಗಲು ಹಲವು ಸಮಯ ಬೇಕಾಗುತ್ತದೆ. ಇದರಿಂದಲೇ, ದೇಹದಲ್ಲಿ ಕೊಬ್ಬು ಹೆಚ್ಚಾಗಿ, ಬೋಜ್ಜು ಉಂಟಾಗುತ್ತದೆ.

ನಿಮ್ಮ ಮೂಳೆಯ ಆರೋಗ್ಯ ಸರಿಯಾಗಿ ಇರಬೇಕೆಂದಲ್ಲಿ, ಈ ವ್ಯಾಯಾಮ ಮಾಡಿ..

ಕಿರಾಣಿ ಸಾಮಾನು, ಹಣ್ಣು- ಹಂಪಲು ಖರೀದಿಗೆ ಹೋದಾಗ ಯಾವ ತಪ್ಪನ್ನು ಮಾಡಬಾರದು..?

ಪ್ರತಿದಿನ ಒಂದು ಸ್ಪೂನ್ ಚೀಯಾಸೀಡ್ಸ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

- Advertisement -

Latest Posts

Don't Miss