Health: ಹಲವು ಡ್ರೈಫ್ರೂಟ್ಸ್‌ನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಖರ್ಜೂರವನ್ನ ಕೂಡ ನೆನೆಸಿ ತಿನ್ನಬೇಕು ಎನ್ನುವ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹಾಗಾಗಿ ಇಂದು ನಾವು ರಾತ್ರಿ ಖರ್ಜೂರವನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲ ಲಾಭವಾಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ನಿಮ್ಮ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗಬೇಕು. ಕಬ್ಬಿಣ, ಕ್ಯಾಲ್ಶಿಯಂ ಪ್ರಮಾಣ ಹೆಚ್ಚಾಗಬೇಕು ಅಂದ್ರೆ, ನೀವು ಪ್ರತಿದಿನ ಎರಡಾದರೂ ಖರ್ಜೂರ ಸೇವಿಸಬೇಕು. ಅದರಲ್ಲೂ ನೆನೆಸಿಟ್ಟ ಖರ್ಜೂರದ ಸೇವನೆ ತುಂಬಾ ಉತ್ತಮವಾಗಿರುತ್ತದೆ. ಕೂದಲಿನ ಆರೋಗ್ಯ ,ಸೌಂದರ್ಯ ಅಭಿವೃದ್ಧಿ ಆಗಬೇಕು ಅಂದ್ರೆ ಖರ್ಜೂರದ ಸೇವನೆ ಮಾಡಬೇಕು.
ಹೃದಯದ ಆರೋಗ್ಯ ಕಾಪಾಡುವಲ್ಲಿ, ದೇಹಕ್ಕೆ ಶಕ್ತಿ ಒದಗಿಸುವಲ್ಲಿ ಖರ್ಜೂರ ಸಹಕಾರಿಯಾಗಿದೆ. ಜೀರ್ಣಕ್ರಿಯೆ ಉತ್ತಮವಾಗಿರಲು ಖರ್ಜೂರ ಸಹಾಯಕವಾಗಿದೆ. ನೆನೆಸಿಟ್ಟ ಖರ್ಜೂರ ಸೇವನೆಯಿಂದ ಮಲವಿಸರ್ಜನೆ ಸರಿಯಾಗಿ ಆಗುತ್ತದೆ. ಮೂಳೆಯ ಆರೋಗ್ಯ ಉತ್ತಮವಾಗಿರುತ್ತದೆ. ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ. ತೂಕ ಸರಿಯಾಗಿ ಇರಿಸುವಲ್ಲಿ ಖರ್ಜೂರ ಸಹಕಾರಿಯಾಗಿದೆ.
ಆದರೆ ಮುಖ್ಯವಾದ ವಿಚಾರ ಅಂದ್ರೆ, ಖರ್ಜೂರವನ್ನು ಎರಡಕ್ಕಿಂತ ಹೆಚ್ಚು ಸೇವಿಸಿದರೆ, ದೇಹದಲ್ಲಿ ಉಷ್ಣತೆ ಹೆಚ್ಚಾಗಿ, ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಹೊಟ್ಟೆ ನೋವು ಉಂಟಾಗುತ್ತದೆ. ಚಿಕ್ಕ ಮಕ್ಕಳಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1 ಖರ್ಜೂರ ಮತ್ತು 1ಗ್ಲಾಸ್ ಬಿಸಿ ಹಾಲು ಕೊಟ್ಟರೆ, ಮಕ್ಕಳು ಶಕ್ತಿಯುತವಾಗಿ ಇರುತ್ತಾರೆ.
ಕಿರಾಣಿ ಸಾಮಾನು, ಹಣ್ಣು- ಹಂಪಲು ಖರೀದಿಗೆ ಹೋದಾಗ ಯಾವ ತಪ್ಪನ್ನು ಮಾಡಬಾರದು..?
ಪ್ರತಿದಿನ ಒಂದು ಸ್ಪೂನ್ ಚೀಯಾಸೀಡ್ಸ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?