Health tips: ನಮ್ಮಲ್ಲಿ ಸಿಗುವ ತರಹೇವಾರಿ ಸೊಪ್ಪುಗಳು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಒಂದು ದಿನ ಒಂದೊಂದು ಸೊಪ್ಪು ಬಳಸಿದರೂ, ನಮ್ಮ ಆರೋಗ್ಯ ಅತ್ಯುತ್ತಮವಾಗಿ ಇರುತ್ತದೆ. ಆದರೆ ದಕ್ಷಿಣ ಭಾರತದಲ್ಲಿ ಹೆಚ್ಚಿನ ಜನ ಸಾಸಿವೆ ಸೊಪ್ಪಿನ ಬಳಕೆ ಮಾಡುವುದಿಲ್ಲ. ಆದರೆ ಉತ್ತರ ಭಾರತದಲ್ಲಿ ಸಾಸಿವೆ ಸೊಪ್ಪನ್ನು ಹೆಚ್ಚು ಬಳಸುತ್ತಾರೆ. ಹಾಗಾದ್ರೆ ಸಾಸಿವೆ ಸೊಪ್ಪಿನ ಪದಾರ್ಥ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಮತ್ತು ನಷ್ಟಗಳೇನು ಅಂತಾ ತಿಳಿಯೋಣ ಬನ್ನಿ..
ಸಾಸಿವೆ ಸೊಪ್ಪು ಜೀರ್ಣವಾಗಲು ಹೆಚ್ಚು ಹೊತ್ತು ತೆಗೆದುಕೊಳ್ಳುತ್ತದೆ. ಹಾಗಾಗಿ ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವವರಿಗೆ ಇದು ಸುಲಭವಾಗಿ ಜೀರ್ಣವಾಗುವುದಿಲ್ಲ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ನೀವು ಕುಳಿತು ಕೆಲಸ ಮಾಡುವವರಾಗಿದ್ದರೆ, ಸಾಸಿವೆ ಸೊಪ್ಪಿನ ಪದಾರ್ಥವನ್ನು ಕೊಂಚವೇ ಸೇವಿಸಬೇಕು.
ಇದು ಜೀರ್ಣವಾಗಲು ತುಂಬ ಹೊತ್ತು ತೆಗೆದುಕೊಂಡರೂ, ಮಲವಿಸರ್ಜನೆಗೆ ಸಹಕಾರಿಯಾಗಿದೆ. ಸಾಸಿವೆ ಸೊಪ್ಪಿನ ಸೇವನೆ ಎಂಥವರು ಮಾಡಬೇಕು ಅಂದ್ರೆ, ಮಲವಿಸರ್ಜನೆಯಾಗದೇ ಇರುವವರು ಈ ಸೊಪ್ಪಿನ ಪದಾರ್ಥ ಮಾಡಿ ಸೇವಿಸಬೇಕು. ಅದೇ ದಿನಕ್ಕೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ಬಾರಿ ಮಲ ವಿಸರ್ಜನೆಯಾಗುತ್ತಿದ್ದರೆ, ಅಂಥವರು ಸಾಸಿವೆ ಸೊಪ್ಪಿನ ಪದಾರ್ಥ ಸೇವಿಸಬಾರದು.
ಸಾಸಿವೆ ಸೊಪ್ಪಿನ ಪದಾರ್ಥ ಮಾಡಿದಾಗ, ಅದರ ಎಲೆಯ ರುಚಿಯೇ ತುಂಬಾ ಚೆನ್ನಾಗಿರುತ್ತದೆ. ಇದಕ್ಕೆ ಇನ್ನಷ್ಟು ಉಪ್ಪು ಖಾರ, ಎಣ್ಣೆ ಸೇರಿ, ಗೊಜ್ಜು ತಯಾರಿಸಿದಾಗ, ಈ ಗೊಜ್ಜು ಇನ್ನೂ ರುಚಿಯಾಗಿರುತ್ತದೆ. ಹಾಗಾಗಿ ಇದನ್ನು ತಿನ್ನುವವರು, ರುಚಿ ಎಂದು ಹೆಚ್ಚು ತಿಂದುಬಿಡುತ್ತಾರೆ. ಕೆಲವರು ಫ್ರಿಜ್‌ನಲ್ಲಿರಿಸಿ, ಎರಡು ಮೂರು ದಿನ ತಿನ್ನುತ್ತಾರೆ. ಹಾಗಾಗಿಯೇ ಇದು ಬೇಗ ಜೀರ್ಣವಾಗುವುದಿಲ್ಲ. ಹಾಗಾಗಿ ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು.
ಇನ್ನು ಅಗತ್ಯಕ್ಕಿಂತ ಸಾಸಿವೆ ಸೊಪ್ಪಿನ ಪದಾರ್ಥ ತಿನ್ನುವುದರಿಂದ ವಯಸ್ಸಿಗಿಂತ ಮೊದಲು, ಕೂದಲು ಬಿಳಿಯಾಗುತ್ತದೆ. ಮರೆವಿನ ಖಾಯಿಲೆ, ಕಡಿಮೆ ಬುದ್ಧಿವಂತಿಕೆ ಹೀಗೆ ಹಲವಾರು ಖಾಯಿಲೆಗೆ ಗುರಿಯಾಗಬೇಕಾಗುತ್ತದೆ. ಇದನ್ನು ಮಿತವಾಗಿ ಸೇವಿಸಬೇಕು. ಮತ್ತು ಯಾರು ಇದನ್ನು ಸೇವಿಸಬೇಕು ಎಂದರೆ, ಹೆಚ್ಚು ಪರಿಶ್ರಮದ ಕೆಲಸ ಮಾಡುವವರು ಸೇವಿಸಿದರೆ ಉತ್ತಮ.
ಗೋಧಿ ಬಳಕೆಯಿಂದ ಆರೋಗ್ಯಕ್ಕಾಗುವ ಲಾಭವೇನು..? ಅತಿಯಾಗಿ ಚಪಾತಿ ತಿಂದರೆ ಏನಾಗತ್ತೆ..?

