Monday, December 23, 2024

Latest Posts

ಈ 5 ಅಭ್ಯಾಸವೇ ನಿಮ್ಮ ಸಮಯವನ್ನು ಹಾಳು ಮಾಡುತ್ತದೆ..

- Advertisement -

Life Lessons: ನಾವು ಯಾವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತೇವೋ, ಆ ಅಭ್ಯಾಸದಿಂದಲೇ ನಮ್ಮ ಜೀವನ ಉದ್ಧಾರವಾಗುವುದು ಮತ್ತು ಉದ್ಧಾರವಾಗದಿರುವುದು ನಿರ್ಧರಿತವಾಗುತ್ತದೆ. ಹಾಗಾಗಿ ಉತ್ತಮ ಅಭ್ಯಾಸವನ್ನೇ ಮನುಷ್ಯ ರೂಢಿಸಿಕೊಳ್ಳಬೇಕು ಅಂತಾ ಹೇಳುವುದು. ಆದರೆ ಕೆಲವು ಅಭ್ಯಾಸಗಳು, ನಾವು ಅಂದುಕೊಳ್ಳದೇ, ರೂಢಿಯಾಗಿಬಿಡುತ್ತದೆ. ಅಂಥ ಅಭ್ಯಾಸವೇ ನಮ್ಮ ಸಮಯವನ್ನು ಹಾಳು ಮಾಡುತ್ತದೆ. ಹಾಗಾದ್ರೆ ಯಾವುದು ಆ ಅಭ್ಯಾಸಗಳು ಅಂತಾ ತಿಳಿಯೋಣ ಬನ್ನಿ..

ಮೊದಲನೇಯದಾಗಿ ನಿಮ್ಮ ಜೀವನದ ಬಗ್ಗೆ, ನಿಮ್ಮ ಗುರಿಯ ಬಗ್ಗೆ ನಿರ್ಲಕ್ಷ್ಯದಿಂದಿರುವುದು. ಮರೆತು ಹೋಗುವುದು. ಮನುಷ್ಯ ಎಂದಮೇಲೆ ಮರೆಯುವುದು ಸಾಮಾನ್ಯ. ಆದರೆ ಆ ಮರೆವು ನಿಮ್ಮ ಜೀವನದ ಹಲವು ಸಮಯವನ್ನು ಹಾಳು ಮಾಡಿದರೆ, ನಿಮ್ಮ ಯಶಸ್ಸು ನಿಧಾನಗತಿಯಲ್ಲಿ ಇರುತ್ತದೆ. ಪ್ರತಿದಿನ ಧ್ಯಾನ ಮಾಡಿದರೆ, ನಿಮ್ಮ ಮರೆವಿನ ಗುಣವನ್ನು ಕಡಿಮೆ ಮಾಡಬಹುದು. ಅಲ್ಲದೇ, ನಿಮ್ಮ ಜೀವನದ ಬಗ್ಗೆ ನೀವು ನಿರ್ಲಕ್ಷ್ಯ ವಹಿಸಿದರೆ, ನಿಮ್ಮ ಗುರಿ ತಲುಪಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಿರ್ಲಕ್ಷ್ಯ ಮಾಡದೇ, ಗುರಿಯೆಡೆಗೆ ಗಮನ ಕೊಡಿ.

ಎರಡನೇಯದಾಗಿ ಮಲ್ಟಿ ಟಾಸ್ಕಿಂಗ್. ಅಂದರೆ ಒಂದೇ ವೇಳೆ ಹಲವಾರು ಕೆಲಸದ ಭಾರವನ್ನು ಹೊರುವುದು. ಇದೇ ಗುಣ ಮನುಷ್ಯನನ್ನು ನಿಧಾನಗತಿಗೆ ತರುತ್ತದೆ. ನಿಮಗೆ ನಾನು ಒಂದೇ ಸಮಯಕ್ಕೆ ಹಲವು ಕೆಲಸಗಳನ್ನು ಮಾಡುತ್ತಿದ್ದೇನೆ ಎಂದು ಎನ್ನಿಸಬಹುದು. ಆದರೆ ಅದರಿಂದ ಯಾವುದೇ ಕೆಲಸ ಪರಿಪೂರ್ಣವಾಗುವುದಿಲ್ಲ. ಗೊಂದಲ ಉಂಟಾಗಿ ಯಾವ ಕೆಲಸವೂ ಪರ್ಫೆಕ್ಟ್ ಆಗಿ ಆಗುವುದಿಲ್ಲ. ಹಾಗಾಗಿ ಒಂದು ಕೆಲಸವನ್ನು ಸಂಪೂರ್ಣವಾಗಿ ಮುಗಿಸಿದ ಬಳಿಕವೇ, ಇನ್ನೊಂದು ಕೆಲಸಕ್ಕೆ ಕೈ ಹಾಕಿ.

ಮೂರನೇಯದಾಗಿ, ಮೊಬೈಲ್, ಟಿವಿ, ಕಂಪ್ಯೂಟರ್‌ನಲ್ಲಿ ಟೈಂ ಪಾಸ್ ಮಾಡುವುದು. ಮೊದಲೆಲ್ಲ ಟಿವಿ ನೋಡಿ ಟೈಂಪಾಸ್ ಮಾಡುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಮೊಬೈಲ್ ಬಂದಿದೆ. ಸಣ್ಣ ಮಕ್ಕಳಿಂದ, ಮುದುಕರವರೆಗೂ ಮೊಬೈಲ್‌ನಲ್ಲಿ ಎಲ್ಲರೂ ಬ್ಯುಸಿ ಇರುವವರೇ. ಅದರಲ್ಲೂ ಯುವ ಪೀಳಿಗೆಗಾಗಿ ತರಹೇವಾರಿ ಆ್ಯಪ್ಸ್, ಗೇಮ್ಸ್ ಇದೆ. ಹಾಗಾಗಿ ಯುವ ಪೀಳಿಗೆಯವರು, ಮೊಬೈಲ್ ಸ್ವೈಪ್ ಮಾಡುತ್ತಲೇ, ಟೈಂ ವೇಸ್ಟ್ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಿದರೆ, ಅರ್ಧ ದಿನದ ಸಮಯ ಸಿಗುತ್ತದೆ. ಆ ಸಮಯದಲ್ಲಿ ನೀವು ನಿಮಗೆ ಬೇಕಾದ ಕೆಲಸವನ್ನು ಮಾಡಬಹುದು.

ನಾಲ್ಕನೇಯದಾಗಿ ಬರೀ ಇನ್ನೊಬ್ಬರ ಬಗ್ಗೆ ಗಾಸಿಪ್ ಮಾಡಿಕೊಂಡಿರುವುದು. ಯುವ ಪೀಳಿಗೆಯವರು ಸಿನಿಮಾ, ರಾಜಕೀಯ, ಅಥವಾ ತಮ್ಮದೇ ಆಫೀಸು, ಕಾಲೇಜಿನಲ್ಲಿ ನಡೆದ ಗಾಸಿಪ್‌ಗಳ ಬಗ್ಗೆ ಮಾತನಾಡುತ್ತ, ಸಮಯ ವ್ಯರ್ಥ ಮಾಡುತ್ತಾರೆ. ಈ ಸಮಯವನ್ನು ಕೆಲಸಕ್ಕೆ ನೀಡಿದರೆ, ನೀವು ಉದ್ಧಾರವಾಗುತ್ತೀರಿ.

ಐದನೇಯದಾಗಿ ನಿಮ್ಮ ಕೆಲಸವನ್ನು ನೀವು ಮಾಡುವುದು ಬಿಟ್ಟು ಇನ್ನೊಬ್ಬರಿಗೆ ಹೇಳುವುದು. ನಮ್ಮ ನಮ್ಮ ಕೆಲಸವನ್ನು ನಾವು ಮಾಡಿದಾಗಲೇ, ಅದರಿಂದ ನಮಗೆ ನಾಲೆಜ್ ಸಿಗುತ್ತದೆ. ಆಗ ನಮ್ಮ ತಿಳುವಳಿಕೆ ಹೆಚ್ಚಿ, ನಾವು ಕೆಲಸದಲ್ಲಿ ನಿಪುಣರಾಗುತ್ತೇವೆ. ಅದೇ ಉದಾಸೀನ ಮಾಡಿ, ನಮ್ಮ ಕೆಲಸವನ್ನು ಇನ್ನೊಬ್ಬರಿಗೆ ವಹಿಸಿದರೆ, ಆ ಕೆಲಸದ ಲಾಭವನ್ನು ಅವರು ಪಡೆಯುತ್ತಾರೆ. ಆಗ ನಿಮ್ಮ ಯಶಸ್ಸಿಗೆ ಧಕ್ಕೆಯಾಗುತ್ತದೆ. ಈ ಕಾರಣಕ್ಕೆ ನಿಮ್ಮ ಕೆಲಸವನ್ನು ನೀವೇ ಮಾಡಿ.

ಕಿರಾಣಿ ಸಾಮಾನು, ಹಣ್ಣು- ಹಂಪಲು ಖರೀದಿಗೆ ಹೋದಾಗ ಯಾವ ತಪ್ಪನ್ನು ಮಾಡಬಾರದು..?

ಬರೀ ಕೆಲವೇ ಕೆಲವು ಜನ ಜೀವನದಲ್ಲಿ ಸಫಲರಾಗಲು ಕಾರಣವೇನು..?

ನಿಮ್ಮ ಇಚ್ಛಾಶಕ್ತಿ (Will Power) ಹೆಚ್ಚಿಸುವುದು ಹೇಗೆ..?

- Advertisement -

Latest Posts

Don't Miss