Friday, November 22, 2024

Latest Posts

ನಿಮ್ಮ ಮಕ್ಕಳು ಓದುವ ಕೋಣೆ ಹೀಗಿರಲಿ..

- Advertisement -

Tips: ಮೊದಲಿನ ಕಾಲದಲ್ಲಿ ಮಕ್ಕಳು ಅಪ್ಪ ಅಮ್ಮನ ಜೊತೆ, ಅಥವಾ ಅಜ್ಜ ಅಜ್ಜಿಯ ಜೊತೆ, ಅಥವಾ ಹಾಲ್‌ನಲ್ಲಿ ಸಹೋದರ ಸಹೋದರಿಯರ ಜೊತೆ ಚಾಪೆಯ ಮೇಲೆ ನೆಮ್ಮದಿಯಾಗಿ ಮಲಗುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಮಕ್ಕಳು ಚಿಕ್ಕವರಿರುವಾಗಲೇ, ಅಪ್ಪ ಅಮ್ಮ ಅವರಿಗಾಗಿ ಸ್ಪೆಶಲ್ ಮಾಸ್ಟರ್ ಬೆಡ್‌ರೂಂ ಕಟ್ಟಿಸಿರುತ್ತಾರೆ. ಅದರಲ್ಲಿ ಅಟ್ಯಾಚ್ಡ್ ಟಾಯ್ಲೆಟ್, ಬಾತ್‌ರೂಮ್, ವಾರ್ಡ್‌ರೋಬ್ ಎಲ್ಲವೂ ಇರುತ್ತದೆ. ಇದರೊಂದಿಗೆ ಮಕ್ಕಳಿಗೆ ಈ ಕೋಣೆ ಓದಲು ಕೂಡ ಅನುಕೂಲವಾಗಿರಬೇಕು. ಹಾಗಾದರೆ ಮಕ್ಕಳು ಓದುವ ಕೋಣೆ ಹೇಗಿರಬೇಕು ಅಂತಾ ತಿಳಿಯೋಣ ಬನ್ನಿ..

ಮೊದಲನೇಯದಾಗಿ ನೀವು ನಿಮ್ಮ ಮಕ್ಕಳಿಗಾಗಿ ಸಪರೇಟ್ ರೂಂ ಮಾಡಿಕೊಟ್ಟಿದ್ದೀರಿ ಎಂದರೆ, ಅವರಿಗೆ ಮೊಬೈಲ್ ಬಳಕೆ ಮಾಡಲು ಅವಕಾಶ ಕೊಡಬೇಡಿ. ಬೇಕಾದರೆ, ಹತ್ತು ನಿಮಿಷ ನಿಮ್ಮ ಮೊಬೈಲ್ ಕೊಡಿ. ಅದನ್ನು ಬಿಟ್ಟು ನೀವು ಅವರಿಗೆ ಸ್ಮಾರ್ಟ್ ಫೋನ್ ಖರೀದಿಸಿ ಕೊಟ್ಟರೆ, ನಿಮ್ಮ ಮಗು ವಿದ್ಯಾಭ್ಯಾಸದಲ್ಲಿ ಎಂದಿಗೂ ಮುಂದೆ ಬರಲು ಸಾಧ್ಯವಿಲ್ಲ. ಇನ್ನು ಲ್ಯಾಪ್‌ಟಾಪ್ ಅವಶ್ಯಕತೆ ಇದ್ದಲ್ಲಿ ಮಾತ್ರ, ಅದನ್ನು ಶೈಕ್ಷಣಿಕವಾಗಿ ಬಳಸುವುದಕ್ಕೆ ಅವಕಾಶ ಕೊಡಿ.

ಇನ್ನು ಎರಡನೇಯದಾಗಿ ಕತ್ತರಿ, ಚಾಕು, ಬ್ಲೇಡ್ ಇಂಥ ವಸ್ತುಗಳನ್ನು ರೂಮ್‌ನಲ್ಲಿ ಇರಿಸಬೇಡಿ. ಅದನ್ನು ಬಳಸುವಾಗ ಮಾತ್ರ, ಕೊಡಿ. ಅಥವಾ ನೀವೇ ಆ ವಸ್ತುವಿನ ಅವಶ್ಯಕತೆ ಇದ್ದಾಗ, ಬಳಸಲು ಸಹಾಯ ಮಾಡಿ. ಇಸ್ತ್ರೀ ಪೆಟ್ಟಿಗೆ, ಟೇಬಲ್ ಫ್ಯಾನ್ ಇವುಗಳೆಲ್ಲ ವಿದ್ಯುತ್‌ನಿಂದ ಬಳಸುವ ವಸ್ತುವಾಗಿರುವುದರಿಂದ ಇವುಗಳನ್ನು ರೂಮ್‌ನಲ್ಲಿ ಇರಿಸದೇ ಇರುವುದು ಒಳ್ಳೆಯದು. ಮಕ್ಕಳ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಟಿವಿ ಇರಿಸಬೇಡಿ. ಒಮ್ಮೆ ಟಿವಿಯ ಚಟ ಹಿಡಿದರೆ, ಮತ್ತೆ ಅದನ್ನು ಬಿಡಿಸುವುದು ಕಷ್ಟ.

ಅತಿಯಾದ Exercise ಒಳ್ಳೇದಲ್ಲ ಯಾಕೆ!?

ಪನೀರ್ ಸಮೋಸಾ ರೆಸಿಪಿ

ಹಲವು ದೇಶಗಳ ಡ್ರೈ ಫ್ರೂಟ್ಸ್ ಮತ್ತು ಖರ್ಜೂರಗಳು ಬೇಕೆಂದಲ್ಲಿ ಇಲ್ಲಿಗೆ ಬನ್ನಿ..

- Advertisement -

Latest Posts

Don't Miss