Health Tips: ಯಾವುದಾದರೂ ಸಾಂಬಾರ್ ಮಾಡಿದ್ರೆ, ಅದಕ್ಕೆ ಒಂದೇ ಒಂದು ನುಗ್ಗೇಕಾಯಿ ಹಾಕಿದ್ರೆ ಸಾಕು. ಅದರ ಪರಿಮಳ ಮತ್ತು ರುಚಿ ಅದ್ಭುತವಾಗಿರುತ್ತದೆ. ಸಾರಿನ ಘಮ ಮನೆ ತುಂಬ ಪಸರಿಸುತ್ತದೆ. ಇಂಥ ರುಚಿಕರ ತರಕಾರಿಯಲ್ಲಿಯೂ, ಹಲವು ಆರೋಗ್ಯಕರ ಗುಣಗಳಿದೆ. ಹಾಗಾದ್ರೆ ಅದೇನು..? ನುಗ್ಗೇಕಾಯಿ ಸೇವನೆಯಿಂದ ಆಗುವ ಆರೋಗ್ಯ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ನುಗ್ಗೇಕಾಯಿ ಸೇವನೆಯಿಂದ ದೇಹದಲ್ಲಿ ಕ್ಯಾಲ್ಶಿಯಂ ಸತ್ವ ಹೆಚ್ಚಾಗುತ್ತದೆ. ಇದರಿಂದ ನೀವು ಗಟ್ಟಿಮುಟ್ಟಾಗಿರುತ್ತೀರಿ. ಹಾಗಾಗಿ ವಾರಕ್ಕೊಮ್ಮೆಯಾದರೂ ನುಗ್ಗೇಕಾಯಿ ಸಾಂಬಾರ್ ಸೇವನೆ ಮಾಡಿ. ಮಕ್ಕಳಿಗೂ ವಾರಕ್ಕೊಮ್ಮೆ ನುಗ್ಗೇಕಾಯಿ ಪದಾರ್ಥ ಮಾಡಿಕೊಟ್ಟರೆ, ಗಟ್ಟಿಮುಟ್ಟಾಗಿ ಬೆಳೆಯುತ್ತಾರೆ.
ಗರ್ಭಿಣಿಯರು ಕೂಡ ವಾರಕ್ಕೊಮ್ಮೆ ನುಗ್ಗೇಕಾಯಿ ಸೇವನೆ ಮಾಡಬೇಕು. ಇದರಿಂದ ಮಗುವಿನ ಮೆದುಳಿನ ವಿಕಾಸ ಚೆನ್ನಾಗಿ ಆಗುತ್ತದೆ. ತಾಯಿ-ಮಗು ಇಬ್ಬರ ಆರೋಗ್ಯವೂ ಉತ್ತಮವಾಗಿರುತ್ತದೆ. ಡಯಟ್ ಮಾಡುವವರು ಕೂಡ ನುಗ್ಗೇಕಾಯಿ ಸೇವನೆ ಮಾಡಬೇಕು. ಇದರಿಂದ ದೇಹದ ತೂಕ ಇಳಿಯುತ್ತದೆ. ಲೈಂಗಿಕ ಸಮಸ್ಯೆ ಹೊಂದಿರುವ ಪುರುಷರು ನುಗ್ಗೇಕಾಯಿ ಸೇವನೆ ಮಾಡಿದರೆ ಉತ್ತಮ.
ಕೂದಲು ಉದುರುವ ಸಮಸ್ಯೆಯನ್ನ ಕೂಡ ತಡೆಗಟ್ಟುವಲ್ಲಿ ನುಗ್ಗೇಕಾಯಿ ಸಹಕಾರಿಯಾಗಿದೆ. ಅಲ್ಲದೇ, ನುಗ್ಗೇಕಾಯಿ ಸೇವನೆಯಿಂದ ಚರ್ಮ ಸುಕ್ಕುಗಟ್ಟುವುದಿಲ್ಲ. ನೀವು ಹೆಚ್ಚು ವಯಸ್ಸಾದವರಂತೆ ಕಾಣುವುದಿಲ್ಲ. ಹೈ ಬಿಪಿ ಇರುವವರಿಗೆ ನುಗ್ಗೇಕಾಯಿ ಸಹಕಾರಿಯಾಗಿದೆ. ರಕ್ತಶುದ್ಧಿಗೊಳಿಸುವುದಕ್ಕೂ ನುಗ್ಗೇಕಾಯಿ ಸಹಕಾರಿಯಾಗಿದೆ.
ಆಲಿವ್ ಎಣ್ಣೆ ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟು ಅತ್ಯುತ್ತಮ ಲಾಭಗಳಾಗುತ್ತದೆ ಗೊತ್ತಾ..?