Saturday, March 15, 2025

Latest Posts

ದೀಪ ಹಚ್ಚುವಾಗ ಈ ತಪ್ಪನ್ನು ಎಂದಿಗೂ ಮಾಡಬೇಡಿ..

- Advertisement -

Spiritual: ಕೆಲವರ ಮನೆಯಲ್ಲಿ ಪದೇ ಪದೇ ಜಗಳವಾಗುತ್ತದೆ. ಆರ್ಥಿಕ ಸಂಕಷ್ಟ ಬರುತ್ತದೆ. ಆಗಾಗ ಮನೆ ಜನರಿಗೆ ರೋಗ ರುಜಿನಗಳು ಬರುತ್ತದೆ. ಒಟ್ಟಿನಲ್ಲಿ ನೆಮ್ಮದಿಯೇ ಇಲ್ಲದಂತಾಗಿರುತ್ತದೆ. ಅದಕ್ಕೆಲ್ಲ ಕಾರಣ ಅವರು ಪಾಲಿಸದ ಕೆಲ ನಿಯಮಗಳಾಗಿರುತ್ತದೆ. ಅದರಲ್ಲೂ ದೇವರ ವಿಷಯದಲ್ಲಿ ನಾವು ಮುಂಜಾಗೃತೆ ವಹಿಸಿ, ಎಲ್ಲ ನಿಯಮಗಳನ್ನು ಪಾಲಿಸಬೇಕು. ಹಾಗಾಗಿ ಇಂದು ನಾವು ದೀಪ ಹಚ್ಚುವಾಗ ಯಾವ ತಪ್ಪು ಮಾಡಬಾರದು ಅಂತಾ ಹೇಳಲಿದ್ದೇವೆ.

ಬೆಳಗ್ಗಿನ ಹೊತ್ತು ಮತ್ತು ಮುಸ್ಸಂಜೆ ಹೊತ್ತು ದೇವರಿಗೆ ದೀಪ ಹಚ್ಚಬೇಕು ಎಂಬ ನಿಯಮವಿದೆ. ದೀಪ ಹಚ್ಚುವ ವೇಳೆ ನಾವು ಕೆಲ ನಿಯಮಗಳನ್ನು ಅನುಸರಿಸಬೇಕು. ಅದು ಏನೆಂದರೆ, ಮೊದಲು ಹಣತೆಗೆ ಎಣ್ಣೆ ಹಾಕಿ, ಬಳಿಕ ಬತ್ತಿಯನ್ನು ಇರಿಸಬೇಕು. ಬತ್ತಿಯನ್ನು ಮೊದಲು ಇಟ್ಟು, ಎಣ್ಣೆ ಹಾಕಬಾರದು. ಇನ್ನು ಎರಡು ಬತ್ತಿಯನ್ನೇ ಬಳಸಬೇಕು. ಅಥವಾ ನಾಲ್ಕು ಬತ್ತಿ ಬಳಸಿ. ಯಾವುದೇ ಕಾರಣಕ್ಕೂ ಒಂದು ಮತ್ತು 3 ಬತ್ತಿಯನ್ನು ಬಳಸಬೇಡಿ.

ಇನ್ನು ದೇವರಿಗೆ ತುಪ್ಪದ ದೀಪ, ಎಳ್ಳೆಣ್ಣೆ ದೀಪ, ತೆಂಗಿನ ಎಣ್ಣೆಯ ದೀಪವನ್ನು ಹಚ್ಚಬೇಕು. ಕಲಬೆರಕೆ ಎಣ್ಣೆಯನ್ನು ಬಳಸಿ, ದೀಪ ಹಚ್ಚಿದರೆ ಏನೂ ಪ್ರಯೋಜನವಿಲ್ಲ. ಹಾಗಾಗಿ ನೀವು ದೀಪ ಹಚ್ಚುವಾಗ ಎಣ್ಣೆ ಶುದ್ಧವಾಗಿರಲಿ. ಇನ್ನು ನೀವು ತುಪ್ಪದ ದೀಪ ಹಚ್ಚುವುದ್ದರೆ, ಹಸುವಿನ ತುಪ್ಪದಿಂದಲೇ ದೀಪ ಹಚ್ಚಬೇಕು. ಮೇಕೆಯ ಹಾಲು ಅಥವಾ ಎಮ್ಮೆಯ ಹಾಲಿನಿಂದ ಮಾಡಿದ ತುಪ್ಪದಿಂದ ಎಂದಿಗೂ ದೀಪ ಹಚ್ಚಲಾಗುವುದಿಲ್ಲ.

ಇನ್ನು ದೀಪ ಹಚ್ಚುವಾಗ ಯಾವ ರೀತಿಯ ಹಣತೆ ಬಳಸಬೇಕು ಎಂದರೆ, ಮಣ್ಣಿನ ಹಣತೆ, ಬೆಳ್ಳಿಯ ಹಣತೆ, ಹಿತ್ತಾಳೆ ಹಣತೆಯನ್ನು ಬಳಸಬಹುದು. ಅದನ್ನು ಬಿಟ್ಟು ಸ್ಟೀಲ್ ಹಣತೆ ಬಳಸುವ ತಪ್ಪು ಎಂದಿಗೂ ಮಾಡಬೇಡಿ. ಇದರಿಂದ ಮನೆಗೆ ದರಿದ್ರ ಸಂಭವಿಸುತ್ತದೆ.

ಕಹಿ ಬೇವಿನ ಎಲೆಯನ್ನು ಸಿಹಿ ಬೇವಾಗಿ ಮಾರ್ಪಾಡು ಮಾಡಿದ್ದರಂತೆ ಶಿರಡಿ ಸಾಯಿಬಾಬಾ

ಹಲ್ಲಿಗಳು ಜಗಳವಾಡುತ್ತಿದ್ದರೆ ಏನರ್ಥ..? ಏನಿದರ ಸೂಚನೆ..?

ಎಂಥ ಹೂವುಗಳನ್ನು ದೇವರಿಗೆ ಹಾಕಬಾರದು..?

- Advertisement -

Latest Posts

Don't Miss