Health Tips: ದಾಳಿಂಬೆ ಹಣ್ಣನ್ನು ಸೇವಿಸುವುದನ್ನು ಹಲವರು ಇಷ್ಟಪಡುವುದಿಲ್ಲ. ಯಾಕಂದ್ರೆ ದಾಳಿಂಬೆ ಹಣ್ಣಿನ ಸಿಪ್ಪೆ ತೆಗೆದು, ಅದರ ಕಾಳುಗಳನ್ನು ಬಿಡಿಸಿ ತಿನ್ನುವುದೇ ಉದಾಸೀನದ ಕೆಲಸ. ಹಾಗಾಗಿ ದಾಳಿಂಬೆಯನ್ನು ಹೆಚ್ಚಿನವರು ಬಳಸುವುದಿಲ್ಲ. ಆದರೆ ದಾಳಿಂಬೆ ಹಣ್ಣಿನ ಸೇವನೆಯಿಂದ ನಮಗೆ ಅತ್ಯದ್ಭುತ ಆರೋಗ್ಯ ಲಾಭಗಳಾಗುತ್ತದೆ. ಅದೇನು ಅಂತಾ ತಿಳಿಯೋಣ ಬನ್ನಿ..
ದಾಳಿಂಬೆ ಹಣ್ಣಿನ ಸೇವನೆಯಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿ ಗರ್ಭಿಣಿಯರು ದಾಳಿಂಬೆ ಹಣ್ಣಿನ ಸೇವನೆ ಮಾಡಿದರೆ, ಮಗುವಿನ ಮೆದುಳಿನ ಬೆಳವಣಿಗೆ ಅತ್ಯುತ್ತಮವಾಗಿ ಆಗುತ್ತದೆ ಎಂದು ಹೇಳುತ್ತಾರೆ. ಅಲ್ಲದೇ, ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿಯೂ ದಾಳಿಂಬೆ ಸಹಕಾರಿಯಾಗಿದೆ. ದೇಹದಲ್ಲಿ ಶಕ್ತಿಯೇ ಇಲ್ಲವೆಂದೆನಿಸಿದಾಗ, ದಾಳಿಂಬೆ ಹಣ್ಣು ಅಥವಾ ದಾಳಿಂಬೆ ಜ್ಯೂಸ್ ಕುಡಿದರೆ, ಚೈತನ್ಯದಿಂದ ಕೂಡಿರುತ್ತೀರಿ. ಏಕೆಂದರೆ ದಾಳಿಂಬೆಯಲ್ಲಿ ವಿಟಾಮಿನ್ ಸಿ ಇದೆ. ಇದು ದೇಹಕ್ಕೆ ಬೇಗ ಶಕ್ತಿ ನೀಡಲು ಸಹಕಾರಿಯಾಗಿದೆ.
ವಾರದಲ್ಲಿ ಮೂರು ಬಾರಿಯಾದರೂ ದಾಳಿಂಬೆ ಹಣ್ಣು ಅಥವಾ ಅದರ ರಸದ ಸೇವನೆ ಮಾಡಿದರೆ, ನಿಮ್ಮ ತ್ವಚೆಯಲ್ಲಿ ಕಳೆ ಬರುತ್ತದೆ. ಮೊಡವೆ, ಮೊಡವೆ ಕಲೆ ಇದ್ದಲ್ಲಿ, ಅದು ಕೂಡ ಕ್ಲೀನ್ ಆಗಿ, ಮುಖದ ಅಂದ ಹೆಚ್ಚಾಗುತ್ತದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ತೆಗೆದು ಹಾಕಿ, ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಲು ದಾಳಿಂಬೆ ಸಹಕಾರಿಯಾಗಿದೆ. ಹಾಗಾಗಿ ದಾಳಿಂಬೆ ಸೇವನೆಯಿಂದ, ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ.
ದೇಹದಲ್ಲಿ ರಕ್ತ ಕಡಿಮೆಯಾಗಿದೆ ಅಂತಾದರೆ, ದಾಳಿಂಬೆ ರಸ ಕುಡಿಯಿರಿ. ಇದರಿಂದ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ಕಣ್ಣಿನ ಆರೋಗ್ಯ ಅತ್ಯುತ್ತಮವಾಗಿರಬೇಕು. ಎಷ್ಟು ವಯಸ್ಸಾದರೂ ನಿಮ್ಮ ಕಣ್ಣು ಸರಿಯಾಗಿ ಕಾಣಬೇಕು ಅಂದ್ರೆ, ನೀವು ದಾಳಿಂಬೆ ಹಣ್ಣಿನ ಸೇವನೆ ಮಾಡಬೇಕು. ಅಲ್ಲದೇ, ನೀವು ಬೇಗ ವಯಸ್ಸಾದವರಂತೆ ಕಾಣಬಾರದು ಅಂದರರೂ ಕೂಡ, ದಾಳಿಂಬೆ ಹಣ್ಣಿನ ಸೇವನೆ ಮಾಡಬೇಕು. ಅಥವಾ ದಾಳಿಂಬೆ ಜ್ಯೂಸ್ ಕುಡಿಯಬೇಕು.
ನಮ್ಮ ದೇಹದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಲೇಬೇಕಾದ ದೇಹದ ಭಾಗವೆಂದರೆ, ಹೃದಯ, ಕಿಡ್ನಿ, ಜೀರ್ಣಕ್ರಿಯೆಯ ಭಾಗ. ಜೀರ್ಣಕ್ರಿಯೆ ಉತ್ತಮವಾಗಿ ಆಗಬೇಕು ಅಂದ್ರೆ ದಾಳಿಂಬೆ ಹಣ್ಣನ್ನು ಸೇವಿಸಬೇಕು. ಇದರಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಹೊಟ್ಟೆನೋವಿನ ಸಮಸ್ಯೆ ಬರದಂತೆ ತಡೆಯುತ್ತದೆ.
ಅಕ್ಕಿ ತೊಳೆದ ನೀರನ್ನು ಬಳಸುವುದರಿಂದ ಎಷ್ಟೆಲ್ಲ ಚಮತ್ಕಾರಿ ಉಪಯೋಗವಿದೆ ಗೊತ್ತಾ..?




