Tuesday, October 7, 2025

Latest Posts

ಪಾದರಕ್ಷೆ ಧರಿಸಿದಾಗ, ಅಲರ್ಜಿಯಾಗೋಕ್ಕೆ ಕಾರಣವೇನು..?

- Advertisement -

Health Tips: ಹಲವರಿಗೆ ಹೊಸ ಚಪ್ಪಲಿ ಧರಿಸಿದಾಗ, ಅಥವಾ ಚರ್ಮದ ಚಪ್ಪಲಿ ಧರಿಸಿದಾಗ, ಅಥವಾ ಯಾವುದೇ ಚಪ್ಪಲಿ, ಶೂಸ್ ಧರಿಸಿದಾಗ, ಅಲರ್ಜಿಯಾಗುತ್ತದೆ. ಗುಳ್ಳೆ, ಗಾಯಗಳಾಗುತ್ತದೆ. ಹಾಗಾದ್ರೆ ಯಾಕೆ ಹಾಗೆ ಆಗುತ್ತದೆ..? ಕಾಲಿಗೆ ಅಲರ್ಜಿಯಾಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..

ವೈದ್ಯರಾದ ಡಾ.ಕಿಶೋರ್ ಪ್ರಕಾರ, ಯಾರು ಚಪ್ಪಲಿ, ಶೂಸ್‌ ಧರಿಸದೇ, ಓಡಾಡಲು ಯಾರು ಅಭ್ಯಾಸ ಮಾಡುತ್ತಾರೋ. ಅಂಥವರು ಪಂಚಭೂತಗಳಿಗೆ ಹತ್ತಿರವಾಗ್ತಾರಂತೆ. ಪೃಥ್ವಿ, ವಾಯು, ಅಗ್ನಿ, ನೀರು , ಆಕಾಶ ಇವು ಪಂಚಭೂತಗಳು. ಇವುಗಳ ಶಕ್ತಿ ಬೇಕಾಗಿದ್ದಲ್ಲಿ, ನಿಮ್ಮ ಆರೋಗ್ಯ ಅತ್ಯುತ್ತಮವಾಗಿರಬೇಕು ಅಂದ್ರೆ, ನೀವು ಬರೀಗಾಲಿನಲ್ಲಿ ಓಡಾಡಲು ಕಲಿಯಬೇಕು.

ಆದರೆ ಎಲ್ಲರೂ ಚಪ್ಪಲಿ ಹಾಕದೇ, ಓಡಾಡಬಾರದು. ಅದು ಯಾರು ಅಂದ್ರೆ, ಸಕ್ಕರೆ ಖಾಯಿಲೆ ಇದ್ದವರು. ಶುಗರ್ ಇದ್ದವರು ಚಪ್ಪಲಿ ಹಾಕದೇ ಓಡಾಡಬಾರದು. ಆದರೆ ನೀವು ಚಪ್ಪಲಿ ಹಾಕುವುದಿದ್ದರೂ, ಲೂಸ್ ಆಗಿರುವ ಗಾಳಿಯಾಡುವ ಶೂಸ್ ಧರಿಸಬೇಕು. ಆಗ ಕೊಂಚವಾದರೂ ಆ ಚಪ್ಪಲಿ ಹಾಕಿ, ಉಪಯೋಗವಾಗುತ್ತದೆ. ಆದರೆ ಕೆಲವರು ಸಾಕ್ಸ್ ಆಗಿ, ಅದರ ಮೇಲೆ ಶೂಸ್ ಹಾಕುತ್ತಾರೆ. ಹೀಗೆ ಹಾಕುವ ಸಾಕ್ಸ್ ಮತ್ತು ಶೂಸ್‌ನ್ನು ನೀವು ಕ್ಲೀನ್ ಆಗಿ ಇರಿಸಬೇಕು. ಇಲ್ಲವಾದಲ್ಲಿ, ನಿಮ್ಮ ಕಾಲಿಗೆ ಅಲರ್ಜಿಯಾಗುವುದು ಖಚಿತ.

ಏಕೆಂದರೆ, ಕಾಲಿನ ಭಾಗದ ಚರ್ಮಕ್ಕೆ ಉಸಿರಾಡುವ ಅವಕಾಶವೇ ಕೊಡುವುದಿಲ್ಲ. ಸಾಕ್ಸ್ ಮತ್ತು ಶೂಸ್ ಹಾಕಿ, ಕಾಲಿನ ಭಾಗ ಮುಚ್ಚಿಬಿಟ್ಟಿರುತ್ತೇವೆ. ಅದರಿಂದಲೇ ಅಲರ್ಜಿಯಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..

ಬಿಸಿ ಬಿಸಿ ನೀರಿನ ಸ್ನಾನ ಮಾಡುವುದರಿಂದ ಹೃದಯಾಘಾತವಾಗುತ್ತದೆಯಾ..?

ನುಗ್ಗೇಕಾಯಿ ಸೇವನೆಯಿಂದ ಆಗುವ ಆರೋಗ್ಯ ಲಾಭಗಳೇನು..?

ಅಕ್ಕಿ ತೊಳೆದ ನೀರನ್ನು ಬಳಸುವುದರಿಂದ ಎಷ್ಟೆಲ್ಲ ಚಮತ್ಕಾರಿ ಉಪಯೋಗವಿದೆ ಗೊತ್ತಾ..?

- Advertisement -

Latest Posts

Don't Miss