Wednesday, October 15, 2025

Latest Posts

ದಾನ ಮಾಡುವಾಗ ಇಂಥ ತಪ್ಪು ಮಾಡಬೇಡಿ, ಇಂಥ ವಸ್ತುಗಳನ್ನು ದಾನ ಮಾಡಬೇಡಿ..

- Advertisement -

Spiritual: ದಾನ ಮಾಡುವುದು ಒಳ್ಳೆಯ ವಿಷಯ. ಚಾಣಕ್ಯರು ಹೇಳುವ ಪ್ರಕಾರ, ನಾವು ದುಡಿದ ಹಣದಲ್ಲಿ ಕೊಂಚ ಅವಶ್ಯಕತೆಗೆ ಖರ್ಚು ಮಾಡಬೇಕು. ಹೆಚ್ಚಿನ ದುಡ್ಡು ಉಳಿತಾಯ ಮಾಡಬೇಕು. ಮತ್ತೆ ಕೊಂಚ ದುಡ್ಡು ದಾನ ಮಾಡಬೇಕು ಎಂದಿದ್ದಾರೆ. ಆದರೆ, ದಾನ ಮಾಡುವಾಗ ಕೆಲ ತಪ್ಪುಗಳನ್ನು ನಾವು ಮಾಡಬಾರದು ಅನ್ನೋ ನಿಯಮಗಳೂ ಇದೆ. ಹಾಗಾದ್ರೆ ದಾನ ಮಾಡುವಾಗ ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ..

ದಾನ ಮಾಡಿ ದರಿದ್ರನಾಗಬೇಡ ಎಂದು ಹಿರಿಯರು ಹೇಳಿದ್ದಾರೆ. ಈ ಮಾತನ್ನು ಯಾಕೆ ಹೇಳಿರುವುದೆಂದರೆ, ಕರುಣೆಯ ಗುಣ ಹೆಚ್ಚಾದರೆ, ಅದು ನಮ್ಮ ಜೀವನವನ್ನೇ ನಾಶ ಮಾಡುತ್ತದೆ. ಆ ಕರುಣೆಯಿಂದಲೇ ನಾವು ನಮ್ಮ ಬಳಿ ಇದ್ದುದ್ದನ್ನೆಲ್ಲ ದಾನ ಮಾಡುತ್ತೇವೆ. ಇದರಿಂದಲೇ ಮನುಷ್ಯ ದರಿದ್ರನಾಗುತ್ತಾನೆ.

ಯಾವಾಗ ದಾನ ಮಾಡಬೇಕು..? ಇನ್ನು ನೀವು ಯಾವಾಗ ದಾನ ಮಾಡಬೇಕು ಎಂದರೆ, ನಿಮ್ಮಲ್ಲಿಯೂ ದಾನ ಮಾಡಿ ಮಿಕ್ಕಿದ ಹಣವಿರಬೇಕು. ಅದರಿಂದ ನೀವು ಜೀವನ ಸಾಗಿಸಲು ಸಮರ್ಥರಾಗಿರಬೇಕು. ಆಗ ನೀವು ದಾನ ಮಾಡಬೇಕು. ಇರುವ ಹಣವನ್ನೆಲ್ಲ ದಾನ ಮಾಡಿದ್ರೆ, ಮನುಷ್ಯ ದರಿದ್ರನಾಗೇ ಆಗುತ್ತಾನೆ.

ದಾನ ಮಾಡುವ ಸಾಮರ್ಥ್ಯವಿದ್ದಲ್ಲಿ ಮಾತ್ರ ದಾನ ಮಾಡಿ. ಇನ್ನು ಶ್ರೀಮಂತಿಕೆ ಇದ್ದರೂ, ಜಿಪುಣತನ ಮಾಡಿದರೆ, ಹಾಗೆ ಕಂಜೂಸುತನ ಮಾಡಿ, ಕೂಡಿಟ್ಟ ದುಡ್ಡು ಕೊನೆಗೆ ಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ. ಹಾಗಾಗಿ ಶ್ರೀಮಂತಿಕೆ ಇದ್ದರೆ, ಉದಾರ ಮನಸ್ಸಿನಿಂದ ದೀನರಿಗೆ ದಾನ ಮಾಡಿ.

ಯಾವ ರೀತಿಯ ದಾನ ಮಾಡಬೇಕು..? ದಾನದಲ್ಲೇ ಉತ್ತಮ ದಾನ ಅಂದ್ರೆ, ಅನ್ನದಾನ ಮತ್ತು ವಿದ್ಯಾದಾನ.  ವಿದ್ಯೆ ಕಲಿಯುವ ಸಾಮರ್ಥ್ಯವಿರುವವರಿಗೆ ವಿದ್ಯಾದಾನ ಮಾಡಿದರೆ, ಪುಣ್ಯ ಲಭಿಸುತ್ತದೆ. ಇನ್ನು ಹಸಿದವರಿಗೆ ಅನ್ನದಾನ ಮಾಡಿದರೆ, ಅಂಥವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ. ಹಸಿದವರ ಹೊಟ್ಟೆ ತುಂಬಿಸುವುದಕ್ಕಿಂತ ಇನ್ನೊಂದು ಪುಣ್ಯದ ಕೆಲಸ ಮತ್ಯಾವುದಿದೆ..?

ಇವುಗಳನ್ನು ದಾನ ಮಾಡಬೇಡಿ. ಇನ್ನು ಎಂಥ ವಸ್ತುಗಳನ್ನು ದಾನ ಮಾಡಬಾರದು ಅಂತಾ ಹೇಳಿದ್ರೆ, ಹಳಸಿದ ಆಹಾರ, ಹರಿದ ಬಟ್ಟೆ, ಬಳಸಿದ ಅಲ್ಯುಮಿನಿಯಂ ಪಾತ್ರೆ ಇಂಥವುಗಳನ್ನು ಎಂದಿಗೂ ದಾನ ಮಾಡಬೇಡಿ. ಇಂಥ ವಸ್ತುಗಳನ್ನು ದಾನ ಮಾಡುವುದರಿಂದ, ನಿಮ್ಮ ನೆಮ್ಮದಿಗೆ ಧಕ್ಕೆಯುಂಟಾಗುತ್ತದೆ.

ಈ ವಸ್ತುಗಳನ್ನು ಯಾರಿಗೂ ಕೊಡಬೇಡಿ.. ಹೀಗೆ ಮಾಡಿದ್ರೆ ನಿಮ್ಮ ಅದೃಷ್ಟ ಅವರ ಪಾಲಾಗುತ್ತದೆ..

ಪತಿ ಶ್ರೀಮಂತನಾಗಬೇಕು, ಉದ್ಧಾರವಾಗಬೇಕು ಅಂದ್ರೆ ಪತ್ನಿ ಈ ಕೆಲಸವನ್ನು ಮಾಡಬೇಕು..

ಮಂಗಳವಾರದ ದಿನ ಇಂಥ ಕೆಲಸಗಳನ್ನು ಮಾಡಬೇಡಿ.. ಇಲ್ಲದಿದ್ದಲ್ಲಿ ದರಿದ್ರತನ ಆವರಿಸುತ್ತದೆ..

- Advertisement -

Latest Posts

Don't Miss