ಬೇರೆಯವರಿಗೆ ಇರುವ ಈ 3 ಗುಣಗಳು ನಿಮ್ಮ ಜೀವನವನ್ನು ಹಾಳು ಮಾಡಬಹುದು..

Spiritual: ಬುದ್ಧಿವಂತರಾದವರು, ಎಲ್ಲರ ಮಾತನ್ನು ಕೇಳುತ್ತಾರೆ. ಆದರೆ ತಮ್ಮ ಮನಸ್ಸಿನ ಮಾತನ್ನು ಕೇಳುತ್ತಾರೆ. ತಮಗೆ ಒಳ್ಳೆಯದಾಗುವ ಕೆಲಸವನ್ನು ಮಾಡುತ್ತಾರೆ. ಆದರೆ ನೀವು ಬೇರೆಯವರ ಮಾತನ್ನು ಕೇಳಿ, ನಿಮ್ಮ ಜೀವನ ನಡೆಸುವವರು ಆಗಿದ್ದಲ್ಲಿ, ನಿಮ್ಮ ಜೀವನ ಹಳಿ ತಪ್ಪುವ ಸಾಧ್ಯತೆ ಇದೆ ಎಂದರ್ಥ. ಇಂದು ಇದೇ ವಿಷಯಕ್ಕೆ ಸಂಬಂಧಿಸಿದಂತೆ, ಬೇರೆಯವರಿಗೆ ಇರುವ 3 ಗುಣಗಳು ಹೇಗೆ ನಿಮ್ಮ ಜೀವನವನ್ನು ಹಾಳು ಮಾಡಬಹುದು ಅಂತಾ ತಿಳಿಯೋಣ ಬನ್ನಿ..

ನೀವು ಯಾವ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸುತ್ತಿದ್ದೀರಿ. ಅಥವಾ ಯಾವ ವ್ಯಕ್ತಿಯ ಸ್ನೇಹ ಮಾಡುತ್ತಿದ್ದೀರಿ ಎಂಬುದನ್ನು ಅರಿತಿರಬೇಕು. ಅವನ ಗುಣ ಸ್ವಭಾವವನ್ನು ತಿಳಿದಿರಬೇಕು. ಅವನು ಕೆಟ್ಟ ವ್ಯಕ್ತಿಯಾಗಿದ್ದರೆ, ಅಥವಾ ಯಾರಿಗಾದರೂ ಕೆಟ್ಟದ್ದು ಬಯಸುವ ವ್ಯಕ್ತಿಯಾಗಿದ್ದರೆ, ಅಥವಾ ಕೆಟ್ಟ ಸ್ಥಳದಲ್ಲಿ ವಾಸಿಸುವ ವ್ಯಕ್ತಿಯಾಗಿದ್ದರೆ, ಅಶಿಸ್ತಿನ ಮನುಷ್ಯರಿಂದ ದೂರವಿರುವುದು ಉತ್ತಮ ಎನ್ನುತ್ತಾರೆ ಚಾಣಕ್ಯರು. ಏಕೆಂದರೆ, ಇಂಥ ವ್ಯಕ್ತಿಗಳು ಇನ್ನೊಬ್ಬರ ಬಾಳನ್ನು ಹಾಳುಗೆಡುವುದರಲ್ಲಿ ಸಂಶಯವಿಲ್ಲ.

ಕೆಟ್ಟ ಸ್ವಭಾವದ ವ್ಯಕ್ತಿಗಳ ಸಂಗ ಮಾಡಿದರೆ, ನಿಮಗೂ ಅದೇ ಸ್ವಭಾವ ಬರಬಹುದು. ನೀವೂ ಅವರ ಗುಣವನ್ನೇ ಕಲಿಯಬಹುದು. ಕೆಟ್ಟ ಕೆಟ್ಟ ಚಟಗಳ ದಾಸರಾಗಬಹುದು. ಕೆಟ್ಟ ಕೆಲಸ ಮಾಡಬಹುದು. ಹಾಗಾಗಿ ಕೆಟ್ಟ ಜನರ ಸಹವಾಸ ಮಾಡಬಾರದು ಅಂತಾ ಚಾಣಕ್ಯರು ಹೇಳುತ್ತಾರೆ.

ಇನ್ನು ಇನ್ನೊಬ್ಬರಿಗೆ ಸದಾ ಕೆಟ್ಟದ್ದು ಬಯಸುವವರ ಜೊತೆ, ಇನ್ನೊಬ್ಬರ ಬಗ್ಗೆ ಬರೀ ಕೆಟ್ಟದ್ದು ಮಾತನಾಡುವವರ ಜೊತೆ ಜೀವಿಸುವುದು, ಹೇಸಿಗೆಯ ಜೊತೆ ಜೀವನ ಮಾಡುವುದಕ್ಕೆ ಸಮ. ಇಂಥವರ ಸಂಗದಿಂದ ನಿಮಗೂ ಇದೇ ಗುಣ ಬರುತ್ತದೆ. ಅವರು ನಿಮ್ಮ ಮುಂದೆ ಇನ್ನೊಬ್ಬರ ಬಗ್ಗೆ ಕೆಟ್ಟದ್ದು ಮಾತನಾಡುವವರಾಗಿದ್ದಲ್ಲಿ, ನಾಳೆ ನಿಮ್ಮ ಬಗ್ಗೆ ಇನ್ನೊಬ್ಬರ ಬಳಿ ಹೀಗೆ ಕೆಟ್ಟದ್ದು ಮಾತನಾಡಿ, ನಿಮ್ಮ ಮಾನ ಹರಾಜು ಹಾಕುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಬೇರೆಯರ ಬಗ್ಗೆ ಕೆಟ್ಟದ್ದನ್ನೇ ಮಾತನಾಡುವವರ ಸಂಗದಿಂದ ದೂರವಿರಿ.

ಮೂರನೇಯದಾಗಿ ಜೀವನದಲ್ಲಿ ಶಿಸ್ತು ಇಲ್ಲದವರ ಸಂಗ ಮಾಡಿದಾಗ, ನೀವು ಅವರಂತೆ ಅಶಿಸ್ತು ಪಾಲಿಸಲು ಶುರು ಮಾಡುತ್ತೀರಿ. ನಿಮ್ಮ ಜೀವನದಲ್ಲೂ ಶಿಸ್ತು ಇರುವುದಿಲ್ಲ. ಕೊಳಕು ಸ್ಥಳ, ಕೆಟ್ಟ ಸ್ಥಳದಲ್ಲಿ ವಾಸಿಸುವ ಜನರ ಸಂಗ ಮಾಡಿದಾಗಲೂ, ನಿಮಗೂ ಕೊಳಕು ಸ್ವಭಾವ, ಕೊಳಕು ಭಾಷೆಯೇ ಬರುತ್ತದೆ. ಹಾಗಾಗಿ ಯಾರದ್ದಾದರೂ ಸಹವಾಸ ಮಾಡುವ ಮುನ್ನ ಅವರ ಸ್ವಭಾವದ ಬಗ್ಗೆ ಅರಿತುಕೊಳ್ಳಿ.

ಈ ವಸ್ತುಗಳನ್ನು ಯಾರಿಗೂ ಕೊಡಬೇಡಿ.. ಹೀಗೆ ಮಾಡಿದ್ರೆ ನಿಮ್ಮ ಅದೃಷ್ಟ ಅವರ ಪಾಲಾಗುತ್ತದೆ..

ಪತಿ ಶ್ರೀಮಂತನಾಗಬೇಕು, ಉದ್ಧಾರವಾಗಬೇಕು ಅಂದ್ರೆ ಪತ್ನಿ ಈ ಕೆಲಸವನ್ನು ಮಾಡಬೇಕು..

ಮಂಗಳವಾರದ ದಿನ ಇಂಥ ಕೆಲಸಗಳನ್ನು ಮಾಡಬೇಡಿ.. ಇಲ್ಲದಿದ್ದಲ್ಲಿ ದರಿದ್ರತನ ಆವರಿಸುತ್ತದೆ..

About The Author