Friday, August 29, 2025

Latest Posts

ಶಕುನಿ ಕುರುವಂಶದವರ ನಾಶಕ್ಕಾಗಿ ಪಣ ತೊಟ್ಟಿದ್ದು ಯಾಕೆ..?

- Advertisement -

Spiritual: ಮಹಾಭಾರತದ ಪ್ರಸಿದ್ಧ ಖಳನಾಯಕರಲ್ಲಿ ಪ್ರಮುಖನಾದವನೇ ಶಕುನಿ. ಯಾರಾದರೂ ದುಷ್ಟಬುದ್ಧಿ ತೋರಿಸಿದರೆ, ಮನೆಹಾಳು ಕೆಲಸ ಮಾಡಿದರೆ, ಅಂಥವರನ್ನು ಶಕುನಿ ಎಂದು ಕರೆಯಲಾಗುತ್ತದೆ. ಏಕೆಂದರೆ, ಕುರುವಂಶ ವಿನಾಶಕ್ಕಾಗಿ ಶಕುನಿ ಹಲವು ಸಂಚು ರೂಪಿಸಿದ್ದ. ಶಕುನಿಯ ಜೀವನದ ಬಗ್ಗೆ ಕೆಲ ವಿಷಯಗಳನ್ನು ತಿಳಿಯೋಣ ಬನ್ನಿ

ಶಕುನಿ ಬಾಲ್ಯದಿಂದಲೇ ವಿಲಕ್ಷಣ ಬುದ್ಧಿಯವನಾಗಿದ್ದ. ಆದರೂ ಎಲ್ಲ ಮಕ್ಕಳಿಗಿಂತ ಗಾಂಧಾರ ರಾಜ, ಶಕುನಿಯನ್ನೇ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಶಕುನಿಯ ಸಹೋದರಿ ಗಾಂಧಾರಿಯ ಜೀವನದ ಬಗ್ಗೆ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು. ಈಕೆ ವಿವಾಹದ ಬಳಿಕ ವಿಧವೆಯಾಗುತ್ತಾಳೆ. ಬಳಿಕ ಈಕೆಗೆ ಇನ್ನೊಂದು ಮದುವೆಯಾಗುತ್ತದೆ ಎಂದು ಹೇಳಿರುತ್ತಾರೆ.

ಅದಕ್ಕೆ ಗಾಂಧಾರ ರಾಜ, ಗಾಂಧಾರಿಯನ್ನು ಮೇಕೆಯೊಂದಿಗೆ ಮದುವೆ ಮಾಡಿಸಿ, ಬಳಿಕ ಅದರ ಕೊರಳನ್ನು ಕತ್ತರಿಸಿ, ಬಲಿ ಕೊಟ್ಟ. ಇದಾದ ಬಳಿಕ, ಧೃತರಾಷ್ಟ್ರನಿಗೆ ಕೊಟ್ಟು ಗಾಂಧಾರಿಯ ವಿವಾಹ ಮಾಡಲಾಯಿತು. ಈ ವಿಷಯ ತಿಳಿದಾಗ, ಧೃತರಾಷ್ಟ್ರ ಗಾಂಧಾರಿಯ ತಂದೆ ಮತ್ತು ಎಲ್ಲ ಸಹೋದರರನ್ನು ಜೈಲಿಗೆ ಹಾಕಿದರು. ಸರಿಯಾಗ ಊಟ ಹಾಕದೇ ಕೊಲ್ಲಲು ನಿರ್ಧರಿಸಿದರು.

ಆಗ ಎಲ್ಲ ಗಾಂಧಾರ ಸಹೋದದರು ಸೇರಿ, ಶಕುನಿಗೆ ತಮ್ಮ ಪಾಲಿನ ಅನ್ನದ ಅಗಳನ್ನು ಕೊಟ್ಟು, ಅವನು ಬದುಕುವಂತೆ ಮಾಡಿದರು. ಗಾಂಧಾರ ರಾಜ, ತಾನು ಸತ್ತ ಮೇಲೆ ತನ್ನ ಮೂಳೆಯಿಂದ ದಾಳವನ್ನು ರಚಿಸಿ, ಅದರಿಂದ ಕುರುವಂಶ ನಾಶ ಮಾಡುವಂತೆ ಹೇಳಿದ. ಅದರಂತೆ, ನಾಟಕ ರಚಿಸಿದ ಶಕುನಿ, ದುರ್ಯೋಧನನ ಮೂಲಕ ಜೈಲಿನಿಂದ ಹೊರಬಂದ.

ಬಳಿಕ ಗಾಂಧಾರಿ ಮತ್ತು ಧೃತರಾಷ್ಟ್ರನ  ಮನಸ್ಸು ಗೆದ್ದು, ಪಾಂಡು ರಾಜನ ವಿರುದ್ಧ ಷಡ್ಯಂತ್ರ ರಚಿಸಿದ. ಪಾಂಡವರ ವಿರುದ್ಧ ದುರ್ಯೋಧನನ ಮನಸ್ಸಿನಲ್ಲಿ ವಿಷ ಬೀಜ ಬಿತ್ತಿದ. ಭೀಮನನ್ನು ವಿಷ ಹಾಕಿ ಕೊಲ್ಲಿಸುವ ಪ್ರಯತ್ನವೂ ನಡೆಯಿತು. ಆದರೆ ಸರ್ಪರಾಜನ ಸಹಾಯದಿಂದ ಭೀಮ ಬದುಕುಳಿದ. ಪಗಡೆಯಾಟದಲ್ಲಿ ಪಾಂಡವರನ್ನು ಸೋಲಿಸಿ, ದ್ರೌಪದಿ ವಸ್ತ್ರಾಪಹರಣ ಮಾಡುವ ಮೂಲಕ, ಮಹಾಭಾರತ ಯುದ್ಧಕ್ಕೆ ಕಾರಣವಾದ. ಕೊನೆಗೆ ಕುರುವಂಶ ನಾಶವಾಗುವುದರ ಜೊತೆಗೆ, ತಾನೂ ಯುದ್ಧದಲ್ಲಿ ಕೊನೆಯುಸಿರೆಳೆದ.

ದಾನ ಮಾಡುವಾಗ ಇಂಥ ತಪ್ಪು ಮಾಡಬೇಡಿ, ಇಂಥ ವಸ್ತುಗಳನ್ನು ದಾನ ಮಾಡಬೇಡಿ..

ಮಂತ್ರಾಲಯದಲ್ಲಿ ರಾಯರ 352ನೇ ಆರಾಧನೆಗೆ ಶೇಷವಸ್ತ್ರ ಸಮರ್ಪಣೆ.. ಏನಿದರ ವಿಶೇಷ..?

ಈ ನಾಲ್ಕು ಸ್ಥಳಗಳು ನಿಮ್ಮ ಜೀವಕ್ಕೆ ಅಪಾಯ ತರಬಹುದು ಎನ್ನುತ್ತಾರೆ ಚಾಣಕ್ಯರು..

- Advertisement -

Latest Posts

Don't Miss