Food Adda: ನಾವು ಬೆಳಿಗ್ಗೆ ಎದ್ದ ತಕ್ಷಣ ಗುಡ್ ಮಾರ್ನಿಂಗ್ ಎಂದು ಹೇಳುತ್ತೇವೆ. ಆದ್ರೆ ನೀವು ಇನ್ನೊಂದು ಹೊಟೇಲ್‌ಗೆ ಹೋದ್ರೆ, ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಎಲ್ಲ ಸಮಯದಲ್ಲೂ ಗುಡ್ ಮಾರ್ನಿಂಗ್ ಹೇಳಲೇಬೇಕು. ಯಾಕಂದ್ರೆ ಈ ಹೊಟೇಲ್ ಹೆಸರೇ ಗುಡ್ ಮಾರ್ನಿಂಗ್. ಹಾಗಾದ್ರೆ ಈ ಹೊಟೇಲ್ ಸ್ಪೆಶಲ್ ಏನು ಅಂತಾ ತಿಳಿಯೋಣ ಬನ್ನಿ..
ಬೆಂಗಳೂರಿನ ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯಲ್ಲಿ, ಮಧುಲೋಕದ ಎದುರುಗಡೆ ಈ ಗುಡ್ ಮಾರ್ನಿಂಗ್ ಹೊಟೇಲ್ ಇದೆ. ನಿಮಗೆ ಮನೆಯಲ್ಲೇ ಮಾಡಿರುವಂತೆ ಮನೆಯೂಟ ಬೇಕಾದಲ್ಲಿ ನೀವು ಈ ಹೊಟೇಲ್‌ಗೆ ಹೋಗಬಹುದು. ಇಲ್ಲಿ ಚಪಾತಿ, ಅಕ್ಕಿ ರೊಟ್ಟಿ, ರಾಗಿ ರೊಟ್ಟಿ, ಮುದ್ದೆ, ಜೋಳದ ರೊಟ್ಟಿ, ಅನ್ನ ಸಾಂಬಾರ್ ಎಲ್ಲವೂ ಸಿಗುತ್ತದೆ. ಹೊಳಿಗೆ ಪ್ರಿಯರು ಹೋಳಿಗೆಯನ್ನೂ ಕೂಡ ಸವಿಯಬಹುದು.
ಇಲ್ಲಿ ಪ್ರತಿದಿನ ಬೇರೆ ಬೇರೆ ರೀತಿಯ ಸಂಬಾರ್, ಪಲ್ಯ, ಸಾರುಗಳನ್ನ ಮಾಡಲಾಗತ್ತೆ. ಪ್ರತಿದಿನ ಬೇರೆ ಬೇರೆ ತರಕಾರಿ, ಸೊಪ್ಪು, ಕಾಳುಗಳನ್ನ ಬಳಕೆ ಮಾಡಲಾಗುತ್ತದೆ. ಬಜ್ಜಿ, ಹಪ್ಪಳ, ಸೌತೇಕಾಯಿಯ ಜೊತೆ ವಿವಿಧ ರೀತಿಯ ಪಲ್ಯ, ಸಾರು, ಸಾಂಬಾರ್ ಕೊಡುತ್ತಾರೆ. ಇಲ್ಲಿನ ಊಟದ ಬೆಲೆ ಕೂಡ ರೀಸನೇಬಲ್ ಆಗಿದ್ದು, ಸೋಡಾ ಬಳಕೆ ಕೂಡ ಇವರು ಮಾಡುವುದಿಲ್ಲ.
ಈ ಹೊಟೇಲ್ ಶುರುವಾಗಿ ಕೇವಲ ಮೂರು ತಿಂಗಳಾಗಿದೆ. ಆದರೂ ಕೂಡ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಇದಕ್ಕೆ ಕಾರಣ, ಇಲ್ಲಿ ಸಮೀಪದಲ್ಲಿ ಹಲವು ಕಚೇರಿಗಳಿದೆ. ಅಲ್ಲಿ ಕೆಲಸ ಮಾಡುವವರು ಊಟಕ್ಕೆಂದು ಇಲ್ಲಿಗೆ ಬರುತ್ತಾರೆ. ಇವರು ನೀಡುವ ಊಟದ ರುಚಿ, ಕ್ವಾಲಿಟಿ ಜೊತೆಗೆ ಬಂದ ಗ್ರಾಹಕರನ್ನು ಮಾತನಾಡಿಸುವ ರೀತಿ ಕೂಡ ಉತ್ತಮವಾಗಿರುವ ಕಾರಣಕ್ಕೆ, ಈ ಹೊಟೇಲ್‌ನಲ್ಲಿ ಗ್ರಾಹಕರ ಸಂಖ್ಯೆ ಚೆನ್ನಾಗಿ ಅಂತಾ ಹೇಳಬಹುದು. ಈ ಹೊಟೇಲ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..


