Wednesday, October 29, 2025

Latest Posts

ಶಿವನ ಹತ್ತು ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ- ಭಾಗ 1

- Advertisement -

Spiritual: ಶಿವನ 10 ಅವತಾರಗಳು ಎಂದರೆ, ಶಿವನ ಅಂಶಗಳು. ಶಿವ 10 ಅಂಶಗಳಾಗಿ ರೂಪ ತಾಳಿದ್ದ. ಹಾಗಾದ್ರೆ ಶಿವನ 10 ರೂಪಗಳು ಯಾವುದು ಅಂತಾ ತಿಳಿಯೋಣ ಬನ್ನಿ.

ಮೊದಲನೇಯ ಅವತಾರ ಶರಭಾವತಾರ. ಶರಭ ಎಂದರೆ 8 ಕಾಲುಗಳುಳ್ಳ, ಸಿಂಹಕ್ಕಿಂತಲೂ ಶಕ್ತಿಶಾಲಿಯಾದ ಅವತಾರ. ಹಿರಣ್ಯ ಕಶ್ಯಪನನ್ನು ನರಸಿಂಹ ಅವತಾರಿ ವಿಷ್ಣು, ಸಂಹರಿಸಿದ ಬಳಿಕವೂ, ನರಸಿಂಹ ಶಾಂತನಾಗಿರಲಿಲ್ಲ. ಹಾಗಾಗಿ ಶಿವ ಶರಭ ರೂಪ ತಾಳಬೇಕಾಯಿತು. ಶರಭ ರೂಪವೆಂದರೆ, ಅರ್ಧ ಜಿಂಕೆ ಮತ್ತು ಅರ್ಧ ಪಕ್ಷಿಯ ಅವತಾರವಾಗಿದೆ. ಶರಬ ರೂಪದ ಶಿವ, ನರಸಿಂಹನಲ್ಲಿ ಶಾಂತವಾಗಲು ಕೇಳಿಕೊಂಡನು. ಆದರೆ ನರಸಿಂಹ ಶಾಂತವಾಗಲಿಲ್ಲ. ಆಗ ಶರಭಾವತಾರಿ ಶಿವ, ತನ್ನ ಬಾಲದಲ್ಲಿ ನರಸಿಂಹನನ್ನು ಎಳೆದುಕೊಂಡು ಹೋಗುತ್ತಾನೆ. ಬಳಿಕ ನರಸಿಂಹ ಶರಬನಲ್ಲಿ ಕ್ಷಮೆಯಾಚಿಸುತ್ತಾನೆ.

ಎರಡನೇಯ ಅವತಾರ ಪಿಪ್ಲಾದ ಮುನಿ. ದದೀಚಿ ಎಂಬ ಮುನಿಯ ಮಗನೇ, ಪಿಪ್ಲಾದ ಮುನಿ. ಪಿಪ್ಲಾದ ಚಿಕ್ಕವನಿರುವಾಗಲೇ, ಅವನ ತಂದೆ ದದೀಚಿ ಅವನಿಂದ ದೂರವಾಗುತ್ತಾನೆ. ಆಗ ಪಿಪ್ಲಾದ ತಾನೇನು ತಪ್ಪು ಮಾಡಿದೆ ಎಂದು, ನನ್ನ ತಂದೆ ನನ್ನನ್ನು ದೂರ ಮಾಡಿದರೆಂದು ದೇವತೆಗಳಲ್ಲಿ ಕೇಳುತ್ತಾನೆ. ಆಗ ದೇವತೆಗಳು, ನಿನಗೆ ಶನಿ ಕಾಟವಿರುವ ಕಾರಣ, ನೀನು ನಿನ್ನ ತಂದೆಯಿಂದ ದೂರವಾಗಿದ್ದಿ ಎಂದು ಹೇಳುತ್ತಾರೆ. ಆಗ ಪಿಪ್ಲಾದ, ನಕ್ಷತ್ರಪುಂಜಗಳಿಂದ ಶನಿ ಬಿದ್ದು ಹೋಗಲಿ ಎಂದು ಶಾಪ ಹಾಕುತ್ತಾನೆ. ಶನಿಗೆ ಈ ಶಾಪ ತಟ್ಟುತ್ತಿದ್ದಂತೆ, ದೇವತೆಗಳೆಲ್ಲ ಶನಿಗೆ ಕ್ಷಮಿಸಿಬಿಡು ಎಂದು ಪಿಪ್ಲಾದನಲ್ಲಿ ಕೇಳಿಕೊಳ್ಳುತ್ತಾರೆ.ಆಗ ಪಿಪ್ಲಾದ, ಸರಿ ನಾನು ಶನಿಯನ್ನು ಕ್ಷಮಿಸುತ್ತೇನೆ. ಆದರೆ ಒಂದು ಷರತ್ತು. ಓರ್ವ ವ್ಯಕ್ತಿಗೆ 16 ವರ್ಷ ಪೂರ್ಣಗೊಳ್ಳುವತನಕ ಅವನಿಗೆ ಶನಿ ಕಾಟವಿರಬಾರದು ಎನ್ನುತ್ತಾನೆ.

ಮೂರನೇಯ ಅವತಾರ ನಂದಿ ಅವತಾರ. ನಂದಿ ಎಂದರೆ ಶಿವನ ವಾಹನ. ಆದರೆ ಶಿಲಾದ ಮುನಿಗೆ ಮಕ್ಕಳಿಲ್ಲದ ಕಾರಣ, ಅವರು ಶಿವನಲ್ಲಿ ತಪಸ್ಸು ಮಾಡಿ, ನಂದಿಯನ್ನು ಪಡೆದರು. ಆ ನಂದಿ ಶಿವನ ಅಂಶವಾಗಿದ್ದ. ಮರಣದ ಬಳಿಕ, ಮತ್ತೆ ಶಿವನ ವಾಹನವಾದ.

ನಾಲ್ಕನೇಯ ಅವತಾರ ಭೈರವ ಅವತಾರ. ಬ್ರಹ್ಮ ಮತ್ತು ವಿಷ್ಣುವಿನ ಜಗಳ ನಿಲ್ಲಿಸಲು ಶಿವ ಕಾಲ ಭೈರವನ ರೂಪ ತಾಳಿದ. ಬ್ರಹ್ಮನ 5ನೇ ಶಿರವನ್ನು ಕೊಯ್ದ ಕಾಲ ಭೈರವ, ಕಾಶಿಯಲ್ಲಿ ಬ್ರಹ್ಮ ಹತ್ಯಾ ದೋಷವನ್ನು ಕಳೆದುಕೊಂಡ.

ಐದನೇಯ ಅವತಾರ ವೀರಭದ್ರ ಅವತಾರ. ದಕ್ಷ ರಾಜ ಶಿವ ಮತ್ತು ಸತಿಯನ್ನು ಯಜ್ಞಕ್ಕೆ ಕರಿಯದೇ ಅವಮಾನಿಸುತ್ತಾನೆ. ಆಗ ಸತಿ ದಕ್ಷನ ಮೇಲೆ ಕೋಪಗೊಂಡು, ಯಜ್ಞ ಕುಂಡಕ್ಕೆ ಹಾರಿ, ಪ್ರಾಣ ತ್ಯಾಗ ಮಾಡುತ್ತಾಳೆ. ಆಗ ಶಿವ ಸಿಟ್ಟಿನಲ್ಲಿ ವೀರಭದ್ರನ ಅಂಶ ಹೊರಹಾಕುತ್ತಾನೆ. ವೀರಭದ್ರ ಶಿವನ ಆಜ್ಞೆಯಂತೆ, ದಕ್ಷ ರಾಜನ ರುಂಡ ಕತ್ತರಿಸುತ್ತಾನೆ.

ಶಿವನ ಇನ್ನುಳಿದ 5 ಅವತಾರಗಳ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..

ಹೊಟ್ಟೆಕಿಚ್ಚಿನ ಸ್ವಭಾವದವರು ಈ 4 ರಾಶಿಯವರು..

ಮೈಸೂರು ಚಾಮುಂಡಿ ದೇವಸ್ಥಾನದ ವಿಶೇಷತೆಗಳೇನು ಗೊತ್ತಾ..?

ಪ್ರತೀ 12 ವರ್ಷಕ್ಕೊಮ್ಮೆ ಈ ಶಿವಲಿಂಗಕ್ಕೆ ಮಿಂಚು ಅಪ್ಪಳಿಸುತ್ತದೆ..

- Advertisement -

Latest Posts

Don't Miss