Thursday, October 16, 2025

Latest Posts

ನೀವು ಜೀವನದಲ್ಲಿ ನೆಮ್ಮದಿಯಾಗಿರಬೇಕು ಎಂದರೆ, ಭಗವದ್ಗೀತೆಯಲ್ಲಿ ಹೇಳಿದ ಈ ಮಾತುಗಳನ್ನು ಕೇಳಿ..

- Advertisement -

Spiritual: ಭಗವದ್ಗೀತೆಯನ್ನು ಓದಿದವರು, ಅತ್ಯುತ್ತಮವಾಗಿ ಬದುಕುತ್ತಾರೆಂದು ಹಿರಿಯರು ಹೇಳುತ್ತಾರೆ. ಏಕೆಂದರೆ ಇದರಲ್ಲಿ ಅಂಥ ಅತ್ಯದ್ಭುತ ವಿಷಯವನ್ನು ವಿವರಿಸಲಾಗಿದೆ. ಜೀವನದಲ್ಲಿ ನೆಮ್ಮದಿಯಾಗಿರಬೇಕು ಎಂದರೆ ಏನು ಮಾಡಬೇಕೆಂದು ಕೂಡ ಹೇಳಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಮೊದಲನೇಯ ವಿಷಯ ಅಹಂಕಾರ ಮಾಡಬೇಡಿ. ನೀವು ನೆಮ್ಮದಿಯಿಂದ, ಖುಷಿ ಖುಷಿಯಾಗಿ ಬದುಕಬೇಕು ಅಂದ್ರೆ ಅಹಂಕಾರ ಮಾಡಬೇಡಿ. ಏಕೆಂದರೆ, ಒಂದು ನಿಮಿಷದ ಅಹಂಕಾರದಿಂದ, ಒಂದು ಸುಂದರ ಸಂಬಂಧ ಹಾಳಾದ ಎಷ್ಟೋ ಉದಾಹರಣೆಗಳಿದೆ. ಸಹೋದರ- ಸಹೋದರಿ, ತಂದೆ- ಮಕ್ಕಳು, ಪತಿ-ಪತ್ನಿ ಸಂಬಂಧಗಳು, ಬರೀ ಒಂದೇ ಒಂದು ನಿಮಿಷದ ಅಹಂಕಾರದ ಮಾತಿನಿಂದ ಹಾಳಾಗಿದೆ. ಎಷ್ಟೋ ಜನ ಅಹಂಕಾರ ಮಾಡಿ ಬೀದಿಗೆ ಬಂದವರಿದ್ದಾರೆ. ಹಾಗಾಗಿ ಶ್ರೀಕೃಷ್ಣ ಹೇಳುತ್ತಾನೆ, ಅಂಹಕಾರವನ್ನು ತೊರೆದು ಬದುಕಿ ಎಂದು.

ಎರಡನೇಯ ವಿಷಯ, ನಾಳೆ ಎಂದು ಕೂರಬೇಡಿ. ಇರುವ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳಿ. ಕೆಲಸದ ವಿಚಾರವಾಗಲಿ, ಅಥವಾ ಒಂದೊಳ್ಳೆ ಕಾರ್ಯ ಸಾಧನೆಗಾಗಿ, ನಾವೆಂದೂ ನಾಳೆ ಮಾಡುವಾ ಎಂದು ಸಮಯ ಮುಂದೂಡಬಾರದು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು, ಯಶಸ್ಸು ಸಾಧಿಸಬೇಕು.

ಮೂರನೇಯ ವಿಷಯ, ನಿಮ್ಮ ಇಂದಿನ ಉತ್ತಮ ಕೆಲಸವೇ, ನಿಮ್ಮನ್ನು ನಾಳೆ ಕಾಯುತ್ತದೆ. ಅಂದರೆ ಸದಾ ಒಳ್ಳೆಯ ಕೆಲಸಗಳನ್ನೇ ಮಾಡಿ, ಎಲ್ಲರಿಗೂ ಒಳ್ಳೆಯದನ್ನೇ ಬಯಸಿ, ಶುದ್ಧ ಮನಸ್ಸಿನಿಂದ ಜೀವಿಸಿ. ಆಗ ನಿಮ್ಮ ಭವಿಷ್ಯವೂ ಉತ್ತಮವಾಗಿರುತ್ತದೆ. ಅಷ್ಟೇ ಅಲ್ಲದೇ, ನಿಸ್ವಾರ್ಥಿಯಾಗಿ ಯಾರು ಉತ್ತಮ ಕೆಲಸಗಳನ್ನು ಮಾಡುತ್ತಾನೋ, ಅವನನ್ನು ಸದಾಕಾಲ ಪರಮಾತ್ಮ ರಕ್ಷಿಸುತ್ತಾನೆ.

ನಾಲ್ಕನೇಯ ವಿಷಯ, ತಾಳ್ಮೆ, ಮೌನ, ಸೌಮ್ಯತೆಯನ್ನು ಮನುಷ್ಯ ಮೈಗೂಡಿಸಿಕೊಂಡರೆ, ಅವನು ಜೀವನದಲ್ಲಿ ಗೆದ್ದಂತೆ. ಈ ಗುಣಗಳಿರುವವರು, ಎಲ್ಲರನ್ನೂ ಗೆಲ್ಲುತ್ತಾರೆ. ಇಂಥ ಗುಣವಿರುವವರು ಬುದ್ಧಿವಂತಿಕೆಯಿಂದ ಜೀವಿಸುತ್ತಾರೆ.

ಐದನೇಯ ವಿಷಯ, ನಿಮ್ಮತನ ನಿಮ್ಮಲ್ಲಿರಲಿ.  ಇತರಿಗಾಗಿ ನೀವು ನಿಮ್ಮ ಗುಣವನ್ನು ಬದಲಿಸಿಕೊಳ್ಳಬೇಡಿ. ಅವನು ಮಾಡಿದನೆಂದು, ನಾನು ಹಾಗೆ ಮಾಡಿದೆ ಎನ್ನುವುದನ್ನು ಕೇಳಿರುತ್ತೀರಿ. ಆದರೆ, ಇನ್ನೊಬ್ಬರು ಮಾಡಿದ ಹಾಗೆ ನಾವು ಮಾಡಿದರೆ, ನಮಗೂ ಅವರಿಗೂ ಏನು ವ್ಯತ್ಯಾಸ..? ಹಾಗೆ ನಾವು ನಮ್ಮ ಗುಣವನ್ನು ಹಾಗೆ ಇರಿಸಿಕೊಳ್ಳಬೇಕು. ಒಳ್ಳೆಯತನ ಅಳವಡಿಸಿಕೊಳ್ಳಬೇಕು.

ಹೊಟ್ಟೆಕಿಚ್ಚಿನ ಸ್ವಭಾವದವರು ಈ 4 ರಾಶಿಯವರು..

ಮೈಸೂರು ಚಾಮುಂಡಿ ದೇವಸ್ಥಾನದ ವಿಶೇಷತೆಗಳೇನು ಗೊತ್ತಾ..?

ಪ್ರತೀ 12 ವರ್ಷಕ್ಕೊಮ್ಮೆ ಈ ಶಿವಲಿಂಗಕ್ಕೆ ಮಿಂಚು ಅಪ್ಪಳಿಸುತ್ತದೆ..

- Advertisement -

Latest Posts

Don't Miss