ಹುಬ್ಬಳ್ಳಿ: ಅವಳಿ ನಗರಗಳಲ್ಲಿ ಬಿಜೆಪಿ ಪಕ್ಷ ಹಳಿ ತಪ್ಪಿದಂತೆ ಕಾಣುತ್ತಿದೆ. ಬಿಜೆಪಿ ನಾಯಕರು ಸ್ವಪಕ್ಷದ ಮೇಲೆ ಪದೇ ಪದೇ ದೂರನ್ನು ಹೇಳುತ್ತಿದ್ದಾರೆ, ಲಿಂಗಾಯತ ನಾಯಕರನ್ನು ಕಡೆಗಣಿಸುತ್ತಿರುವುದು, ಪಕ್ಷದ ನಾಯಕರನ್ನು ಸಭೆಗಳಿಗೆ ಆಹ್ವಾನ ಮಾಡದಿರುವುದು. ಅನುಭವಿ ನಾಯಕರನ್ನು ಬಿಟ್ಟು ಹೊಸ ವ್ಯಕ್ತಿಗಳಿಗೆ ಮಣೆಹಾಕುತ್ತಿರುವುದು ಒಂದಲ್ಲಾ ಎರಡಲ್ಲಾ ದಿನೇ ದಿನೇ ದೂರುಗಳ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತಿದೆ.
ನಗರದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ದ ಅಸಮದಾನ ಬುಗಿಲೆದ್ದಿದೆ. ಹೊಂದಾಣಿಕೆ ರಾಜಕಾರಣದ ಬಗ್ಗೆ ನಡೆದ ಸಭೆಯಲ್ಲಿ ಅಸಮಧಾನ ಬುಗಿಲೆದ್ದಿದೆ. ಲಿಂಗಾಯತ, ಮತ್ತು ಹಿರಿಯ ನಾಯಕರನ್ನು ಬಿಜೆಪಿ ಪಕ್ಷದಲ್ಲಿ ಕಡೆಗಣಿಸುತ್ತಿದ್ದಾರೆ ಎಂದು ನಾಯಕರು ಕಿಡಿಕಾರಿದ್ದಾರೆ.
ಇನ್ನು ಬಿಜೆಪಿ ನಾಯಕರಾದ ವಿಧಾನ ಪರಿಷತ್ ಸದಸ್ಯನಾದ ಪ್ರದಿಪ್ ಶೆಟ್ಟರ್, ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಶಾಸಕ ಅರವಿಂದ ಬೆಲ್ಲದ್ ಸಭೆಗೆ ಗೈರಾಗಿದ್ದರು. ಹೋಗೋರು ಹೋಗ್ಲಿ ಪಕ್ಷವನ್ನು ಸಂಘಟಿಸಿ ಅಂತ ಜೋಶಿ ಅತೃಪ್ತಿ ವ್ಯಕ್ತಪಡಿಸಿದರು.
Collage : ದೇವರಾಜ್ ಅರಸ್ ಎಜುಕೇಶನ್ ಸೊಸೈಟಿ (ರಿ) ಎಸ್ಎಲ್‌ವಿ ಶಾಲೆ, ನರ್ಸಿಂಗ್ ಕಾಲೇಜಿನಲ್ಲಿ ಬೆಳ್ಳಿ ಹಬ್ಬದ ಸಂಭ್ರಮ
DK Shivakumar : ರಾಜ್ಯದ ಇತರೆ ನಗರಗಳಲ್ಲೂ ಹೂಡಿಕೆ ಮಾಡಿ: ನೆದರ್ಲೆಂಡ್ ನಿಯೋಗಕ್ಕೆ ಡಿಸಿಎಂ ಆಹ್ವಾನ