Friday, April 18, 2025

Latest Posts

Aravind bellad: ಹುಬ್ಬಳ್ಳಿಯಲ್ಲಿ ಶಾಸಕ ಅರವಿಂದ್ ಬೆಲ್ಲದ ಸುದ್ದಿಗೋಷ್ಠಿ

- Advertisement -

ಹುಬ್ಬಳ್ಳಿ: ಪ್ರತಿವರ್ಷದಂತೆ ಈ ವರ್ಷವು ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದು  ಕಳೆದ ಬಾರಿ ಕಿತ್ತೂರು ಚೆನ್ನಮ್ಮ ಮೈದಾನದಲ್ಲಿ (ಈದ್ಗಾ ಮೈದಾನ) ಗಣೇಶ ಪ್ರತಿಷ್ಠಾಪನೆ ಕೋರ್ಟ್ ಆದೇಶ ಕೊಟ್ಟಿತ್ತು ವಿಜೃಂಭಣೆ ಹಾಗೂ ಶಾಂತಿಯಿಂದ ಆಚರಿಸಿದ್ದೆವು. ಈ ಬಾರಿಯು ಸಹ ಮೂರ್ತಿ ಪ್ರತಿಷ್ಠಾಪನೆ ಮಾಡಿ ವಿಜೃಂಭಣೆಯಿಂದ ಮಾಡಬೇಕು ಅನ್ಕೊಂಡಿದ್ದಾರೆ ಪಾಲಿಕೆಗೆ ಮನವಿ ಕೂಡ ಮಾಡಲಾಗಿದೆ.

ಸಿದ್ದರಾಮಯ್ಯ ಸರ್ಕಾರ ಅಲ್ಪಸಂಖ್ಯಾತ ತುಷ್ಟಿಕರಣ ಮಾಡುವುದಕ್ಕೆ ಅನುಮತಿ ಕೊಡ್ತಿಲ್ಲ ಮುಸ್ಮೀಮರು ಈದ್ ಮಿಲಾದ್ ವಿಜೃಂಭಣೆಯಿಂದ ಮಾಡ್ತಾರೆ, ಬೇಡವಾದ ಟಿಪ್ಪು ಜಯಂತಿ ಮಾಡ್ತಾರೆ. ಸಿದ್ದರಾಮಯ್ಯ ಅವರಿಗೆ ವಿನಂತಿ ಮಾಡ್ತೇವೆ. ಪತ್ರ ಕೂಡ ಬರಿದ್ದೇವೆ, ಅನುಮತಿಗೆ ತಡ ಮಾಡಬೇಡಿ ನೀವು ಅನುಮತಿ ಕೊಟ್ರು, ಕೊಡದೆ ಇದ್ರೂ ಪ್ರತಿಷ್ಠಾಪನೆ ಮಾಡೋದು ಖಚಿತ, ಅನುಮತಿ ನೀಡದೆ ಗಣಪತಿ ಹಾಗೂ ಭಕ್ತರ ಸಿಟ್ಟಿಗೆ ಕಾರಣ ಆಗಬೇಡಿ

ಒಂದು ತಿಂಗಳ ಹಿಂದೆ ಡಿಸಿ ಪತ್ರ ಬರೆದಿದ್ದಾರೆ. ಆದರೆ ಇದುವರೆಗೂ ಕೊಟ್ಟಿಲ್ಲ.ಇದು ಪಾಲಿಕೆ ಸ್ಥಳ, ಸರ್ಕಾರದ ಹಸ್ತಕ್ಷೇಪ ಇರೋದಿಲ್ಲ ಸರ್ಕಾರ ನಡೆಸಿದಂತೆ ಅಧಿಕಾರಿಗಳು ನಡೆದುಕೊಳ್ಳುತ್ತಾರೆ ನಾವು ಜನಪ್ರತಿನಿಧಿನಗಳು ಜನರ ಭಾವನೆ ಸರ್ಕಾರಕ್ಕೆ ಮುಟ್ಟಿಸುವುದು ನಮ್ಮ ಕೆಲಸ. ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಸರ್ಕಾರ ಹೀಗೆ ಮಾಡ್ತಾ ಇದೆ ದೇಶ ವಿರೋಧಿ ಸಂಘಟನೆಗಳಿಗೆ ಕಾಂಗ್ರೆಸ್ ಸರ್ಕಾರ ಬಂದ ನಂತರ ಕೊಂಬು ಬರ್ತವೆ ಎಂದು ಹೇಳಿದರು.

- Advertisement -

Latest Posts

Don't Miss