Wednesday, October 15, 2025

Latest Posts

ಯಮ ತನ್ನ ಸೌಂದರ್ಯವನ್ನು ಕಳೆದುಕೊಂಡಿದ್ದು ಹೇಗೆ ಗೊತ್ತಾ..?

- Advertisement -

Spiritual: ಯಮರಾಜನೆಂದರೆ ಎಲ್ಲರಿಗೂ ಎಷ್ಟು ಭಯ ಅನ್ನೋದು ಎಲ್ಲರಿಗೂ ಗೊತ್ತು. ಏಕೆಂದರೆ, ನಮ್ಮ ಜೀವನದ ಅಂತ್ಯ ಮಾಡಲು ಬರುವವನೇ ಯಮರಾಜ. ಹಾಗಾಗಿ ಯಮ ಎಂದರೆ ಎಲ್ಲರಿಗೂ ಭಯ. ಅದರಂತೆ, ಯಮನ ಆಕಾರವೂ ಭಯಂಕರವಾಗಿದೆ. ಕೋಣನ ಮೇಲೆ ಕುಳಿತ ಯಮನಿಗೆ ಎರಡು ಕೋಡುಗಳಿದೆ. ಕೆಂಪುಗಣ್ಣುಗಳಿದೆ. ಕೈಯಲ್ಲಿರುವ ಹಗ್ಗ, ಯಾರ ಪ್ರಾಣ ತೆಗೆಯಲಿ ಎಂದು ಕಾಯುವಂತಿದೆ. ಆದರೆ ಹೀಗೆ ವಿಕಾರವಾಗಿರುವ ಯಮ, ಮೊದಲು ಸುಂದರವಾಗಿದ್ದ. ಹಾಗಾದ್ರೆ ಯಾವ ಕಾರಣಕ್ಕೆ ಯಮ ತನ್ನ ಸೌಂದರ್ಯವನ್ನು ಕಳೆದುಕೊಂಡ ಅಂತಾ ತಿಳಿಯೋಣ ಬನ್ನಿ..

ಯಮರಾಜ ಅದೆಷ್ಟು ಸುಂದರವಾಗಿದ್ದನೆಂದರೆ, ಅವನನ್ನು ಅವನೇ ಹೊಗಳಿಕೊಳ್ಳುತ್ತಿದ್ದ. ಅಲ್ಲದೇ, ಹೊಗಳುಕೊಳ್ಳುವ ಭರದಲ್ಲಿ, ತನ್ನ ಕರ್ತವ್ಯವನ್ನೆಲ್ಲ ಮರೆಯುತ್ತಿದ್ದ. ವ್ಯಕ್ತಿಗಳ ಜೀವನ ಮುಗಿದಿದ್ದರೂ, ಅವರನ್ನು ತನ್ನೆಡೆಗೆ ಕರೆಸಿಕೊಳ್ಳುವುದನ್ನು ಮರೆತುಹೋಗುತ್ತಿದ್ದ. ಆಗ ಭೂಲೋಕದಲ್ಲಿ ಜನರು, ತಮಗೆ ಸಾವೇ ಬರುತ್ತಿಲ್ಲವೆಂದು ಖುಷಿ ಪಟ್ಟು ಆರಾಮವಾಗಿದ್ದರು. ಹೀಗೆ ಜನಸಂಖ್ಯೆ ಹೆಚ್ಚಾಗುತ್ತಾ ಹೋಯಿತು.

ಪಾಪ ಕರ್ಮಗಳನ್ನು ಮಾಡುವವರ ಸಂಖ್ಯೆಯೂ ಹೆಚ್ಚಾಯಿತು. ಭೂಮಿ ತಾಯಿಗೆ ಈ ಜನರ, ಮತ್ತು ಜನರು ಮಾಡುವ ಪಾಪ ಕರ್ಮಗಳ ಭಾರವನ್ನು ಸಹಿಸುವುದು ಕಷ್ಟವಾಯಿತು. ಆಗ ನರಳುವಿಕೆಯಿಂದ ಶಿವನನ್ನು ಪ್ರಾರ್ಥಿಸಿದಳು. ಆಗ ಶಿವನಿಗೆ, ಯಮ ತನ್ನ ಕರ್ತವ್ಯವನ್ನು ಮರೆತು, ತನ್ನ ಸೌಂದರ್ಯದ ಗುಣಗಾನದಲ್ಲಿದ್ದಾನೆಂಬುದು ಗೊತ್ತಾಯಿತು.

ಆಗ ಶಿವ, ಯಮನನ್ನು ಕೈಲಾಸಕ್ಕೆ ಬಾರೆಂದು ಕರೆಯುತ್ತಾನೆ. ಯಮ ಕೈಲಾಸಕ್ಕೆ ಬಂದಾಗ, ತನಗೆ ಬಾಯಾರಿಕೆಯಾಗುತ್ತಿದೆ. ನೀರು ತಂದು ಕೊಡು ಎಂದು ಕೇಳುತ್ತಾನೆ. ನೀರು ತರಲು ಯಮ ಕೊಳಕ್ಕೆ ಹೋದಾಗ, ತನ್ನ ಪ್ರತಿಬಿಂಬವನ್ನು ನೀರಿನಲ್ಲಿ ನೋಡುತ್ತಾನೆ. ಅವನ ಸುಂದರವಾದ ಮುಖ, ವಿಕಾರವಾಗಿರುತ್ತದೆ. ಮೈಬಣ್ಣ ಕಪ್ಪಗಾಗಿರುತ್ತದೆ. ಕಣ್ಣು ಕೆಂಡದಂತೆ ಕೆಂಪಗಾಗಿರುತ್ತದೆ. ದಪ್ಪನೆಯ ಮೀಸೆ ಬಂದಿರುತ್ತದೆ. ಇದನ್ನು ಕಂಡು ಯಮನಿಗೆ ದುಃಖವಾಗುತ್ತದೆ.

ಆಗ ಯಮ ಶಿವನ ಬಳಿ ಹೋಗಿ, ತನ್ನ ಸೌಂದರ್ಯವೇಕೆ ಹಾಳಾಯಿತು ಎಂದು ಕೇಳುತ್ತಾನೆ. ಆಗ ಶಿವ ನೀನು ನಿನ್ನ ಕರ್ತವ್ಯವನ್ನು ಮರೆತು, ಸೌಂದರ್ಯದ ಗುಣಗಾನ ಮಾಡುತ್ತ ಕುಳಿತೆ. ಅಲ್ಲಿ, ಭೂಮಿತಾಯಿ, ಭಾರ ತಾಳಲಾರದೇ, ನರಳುತ್ತಿದ್ದಳು. ಹಾಗಾಗಿ ನಿನಗೆ ಈ ಶಿಕ್ಷೆ ಕೊಟ್ಟಿರುವೆ ಎನ್ನುತ್ತಾನೆ. ಹೀಗಾಗಿ ಯಮನ ಸೌಂದರ್ಯವೆಲ್ಲ ಹಾಳಾಯಿತು.

ಜರ್ಮನಿಯ ಬರ್ಲಿನ್‌ನಲ್ಲಿರುವ ಗಣೇಶ ದೇವಸ್ಥಾನದ ವಿಶೇಷತೆಗಳೇನು ಗೊತ್ತಾ..?

ನೀವು ಜೀವನದಲ್ಲಿ ನೆಮ್ಮದಿಯಾಗಿರಬೇಕು ಎಂದರೆ, ಭಗವದ್ಗೀತೆಯಲ್ಲಿ ಹೇಳಿದ ಈ ಮಾತುಗಳನ್ನು ಕೇಳಿ..

ಈ ಅಂಶವನ್ನು ನೀವು ತಿಳಿದರೆ, ನಿಮ್ಮ ಭವಿಷ್ಯ ಉತ್ತಮವಾಗಿರುತ್ತದೆ..

- Advertisement -

Latest Posts

Don't Miss