ಮನಸಾರೆ ನಕ್ಕಾಗ ನಿಮ್ಮ ದೇಹದಲ್ಲಿ ಎಂಥ ಆರೋಗ್ಯಕರ ಬದಲಾವಣೆಯಾಗುತ್ತದೆ ಗೊತ್ತಾ..?

Health Tips: ನಗು- ಅಳು, ಸುಖ-ದುಃಖ ಅನ್ನೋದು ಮನುಷ್ಯನ ಜೀವನದ ಒಂದು ಭಾಗ. ಆದರೆ ಆ ಕೆಲಸವೇ ನಮ್ಮ ಆರೋಗ್ಯದ ಮೇಲೆ ಉತ್ತಮ ಮತ್ತು ಕೆಟ್ಟ ಪರಿಣಾಮ ಬೀರುತ್ತದೆ. ನಮ್ಮ ಆರೋಗ್ಯ ಹಾಳಾಗಲು ಮತ್ತು ನಾವು ಆರೋಗ್ಯವಾಗಿರಲು ಅಳು- ನಗು ಕಾರಣವಾಗುತ್ತದೆ. ಹಾಗಾಗಿ ಇಂದು ನಾವು ಮನಸಾರೆ ನಕ್ಕಾಗ ನಮ್ಮ ದೇಹದಲ್ಲಿ ಎಂಥ ಆರೋಗ್ಯಕರ ಬದಲಾವಣೆಯಾಗುತ್ತದೆ ಎಂಬ ಬಗ್ಗೆ ಹೇಳಲಿದ್ದೇವೆ.

ಮನಸಾರೆ ನಗುವುದರಿಂದ ನಿಮ್ಮ ಉಸಿರಾಟ ಅತ್ಯುತ್ತಮವಾಗುತ್ತದೆ. ಹಾಗಾಗಿ ಯಾವುದೇ ಟೆನ್ಶನ್ ಇಲ್ಲದೇ, ನಗು ನಗುತ್ತಲಿರುವವರು ಸಾಕಷ್ಟು ಸಮಯ ಆರೋಗ್ಯದಿಂದ ಬದುಕುತ್ತಾರೆ. ನಗುವುದರಿಂದ ಶ್ವಾಸಕೋಶದ ಆರೋಗ್ಯ ಉತ್ತಮವಾಗುತ್ತದೆ. ಏಕೆಂದರೆ ನಾವು ನಕ್ಕಾಗೆಲ್ಲ, ಹೆಚ್ಚು ಗಾಳಿ ನಮ್ಮ ದೇಹ ಸೇರುತ್ತದೆ. ಆಗ ಶ್ವಾಸಕೋಶ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ನಿಮ್ಮ ಉಸಿರಾಟ ಚೆನ್ನಾಗಿ ಆಗುತ್ತದೆ.

ಇಷ್ಟೇ ಅಲ್ಲದೇ, ಹೆಚ್ಚು ನಗುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ. ಇದರಿಂದ ನಮಗೆ ಪದೇ ಪದೇ ಜ್ವರ ಬರುವುದು, ಕೆಮ್ಮು- ನೆಗಡಿಯಾಗುವುದೆಲ್ಲ ಆಗುವುದಿಲ್ಲ. ಇನ್ನು ಲೋ ಬಿಪಿ ಇದ್ದವರು ಯಾವಾಗಲೂ ನಗು ನಗುತ್ತಾ ಇರಬೇಕು. ಆಗ ದೇಹದಲ್ಲಿ ಶಕ್ತಿ ಬರುತ್ತದೆ. ನಿಶ್ಶಕ್ತಿ ಮಾಯವಾಗಿ, ದೇಹದಲ್ಲಿ ಬಿಪಿ ಸಮ ಪ್ರಮಾಣದಲ್ಲಿ ಇರುತ್ತದೆ.

ಇನ್ನು ಯಾರಿಗೂ ಸುಮ್ಮ ಸುಮ್ಮನೆ ನಗಲಾಗುವುದಿಲ್ಲ. ಕೆಲವರು ಮೊಬೈಲ್‌ನಲ್ಲಿ ಬರುವ ವೀಡಿಯೋ ನೋಡಿಕೊಂಡು ನಗುತ್ತಾರೆ. ಕೆಲವರು ತಮ್ಮ ಪ್ರೀತಿ ಪಾತ್ರರೊಂದಿಗೆ ಮಾತನಾಡುತ್ತಾ ನಗುತ್ತಾರೆ. ಹೀಗೆ ನಗಲು ನಾನಾ ಕಾರಣಗಳು ಸಿಗುತ್ತದೆ. ನೀವು ಮಾತಿನಲ್ಲೇ ನಗಿಸುವವರೊಂದಿಗೆ ಹೆಚ್ಚು ಕಾಲ ಕಳೆಯಿರಿ. ಅಂತಾಕ್ಷರಿ, ಊನೋ, ಮೂಕಾಭಿನಯ ಇಂಥ ಆಟಗಳನ್ನು ಆಡಿ, ಆಗ ನೀವು ಮನಸಾರೆ ನಗಬಹುದು.

ಈ 5 ಆಹಾರಗಳ ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ..

ಗ್ಯಾಸ್ ಕಂಟ್ರೋಲ್ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಗೊತ್ತಾ..?

ಮಗುವಿಗೆ ತಾಯಿಯ ಎದೆ ಹಾಲು ಎಷ್ಟು ಮುಖ್ಯ..?

About The Author