ಪರಿಸರ ರಕ್ಷಣೆಗಾಗಿ ಹೆಣ್ಣು ಮಕ್ಕಳು ಈ ಕೆಲಸಗಳನ್ನು ಮಾಡಬಹುದು..

Health Tips: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಅನ್ನೋದು ಎಲ್ಲರಿಗೂ ಗೊತ್ತು. ಆದರೂ ಜನ ಕಸವನ್ನು ತಂದು ತಂದು ಬೀದಿಗೆ ಸುರಿಯುತ್ತಾರೆ. ಬೆಳಿಗ್ಗೆ ಬೇಗ ಎದ್ದು, ಕಸ ತೆಗೆದುಕೊಳ್ಳಲು ಬರುವ ಗಾಡಿಗೆ ಕಸ ಹಾಕಲು ಉದಾಸೀನ. ಇನ್ನು ಹೆಣ್ಣು ಮಕ್ಕಳು ಮನಸ್ಸು ಮಾಡಿದ್ರೆ, ಪರಿಸರ ರಕ್ಷಣೆಯನ್ನು ತಮ್ಮದೇ ರೀತಿಯಲ್ಲಿ ಮಾಡಬಹುದು. ಅದು ಹೇಗೆ ಅಂತಾ ತಿಳಿಯೋಣ ಬನ್ನಿ..

ಹೆಣ್ಣು ಮಕ್ಕಳು ಪ್ರತೀ ತಿಂಗಳು ಋತುಚಕ್ರದ ವೇಳೆ ಪ್ಯಾಡ್ ಬಳಸುತ್ತಾರೆ. ಆದರೆ ಈ ಪ್ಯಾಡ್ ಬಳಕೆಯಿಂದ ನಿಮ್ಮ ದೇಹಕ್ಕೆ ಕೆಟ್ಟ ಪರಿಣಾಮ ಬೀರುತ್ತದೆ. ಅದರಲ್ಲಿರುವ ಜೆಲ್, ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಮತ್ತು ನೀವು ಈ ಪ್ಯಾಡನ್ನು ಆಚೆ ಹಾಕುವ ಕಾರಣಕ್ಕೆ, ಇದು ಪರಿಸರಕ್‌ಕೂ ಹಾನಿ ಮಾಡುತ್ತದೆ. ಹಾಗಾಗಿ ನೀವು ಬಟ್ಟೆಯ ಪ್ಯಾಡ್ ಬಳಸಬಹುದು. ಇದು ನಿಮ್ಮ ಆರೋಗ್ಯಕ್ಕೂ ಉತ್ತಮವಾಗಿರುತ್ತದೆ. ಇದನ್ನು ನೀವು ಸ್ವಚ್ಛವಾಗಿ ವಾಶ್ ಮಾಡಿ, ಮರುಬಳಕೆ ಮಾಡಬಹುದು. ಅಲ್ಲದೇ, ಪರಿಸರಕ್ಕೂ ಏನೂ ಹಾನಿಯಾಗುವುದಿಲ್ಲ.

ಇಲ್ಲವಾದಲ್ಲಿ ನೀವು ಮೆನ್ಸ್ಟ್ರುವಲ್ ಕಪ್ ಕೂಡ ಬಳಕೆ ಮಾಡಬಹುದು. ಇದನ್ನು ಕೂಡ ಸ್ವಚ್ಛವಾಗಿ ತೊಳೆದು ನೀವು ರಿಯ್ಯೂಸ್ ಮಾಡಬಹುದು. ಇಂದಿನ ಕಾಲದ ಹಲವು ಹೆಣ್ಣು ಮಕ್ಕಳು ಇದನ್ನೇ ಬಳಕೆ ಮಾಡುತ್ತಿದ್ದಾರೆ. ಇದನ್ನು ಧರಿಸುವುದು ಸುಲಭವಾಗಿದ್ದು, ಕಂಫರ್ಟ್ ಆಗಿರುತ್ತದೆ.  ಇದರಿಂದ ನೀವು ಪ್ರತೀ ತಿಂಗಳಿಗೊಮ್ಮೆ ರಾಶಿ ರಾಶಿ ಪ್ಯಾಡ್ ಖರೀದಿಸಿ, ಬಳಸಿ ಬಿಸಾಕುವುದು ತಪ್ಪುತ್ತದೆ. ನಮ್ಮ ಪರಿಸರವೂ ಉತ್ತಮವಾಗಿರುತ್ತದೆ.

ಈ 5 ಆಹಾರಗಳ ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ..

ಗ್ಯಾಸ್ ಕಂಟ್ರೋಲ್ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಗೊತ್ತಾ..?

ಮಗುವಿಗೆ ತಾಯಿಯ ಎದೆ ಹಾಲು ಎಷ್ಟು ಮುಖ್ಯ..?

About The Author