Saturday, July 5, 2025

Latest Posts

ಅಡುಗೆಯನ್ನು ಫ್ರಿಜ್ನಲ್ಲಿರಿಸಿ, ಮತ್ತೆ ಬಿಸಿ ಮಾಡಿ ಸೇವಿಸುವುದು ಒಳ್ಳೆದಾ..? ಕೆಟ್ಟದ್ದಾ..?

- Advertisement -

Health Tips: ಊಟ ಹಾಳು ಮಾಡಬಾರದು ಅನ್ನೋದು ಒಳ್ಳೆಯ ವಿಷಯ. ಆ ರೀತಿ ಆಹಾರ ಹಾಳು ಮಾಡಬಾರದು ಅಂದ್ರೆ, ಕೊಂಚ ಕೊಂಚವೇ ಮಾಡಿ, ಅದನ್ನು ಅದೇ ದಿನ ತಿಂದು ಮುಗಿಸಬೇಕು. ಅದನ್ನು ಬಿಟ್ಟು ಇಂದು ರಾಶಿ ರಾಶಿ ಪದಾರ್ಥ ಮಾಡಿಟ್ಟು, ಅದು ಉಳಿದಾಗ, ಅದನ್ನು ಫ್ರಿಜ್‌ನಲ್ಲಿ ಇರಿಸಿ. ಮರು ದಿನ ತಿನ್ನುವುದು ಮಾತ್ರ ತಪ್ಪು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಭಗವದ್ಗೀತೆಯ ಪ್ರಕಾರ, ನಾವು ತಯಾರಿಸಿದ ಆಹಾರವನ್ನು ಕೆಲ ಗಂಟೆಗಳಲ್ಲೇ ತಿಂದು ಮುಗಿಸಬೇಕು. ಇದು ಆರೋಗ್ಯಕ್ಕೂ ಉತ್ತಮ. ಜೀವನಕ್ಕೂ ಉತ್ತಮ. ಏಕೆಂದರೆ, ಉಳಿದ ಆಹಾರ ಮರುದಿನ ತಾಮಸಿಕ ಆಹಾರವಾಗಿ ಮಾರ್ಪಾಡಾಗುತ್ತದೆ. ಮತ್ತು ಇಂಥ ಆಹಾರಗಳ ಸೇವನೆಯಿಂದ, ನಮ್ಮ ಆರೋಗ್ಯ ಹಾಳಾಗುವುದಲ್ಲದೇ, ನಮ್ಮಲ್ಲಿ ಋಣಾತ್ಮಕ ಪರಿಣಾಮ ಬೀರುತ್ತದೆ.

ತಾಮಸಿಕ ಆಹಾರ ಸೇವನೆಯಿಂದ ನಮ್ಮ ದೇಹಕ್ಕೆ ಯಾವುದೇ ಲಾಭವಾಗುವುದಿಲ್ಲ. ಏಕೆಂದರೆ, ಅದರಲ್ಲಿ ಯಾವುದೇ ಪೋಷಕಾಂಶವಿರುವುದಿಲ್ಲ. ಹಾಗಾಗಿ ಅದರ ಸೇವನೆಯಿಂದ ನಮಗೆ ಶಕ್ತಿ ಸಿಗುವುದಿಲ್ಲ. ಇನ್ನು ಪ್ರತಿದಿನ ನೀವು ತಾಮಸಿಕ ಆಹಾರಗಳನ್ನೇ ತಿನ್ನುವುದರಿಂದ, ನಿಮ್ಮ ದೇಹದಲ್ಲಿರುವ ಶಕ್ತಿ ಎಲ್ಲ ಕುಂದಿಹೋಗುತ್ತದೆ.

ಹಾಗಾಗಿಯೇ ಮೊದಲಿನ ಕಾಲದಲ್ಲಿ ಫ್ರಿಜ್‌ ಬಳಸುತ್ತಿರಲಿಲ್ಲ. ಅಂದಿನ ಆಹಾರವನ್ನು ಅಂದೇ ತಿಂದು ಮುಗಿಸುತ್ತಿದ್ದರು. ಮರುದಿನ ಬೇರೆ ಆಹಾರ ಪದಾರ್ಥ ತಯಾರಿಸುತ್ತಿದ್ದರು. ಫ್ರಿಜ್‌ನಲ್ಲಿರಿಸಿದ ಆಹಾರ ಸೇವನೆಯ ಪದ್ಧತಿ ವಿದೇಶಿಗರಿಂದ ಬಂದಿರುವುದು. ಇದು ಮಕ್ಕಳ ಬೆಳವಣಿಗೆಗೆ ಕುತ್ತು ತರುತ್ತದೆ. ಮತ್ತು ಆರೋಗ್ಯ ಪದೇ ಪದೇ ಹಾಳಾಗಲು ಕಾರಣವಾಗುತ್ತದೆ. ಹಾಗಾಗಿ ನಿಮ್ಮಲ್ಲಿ ಆಹಾರ ಉಳಿದರೆ, ಅದನ್ನು ಪ್ರಾಣಿಗಳಿಗೆ ತಿನ್ನಲು ಕೊಡಿ.

Nipah Virus ಲಕ್ಷಣಗಳೇನು..? ಡಾಕ್ಟರ್ ಏನಂತಾರೆ ಗೊತ್ತಾ?

ತಾಯಿಗೆ ಮಗುವಿನ ಬಗ್ಗೆ ಏನೇನು ತಿಳಿದಿರಬೇಕು..?

Digestion-Indigestion ಅಂದ್ರೆ ಏನು? ಆರೋಗ್ಯಕ್ಕೆ ಯಾವ ಆಹಾರಗಳು ಉತ್ತಮ?

- Advertisement -

Latest Posts

Don't Miss