Health Tips: ಸಕ್ಕರೆ ಖಾಯಿಲೆ ಅನ್ನುವುದು ಕಾಮನ್ ಖಾಯಿಲೆಯಾದರೂ, ಇದನ್ನು ನಿರ್ಲಕ್ಷಿಸಿದವರ ಪ್ರಾಣಕ್ಕೆ ಕುತ್ತು ಬರುವುದಂತೂ ಗ್ಯಾರಂಟಿ. ಹಾಗಾಗಿ ನಾವಿಂದು ಸಕ್ಕರೆ ಖಾಯಿಲೆ ಇದ್ದವರು ಯಾವ ಆಹಾರಗಳನ್ನು ಸೇವಿಸಬಹುದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಅರಿಶಿನ. ಪ್ರತಿದಿನ ನೀವು ತಯಾರಿಸುವ ಅಡಿಗೆಯಲ್ಲಿ ಅರಿಶಿನ ಬಳಕೆ ಮಾಡಿ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೇ, ನಿಮ್ಮ ದೇಹದಲ್ಲಿ ಸಕ್ಕರೆ ಅಂಶವನ್ನು ಕಂಟ್ರೋಲ್ ಮಾಡುವುದಕ್ಕೆ ಅರಿಶಿನ ಸಹಕಾರಿಯಾಗಿದೆ.
ಮೆಂತ್ಯೆ. ಮೆಂತ್ಯೆ ಕಾಳಿನ ಬಳಕೆಯಿಂದ ದೇಹದಲ್ಲಿ ಶುಗರ್ ಕಂಟ್ರೋಲಿನಲ್ಲಿದ್ದು, ಇನ್ಸುಲಿನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಅಡುಗೆಯಲ್ಲಿ ಮೆಂತ್ಯೆ ಕಾಳನ್ನು ಬಳಸಬಹುದು. ಅಥವಾ ಮೆಂತ್ಯೆಯನ್ನು ಹುರಿದು ಪುಡಿ ಮಾಡಿ, ಕೊಂಚ ಕೊಂಚ ಅನ್ನದೊಂದಿಗೆ ಸೇವಿಸಬಹುದು. ಅಥವಾ ರಾತ್ರಿ ಮೆಂತ್ಯೆ ನೆನೆಸಿಟ್ಟು, ಆ ನೀರನ್ನು ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
ನೆಲ್ಲಿಕಾಯಿ. ನೆಲ್ಲಿಕಾಯಿ ಸೇವನೆಯಿಂದ ಬರೀ ಶುಗರ್ ಮಾತ್ರವಲ್ಲ. ಹಲವಾರು ರೋಗಗಳಿಂದ ಮುಕ್ತಿ ಸಿಗುತ್ತದೆ. ನಾವು ಗಟ್ಟಿಮುಟ್ಟಾಗಿರಲು ಇದು ಸಹಾಯ ಮಾಡುತ್ತದೆ. ನೆಲ್ಲಿಕಾಯಿ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಶುಗರ್ ಕೂಡ ಕಂಟ್ರೋಲಿನಲ್ಲಿರುತ್ತದೆ. ಹಾಗಾಗಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ, ಒಂದು ಬೆಟ್ಟದ ನೆಲ್ಲಿಕಾಯಿ ಸೇವನೆ ಮಾಡಬೇಕು.
ಹಾಗಲಕಾಯಿ. ಹಾಗಲಕಾಯಿ ಕಹಿಯಾಗಿರುವ ಕಾರಣ, ಇದು ಶುಗರ್‌ನ್ನು ಅಗತ್ಯವಾಗಿ ಕಂಟ್ರೋಲ್ ಮಾಡುತ್ತದೆ. ನೀವು ಹಾಗಲಕಾಯಿ ಪಲ್ಯ, ಜ್ಯೂಸ್, ಚಟ್ನಿ ಮಾಡಿ ಸೇವಿಸಬಹುದು. ಇದು ಕಹಿಯಾಗಿರುವ ಕಾರಣ, ಇದರ ಸೇವನೆಯನ್ನು ಹಲವರು ಹೇಟ್ ಮಾಡುತ್ತಾರೆ. ಆದರೆ ಇದರೊಂದಿಗೆ ಖಾರಾ, ಬೆಲ್ಲ ಬಳಸುವ ಮೂಲಕ ನೀವು ಟೇಸ್ಟಿಯಾದ ಪದಾರ್ಥಗಳನ್ನು ತಯಾರಿಸಿ ತಿನ್ನಬಹುದು.
ನುಗ್ಗೇಕಾಯಿ. ನುಗ್ಗೇಕಾಯಿಯಷ್ಟು ಸ್ವಾದಿಷ್ಟವಾದ ತರಕಾರಿ ಮತ್ತೊಂದಿಲ್ಲವೆನ್ನಬಹುದು. ಯಾವುದಾದರೂ ಸಾಂಬಾರ್ ಮಾಡುವ ವೇಳೆ ಒಂದು ನುಗ್ಗೇಕಾಯಿ ಸೇರಿಸಿದರೆ, ಅದರ ರುಚಿ ದುಪ್ಪಟ್ಟಾಗುತ್ತದೆ. ಸಾಂಬಾರ್ ಬೇಡ ಎನ್ನುವವರು ಕೂಡ, ಬಾಯಿ ಚಪ್ಪರಿಸಿ ಸಾಂಬಾರ್ ತಿನ್ನುತ್ತಾರೆ. ಇದು ಸಕ್ಕರೆ ಖಾಯಿಲೆಯನ್ನು ಕಂಟ್ರೋಲ್ ಮಾಡುವುದಕ್ಕೂ ಕೂಡ ಸಹಾಯಕವಾಗಿದೆ.
Digestion-Indigestion ಅಂದ್ರೆ ಏನು? ಆರೋಗ್ಯಕ್ಕೆ ಯಾವ ಆಹಾರಗಳು ಉತ್ತಮ?

