Insta Trending News: ಇನ್ಸ್ಟಾಗ್ರಾಮ್ನಲ್ಲಿ ಯಾವ ಹಾಡು, ಯಾವ ರೀಲ್ಸ್ ಟ್ರೆಂಡಿಂಗ್‌ನಲ್ಲಿರತ್ತೋ, ಅದೇ ಹಾಡು ಎಲ್ಲರ ಬಾಯಲ್ಲಿರತ್ತೆ. ಇದೀಗ ನಾಲ್ಕು ದಿನದ ಹಿಂದೆಯಷ್ಟೇ ಅಪ್ಲೋಡ್ ಆಗಿದ್ದ ಹಾಡೊಂದು, ಒಂದು ಮಿಲಿಯನ್ ಲೈಕ್ಸ್ ಗಿಟ್ಟಿಸಿಕೊಂಡು ಫೇಮಸ್ ಆಗಿದೆ. ಅದು ಯಾವ ಹಾಡು ಅಂದ್ರೆ ನಾನು ನಂದಿನಿ ಅನ್ನೋ ಹಾಡು.
ರಮ್ಮಿ ಆಡಿದ್ರೆ ಏನಾಗತ್ತೆ..? ರಮ್ಮಿ ಆಡಿ ತನ್ನ ಪಾಡು ಏನಾಯ್ತು ಅನ್ನೋದನ್ನ ಕಾಮಿಡಿ ವೀಡಿಯೋ ಮೂಲಕ ತೋರಿಸಿ, ಫೇಮಸ್ ಆಗಿದ್ದ ವಿಕಿಪೀಡಿಯಾ ವಿಕಿ, ಈ ಹಾಡನ್ನ ಕ್ರಿಯೇಟ್ ಮಾಡಿ, ರೀಲ್ಸ್ ಮಾಡಿದ್ದಾರೆ. ಇವರ ಜೊತೆಗೆ ಇವರ ಜೊತೆಗಾರರೂ ಈ ವೀಡಿಯೋದಲ್ಲಿ ಇದ್ದಾರೆ.
ಹೆಣ್ಣಿನ ಪಾತ್ರಕ್ಕೆ ಬಣ್ಣ ಹಚ್ಚಿರುವ ವಿಕಿ, ಬೆಂಗಳೂರಿಗೆ ಐಟಿ ಕಂಪನಿಯಲ್ಲಿ ಜಾಬ್ ಮಾಡಲು ಬರುವ ಹುಡುಗಿಯಾಗಿ ನಟಿಸಿದ್ದಾರೆ. ಹೀಗೆ ಬರುವ ಹೆಣ್ಣು ಮಕ್ಕಳ ಪಾಡನ್ನು ಈ ಹಾಡಲ್ಲಿ ವಿವರಿಸಿದ್ದಾರೆ. ಆ ಹಾಡಿನ ಲಿರಿಕ್ಸ್ ಹೀಗಿದೆ.
ನಾನು ನಂದಿನಿ, ಬೆಂಗ್ಳೂರಿಗ್ ಬಂದೀನಿ
ಪಿಜೀಲಿ ಇರ್ತೀನಿ, ಐಟಿ ಕೆಲ್ಸಾ ಮಾಡ್ತೀನಿ
ಊಟ ಸರಿ ಇಲ್ಲಾ, ಅಂದ್ರೂನು ತಿಂತೀನಿ
ಬಂದಿದ್ದ ದುಡ್ಡೆಲ್ಲಾ ಮನೇಗ್ ಕಳಸ್ತೀನಿ
ಹೀಗೆ ಹಾಡು ಮುಂದುವರಿಯುತ್ತದೆ. ಈ ರೀಲ್ಸ್ ಅಪ್ಲೋಡ್ ಆಗಿರುವ ನಾಲ್ಕು ದಿನದಲ್ಲೇ ಲಕ್ಷಗಟ್ಟಲೇ ವೀವ್ಸ್, ಲೈಕ್ಸ್ ಪಡೆದುಕೊಂಡಿದೆ. ಅಲ್ಲದೇ, ಹಲವು ಸೋಶಿಯಲ್ ಮೀಡಿಯಾ ಸ್ಟಾರ್ಸ್ ಕೂಡ ಇದಕ್ಕೆ ಕಾಮೆಂಟ್ ಮಾಡಿ, ಶುಭ ಹಾರೈಸಿದ್ದಾರೆ. ಇದು ಐ ಆ್ಯಮ್ ಎ ಬಾರ್ಬಿ ಗರ್ಲ್ ಎಂಬ ಇಂಗ್ಲಿಷ್ ಹಾಡಿನ ರಾಗದಲ್ಲಿ ಹಾಡಲಾಗಿದೆ.
ಹಾಡಿನ ವೀಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.
Bigg Boss : ಕನ್ನಡದ ಬಿಗ್ ಬಾಸ್ ಸೀಸನ್ 10ಕ್ಕೆ ಕೌಂಟ್ ಡೌನ್.! ಸ್ಪರ್ಧಿಗಳು ಯಾರೆಲ್ಲ..?!