Health Tips: ದೊಡ್ಡ ದೊಡ್ಡ ನಗರಗಳಲ್ಲಿ ತೆಲಸ ಅರಸಿ ಬರುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಬದುಕು ಕಟ್ಟಿಕೊಳ್ಳಲೇಬೇಕಾದ ಅನಿವಾರ್ಯ ಕಾರಣದಿಂದ, ಜನ ಹೀಗೆ ವಲಸೆ ಬರುತ್ತಾರೆ. ಜನ ವಲಸೆ ಬಂದಾಗ, ವಾಹನಗಳ ಸಂಖ್ಯೆ ಹೆಚ್ಚಾಗುತ್ತದೆ. ವಾಹನಗಳ ಸಂಚಾರ ಹೆಚ್ಚಾದಾಗ, ಧೂಳು, ಕೀಟಾಣುಗಳು ಕೂಡ ಹೆಚ್ಚಾಗುತ್ತದೆ. ರೋಗಗಳು ಕೂಡ ಬರುತ್ತದೆ. ಅಂಥ ರೊಗಗಳಲ್ಲಿ ಬರುವ ಮೊದಲ ರೋಗವೆಂದರೆ, ಉಸಿರಾಟದ ಸಮಸ್ಯೆ. ಧೂಳಿನಲ್ಲಿ ಓಡಾಡಿ ಉಸಿರಾಟದ ಸಮಸ್ಯೆ ಬರುವುದು ಸಾಮಾನ್ಯ. ಹಾಗಾಗಿ ವೈದ್ಯರಾದ ಭೀಮ್‌ಸೇನ್ ರಾವ್ ಅವರು, ಕರ್ನಾಟಕ ಟಿವಿ ಮೂಲಕ, ಯಾರಿಗೆ ಉಸಿರಾಟದ ತೊಂದರೆ ಇದೆಯೋ, ಅಂಥವರಿಗೆ ಕೆಲ ಟಿಪ್ಸ್ ಕೊಟ್ಟಿದ್ದಾರೆ.
ಮೊದಲನೇಯದಾಗಿ ಉಸಿರಾಟದ ತೊಂದರೆ ಇರುವವರು, ಧೂಳು, ಹೊಗೆಯಿಂದ ದೂರವಿರಬೇಕು. ಇನ್ನು ನಿಮಗೇನಾದರೂ ಅಸ್ತಮಾ ಇದ್ದಲ್ಲಿ, ನೀವು ಖಂಡಿತವಾಗಿಯೂ ವೈದ್ಯರ ಬಳಿ ಹೋಗಿ, ಚಿಕಿತ್ಸೆ ಪಡೆಯಲೇಬೇಕು. ನೀವು ಅಸ್ತಮಾವನ್ನು ಕಡೆಗಣಿಸಿದ್ದಲ್ಲಿ, ಇದು ನಿಮ್ಮ ಆರೋಗ್ಯಕ್ಕೆ ಅಪಾಯ ತಂದೊಡ್ಡಬಹುದು.
ಇನ್ನು ಆಹಾರದ ಬಗ್ಗೆ ಹೇಳುವುದಾದರೆ, ಉಸಿರಾಟದ ಸಮಸ್ಯೆ ಇದ್ದವರು ಪ್ರೋಟೀನ್ ಇರುವ ಆಹಾರವನ್ನು ಹೆಚ್ಚು ಸೇವಿಸಬೇಕು. ಇನ್ನು ಮಾಸ್ಕ್ ಧರಿಸಿ ಓಡಾಡುವುದು ತುಂಬಾ ಉತ್ತಮ. ಇದರಿಂದ ಧೂಳು, ಹೊಗೆ ನಮ್ಮ ದೇಹ ಸೇರುವುದನ್ನು ನಾವು ತಡೆಯಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಮನೆ ರುಚಿ ಕೊಡುವ ಐಸ್ಕ್ರೀಮ್ ಟೇಸ್ಟ್ ಮಾಡಬೇಕು ಅಂದ್ರೆ ನೀವು ಇಲ್ಲಿ ಬರ್ಲೇಬೇಕು..
ನಿಮ್ಮ ಸೀರೆಗೆ ತಕ್ಕ ಮ್ಯಾಚಿಂಗ್ ಡಿಸೈನರ್ ಬ್ಲೌಸ್ ಬೇಕಾದಲ್ಲಿ ಈ ಶಾಪ್‌ಗೆ ಭೇಟಿ ಕೊಡಿ..
ಗಂಟಲ ಕಿರಿಕಿರಿಯಾದರೆ ಮನೆಮದ್ದು ಮಾಡುವುದು ಹೇಗೆ..? ಇಲ್ಲಿದೆ ನೋಡಿ ವೈದ್ಯರ ಸಲಹೆ




