Friday, September 20, 2024

Latest Posts

ವಿವಾಹಿತೆಯರು ಇಂಥ ತಪ್ಪುಗಳನ್ನು ಎಂದಿಗೂ ಮಾಡಬೇಡಿ..

- Advertisement -

Life Style: ವಿವಾಹ ಅನ್ನೋದು ಹೆಣ್ಣಿನ ಜೀವನವನ್ನು ಬದಲಾಯಿಸುವ ಘಟನೆ. ಕೆಲವರ ಜೀವನ ಉತ್ತಮವಾಗಿ ಬದಲಾಗುತ್ತದೆ. ಇನ್ನು ಕೆಲವರ ಜೀವನ ಕೆಟ್ಟದಾಗಿ ಬದಲಾಗುತ್ತದೆ. ಅದೆಲ್ಲ ಅವರವರ ತಿಳುವಳಿಕೆ, ತಾಳ್ಮೆ, ಹಣೆಬರಹಕ್ಕೆ ಬಿಟ್ಟಿದ್ದು. ಆದರೆ ಓರ್ವ ಹೆಣ್ಣಿನ ವೈವಾಹಿಕ ಜೀವನ ಉತ್ತಮವಾಗಿ ಇರಬೇಕು ಅಂದ್ರೆ, ಆಕೆ ಕೆಲ ತಪ್ಪುಗಳನ್ನು ಮಾಡಬಾರದು. ಅದು ಎಂಥ ತಪ್ಪುಗಳು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ತಪ್ಪು ಪರಪುರುಷರ ಸಂಗ ಮಾಡಬಾರದು. ಇದು ಗಂಡಸರಿಗೂ ಅನ್ವಯಿಸುತ್ತದೆ. ಪರ ಪುರುಷ ಅಥವಾ ಸ್ತ್ರೀಯ ಸಹವಾಸ ಮಾಡುವುದರಿಂದ, ಸಹಜವಾಗಿ ದಾಂಪತ್ಯ ಜೀವನದಲ್ಲಿ ಬಿರುಕು ಬರುತ್ತದೆ. ಅಲ್ಲದೇ, ಆ ಮನೆಜನರ ಮರ್ಯಾದೆ ಹರಾಜಾಗುತ್ತದೆ. ತವರು ಮನೆಯಲ್ಲಿ ಅಪ್ಪ ಅಮ್ಮನೂ ತಲೆತಗ್ಗಿಸಬೇಕಾಗುತ್ತದೆ. ಹಾಗಾಗಿ ಇಂಥ ಕೆಲಸ ಮಾಡಬೇಡಿ.

ಎರಡನೇಯ ತಪ್ಪು ಮನೆಯ ನೆಮ್ಮದಿ ಹಾಳು ಮಾಡುವ ಕೆಲಸ ಮಾಡಬೇಡಿ. ಈ ಮಾತಿನ ಅರ್ಥವೇನೆಂದರೆ, ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಹೆಣ್ಣು ಮಕ್ಕಳು ಸಂಜೆ ಹೊತ್ತಿಗೆ ತಲೆಬಾಚಬಾರದು, ತಲೆಸ್ನಾನ ಮಾಡಬಾರದು, ತಲೆಗೆ ಎಣ್ಣೆ ಹಚ್ಚಬಾರದು, ಉಗುರು ತೆಗೆಯಬಾರದು, ನಿದ್ರಿಸಬಾರದು, ಹೀಗೆ ಹಲವು ಕೆಲಸಗಳನ್ನು ಮಾಡಬಾರದು. ಇಂಥ ಕೆಲಸ ಮಾಡಿದರೆ, ಮನೆಯಲ್ಲಿ ಆರ್ಥಿಕ ಸಮಸ್ಯೆ ಬರುತ್ತದೆ. ನೆಮ್ಮದಿಯೂ ಹಾಳಾಗುತ್ತದೆ. ಪ್ರತಿದಿನ ಪ್ರತೀ ಕ್ಷಣ ಪತಿ-ಪತ್ನಿ ಜಗಳವಾಡುತ್ತಾರೆ.

ಮೂರನೇಯ ತಪ್ಪು ತಾಳ್ಮೆಗೆಡಬೇಡಿ. ಹೆಣ್ಣಿನ ತಾಳ್ಮೆ ಅನ್ನೋದು ತುಂಬಾ ಮುಖ್ಯವಾಗಿರುತ್ತದೆ. ತವರು ಮನೆಯಲ್ಲಿ ಸಲುಗೆಯಿಂದ, ತನ್ನದೇ ಸರಿ ಎನ್ನುವಂತೆ ಆಕೆ ಬೆಳೆದಿರಬಹುದು. ಆದರೆ ಗಂಡನ ಮನೆಯಲ್ಲಿ ಎಲ್ಲದಕ್ಕೂ ತಾಳ್ಮೆಯಿಂದ ವರ್ತಿಸಬೇಕು. ಆಗಲೇ ಆ ಸಂಸಾರ ಚೆನ್ನಾಗಿರುತ್ತದೆ. ಆದರೆ ಪತಿ ಹೊಡೆದಾಗ, ದಬ್ಬಾಳಿಕೆ ಮಾಡಿದಾಗ, ಅದನ್ನು ಸಹಿಸಬೇಕು ಅಂತಲ್ಲ. ಸಣ್ಣಪುಟ್ಟ ಜಗಳವಾದಾಗ ಮಾತ್ರ ತಾಳ್ಮೆಯಿಂದ ವರ್ತಿಸಬೇಕು.

ನಾಲ್ಕನೇಯ ತಪ್ಪು ಒಬ್ಬರನ್ನ ಬಿಟ್ಟು ಇನ್ನೊಬ್ಬರು ಇರಬೇಡಿ. ಗಂಡ ಹೆಂಡತಿ ಅಂದ ಮೇಲೆ ಪ್ರೀತಿ, ಮುನಿಸು ಎಲ್ಲವೂ ಇರಬೇಕು. ಆಗಲೇ ಅದೊಂದು ಸುಂದರ ಸಂಸಾರವೆನ್ನಿಸಿಕೊಳ್ಳುವುದು. ಜೊತೆಗೆ ಜಗಳವೂ ಇರಬೇಕು. ಆದರೆ ಆ ಜಗಳ ವಾರಗಟ್ಟಲೇ ಬೇರೆ ಬೇರೆ ಇರುವ ರೀತಿಯಾಗಲಿ, ಅಥವಾ ವಾರಗಟ್ಟಲೇ ಮಾತು ಬಿಟ್ಟು ಇರುವುದಾಗಲಿ ಇರಬಾರದು. ಹೀಗೆ ಮಾಡಿದ್ದಲ್ಲಿ, ಆ ಸಂಬಂಧ ಮುರಿಯುವ ಸಾಧ್ಯತೆ ಇರುತ್ತದೆ.

ಮಳೆಗಾಲದಲ್ಲಿ ಈ ರೋಗಗಳ ಬಗ್ಗೆ ಎಚ್ಚರವಿರಲಿ..

ಹೋಲ್‌ಸೇಲ್ ಬೆಲೆಗೆ ಉತ್ತಮ ಕ್ವಾಲಿಟಿಯ ಬಟ್ಟೆ ಬೇಕಾಗಿದ್ದಲ್ಲಿ ಈ ಅಂಗಡಿಗೆ ಬನ್ನಿ..

ಮಾವಿನಹಣ್ಣಿನೊಂದಿಗೆ ಈ ಆಹಾರವನ್ನು ಎಂದಿಗೂ ಸೇವಿಸಬೇಡಿ..

- Advertisement -

Latest Posts

Don't Miss