Monday, December 23, 2024

Latest Posts

ಯಶಸ್ವಿ ಜನರಿಗೆ ಈ ಅಭ್ಯಾಸಗಳಿರುತ್ತದೆ ನೋಡಿ..

- Advertisement -

Life style: ಜೀವನದಲ್ಲಿ ನಾವಂದುಕೊಂಡಿದ್ದನ್ನು ಸಾಧಿಸುವುದು ಸುಲಭದ ಕೆಲಸವಲ್ಲ. ಅದಕ್ಕಾಗಿ ನಾವು ಹಲವು ವರ್ಷಗಳ ಕಾಲ, ನಮ್ಮ ಕೆಲಸದಲ್ಲಿ ತೊಡಗಬೇಕು. ಎಲ್ಲ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಬದುಕಬೇಕು. ಕೆಲವರು ಮನೆಜನರಿಂದ ಎಷ್ಟೋ ವರ್ಷಗಳ ಕಾಲ ದೂರವಿದ್ದು,ಯಶಸ್ವಿಯಾಗುತ್ತಾರೆ. ಏಕೆಂದರೆ ನಾವು ಯಾವುದನ್ನಾದರೂ ಪಡೆಯಬೇಕು ಎಂದರೆ, ಇರುವದನ್ನು ತೊರೆಯಬೇಕು. ಆಗಲೇ ಯಶಸ್ಸು ನಮ್ಮ ಪಾಲಾಗುತ್ತದೆ. ಇಂದು ನಾವು ಯಶಸ್ವಿ ಜನರಿಗೆ ಇರುವ ಹವ್ಯಾಸಗಳ ಬಗ್ಗೆ ಕೆಲ ಮಾಹಿತಿ  ನೀಡಲಿದ್ದೇವೆ.

ಯಶಸ್ವಿ ಜನರ ಮೊದಲ ಅಭ್ಯಾಸವೆಂದರೆ, ಹಲವು ಪರಿಸ್ಥಿತಿಗಳಲ್ಲಿ ತಮ್ಮನ್ನು ತಾವು ಕಂಟ್ರೋಲ್ ಮಾಡಿಕೊಳ್ಳುವುದು. ವಿದೇಶದಲ್ಲಿ ಒಂದು ಪರೀಕ್ಷೆ ಮಾಡಲಾಗಿತ್ತು. ಅದೇನೆಂದರೆ ಮಕ್ಕಳಿಗೆ ಮಾರ್ಷಮೆಲ್ಲೋಸ್ ಕೊಡಲಾಗುತ್ತದೆ. ಅವರಿಗೆ ಎರಡು ಆಪ್ಶನ್ ಕೊಡಲಾಗುತ್ತದೆ. ಮೊದಲನೇಯದ್ದು ಕೊಟ್ಟ ತಕ್ಷಣ ಯಾರು ಮಾರ್ಷ್‌ಮೆಲ್ಲೋಸ್ ತಿನ್ನುತ್ತಾರೋ, ಅವರಿಗೆ ಒಂದೇ ಮಾರ್ಷ್‌ಮೆಲ್ಲೋಸ್. ಇನ್ನೊಂದು ಮಾರ್ಷ್‌ಮೆಲ್ಲೋಸ್ ಸಿಗುತ್ತದೆ ಎಂದು ಯಾರು 15 ನಿಮಿಷ ಕಾಯುತ್ತಾರೋ, ಅವರಿಗೆ ಇನ್ನೊಂದು ಮಾರ್ಷ್‌ಮೆಲ್ಲೋಸ್. ಅಂಥವರು ಎರಡು ಮಾರ್ಷ್‌ಮಾಲ್ಲೋಸ್ ಒಟ್ಟಿಗೆ ತಿನ್ನಬಹುದು.

ಯಾವ ಮಕ್ಕಳು ಮಾರ್ಷ್‌ಮೆಲ್ಲೋಸ್ ಕೊಟ್ಟ ತಕ್ಷಣವೇ ತಿಂದರೋ, ಅವರು ಜೀವನದಲ್ಲಿ ಯಶಸ್ವಿಯಾಗಲೇ ಇಲ್ಲ. ಯಾರು ತಾಳ್ಮೆಯಿಂದ ಇದ್ದು ತಿನ್ನುವುದನ್ನು ಕಂಟ್ರೋಲ್ ಮಾಡಿ, ಇನ್ನೊಂದು ಮಾರ್ಷ್‌ಮೆಲ್ಲೋಸ್ ತಿಂದರೋ, ಅವರು ಉತ್ತಮ ಮತ್ತು ಯಶಸ್ವಿ ವ್ಯಕ್ತಿಗಳಾದರಂತೆ. ಹಾಗಾಗಿ ನಿಮ್ಮನ್ನು ನೀವು ಯಾವುದೇ ಪರಿಸ್ಥಿತಿಯಲ್ಲೂ ತಾಳ್ಮೆಯಿಂದ ಇರಬೇಕು. ಆಗಲೇ ನೀವು ಯಶಸ್ಸು ಸಾಧಿಸಲು ಸಾಧ್ಯವಾಗುವುದು.

ಯಾವುದೇ ಕೆಲಸ ಮಾಡುವಾಗಲು ಏಕಾಗೃತೆಯಿಂದ ಇರುವುದು ಯಶಸ್ವಿ ವ್ಯಕ್ತಿಯ ಎರಡನೇಯ ಅಭ್ಯಾಸ. ನಾವು ಕೆಲ ಕೆಲಸಗಳನ್ನು ಮಾಡುವಾಗ, ಯಾವುದೋ ವಿಷಯದ ಬಗ್ಗೆ ಯೋಚಿಸುತ್ತಿರುತ್ತೇವೆ. ಓದುವಾಗ, ಕೆಲಸ ಮಾಡುವಾಗ, ಅಥವಾ ಇನ್ನೇನೋ ಮಾಡುವಾಗ, ಇನ್ಯಾವುದರ ಬಗ್ಗೆಯೋ ಯೋಚಿಸುತ್ತಿರುತ್ತೇವೆ. ಇದರಿಂದಲೇ ನಾವು ಮಾಡುವ ಕೆಲಸದಲ್ಲಿ ನಾವು ಫೇಲ್ ಆಗುವುದು. ಹಾಗಾಗಿ ನಾವು ಯಾವ ಕೆಲಸ ಮಾಡುತ್ತೇವೋ, ಅದರಲ್ಲಿ ಏಕಾಗೃತೆಯಲ್ಲಿರಬೇಕು.

ಇದರ ಅರ್ಥವೆಂದರೆ, ಒಂದೇ ಸಲಕ್ಕೆ ಎರಡೆರಡು ಕೆಲಸಗಳನ್ನು ಮಾಡಬಾರದು. ಟಿವಿ ನೋಡುತ್ತ, ತಿಂಡಿ ತಿನ್ನುವುದು. ಓದುವುದು, ಬರೆಯುವುದು, ಕೆಲಸ ಮಾಡುವುದು ಇವೆಲ್ಲ ಉತ್ತಮ ಅಭ್ಯಾಸವಲ್ಲ. ಯಾವುದಾದರೂ ಒಂದು ಕೆಲಸ ಮಾಡಬೇಕು. ತಿಂಡಿ ತಿನ್ನುವಾಗ, ಅದರೆಡೆಗೆ ಸರಿಯಾಗಿ ಗಮನ ಕೊಟ್ಟು ತಿಂದರೆ, ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಅದೇ ರೀತಿ, ಓದ, ಕೆಲಸ ಏನೇ ಇರಲಿ. ಆ ಕೆಲಸವೊಂದನ್ನೇ ಮಾಡಿದಾಗ, ಆ ಕೆಲಸ ಪರಿಪೂರ್ಣಗೊಳ್ಳುತ್ತದೆ.

ಮಳೆಗಾಲದಲ್ಲಿ ಈ ರೋಗಗಳ ಬಗ್ಗೆ ಎಚ್ಚರವಿರಲಿ..

ಹೋಲ್‌ಸೇಲ್ ಬೆಲೆಗೆ ಉತ್ತಮ ಕ್ವಾಲಿಟಿಯ ಬಟ್ಟೆ ಬೇಕಾಗಿದ್ದಲ್ಲಿ ಈ ಅಂಗಡಿಗೆ ಬನ್ನಿ..

ಮಾವಿನಹಣ್ಣಿನೊಂದಿಗೆ ಈ ಆಹಾರವನ್ನು ಎಂದಿಗೂ ಸೇವಿಸಬೇಡಿ..

- Advertisement -

Latest Posts

Don't Miss