Health tips: ಬೆಳಿಗ್ಗಿನ ತಿಂಡಿ ಎಷ್ಟು ಆರೋಗ್ಯಕರವಾಗಿರುತ್ತದೆಯೋ, ನಮ್ಮ ಜೀವನವೂ ಅಷ್ಟೇ ಆರೋಗ್ಯಕರವಾಗಿರುತ್ತದೆ. ಯಾಕಂದ್ರೆ, ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಏನನ್ನು ಸೇವಿಸುತ್ತೆವೋ, ಅದೇ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ ನೀವು ಬೆಳಿಗ್ಗೆ ತಿಂಡಿಯೊಂದಿಗೆ 4 ಪದಾರ್ಥ ತಿನ್ನಬೇಕು. ಅದೇನು ಅಂತಾ ತಿಳಿಯೋಣ ಬನ್ನಿ..
ಚೀಯಾ ಸೀಡ್ಸ್. ರಾತ್ರಿ 1 ಸ್ಪೂನ್ ಚೀಯಾ ಸೀಡ್ಸ್ ನೆನೆಸಿಟ್ಟು, ಮರುದಿನ ಫ್ರೂಟ್ ಸಲಾಡ್ ಅಥವಾ ಜ್ಯೂಸ್‌ನೊಂದಿಗೆ ಮಿಕ್ಸ್ ಮಾಡಿಕೊಂಡು, ಇದನ್ನು ಸೇವಿಸಬಹುದು. ಚೀಯಾ ಸೀಡ್ಸ್ ಸೇವನೆಯಿಂದ, ನಿಮ್ಮ ತ್ವಚೆ ಸುಂದರವಾಗುತ್ತದೆ. ನಿಮ್ಮ ದೇಹದ ತೂಕ ಇಳಿಯುತ್ತದೆ. ನಿಮ್ಮ ಹೊಟ್ಟೆಯ ಬೊಜ್ಜು ಕೂಡ ಕರಗುತ್ತದೆ. ಅಲ್ಲದೇ ನೀವು ಯಂಗ್ ಆಗಿ ಕಾಣುವಂತೆ ಮಾಡುವಲ್ಲಿ ಚೀಯಾ ಸೀಡ್ಸ್ ಸಹಕಾರಿಯಾಗಿದೆ.
ವಾಲ್ನಟ್. ಅಂದ್ರೆ ಅಖ್ರೋಟ್. ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಅಖ್ರೋಟನ್ನು ನೀರಿನಲ್ಲಿ ನೆನೆಸಿ ತಿನ್ನುವುದರಿಂದ ನಿಮ್ಮ ಹಲವು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಇದರ ಸೇವನೆಯಿಂದ ಶುಗರ್ ಕಂಟ್ರೋಲಿನಲ್ಲಿರುತ್ತದೆ. ಥೈರಾಯ್‌ಡ್ ಸಮಸ್ಯೆ, ಪಿಸಿಓಡಿ ಸಮಸ್ಯೆ ಬರವುದಿಲ್ಲ. ನೆನಪಿನ ಶಕ್ತಿ ಹೆಚ್ಚುತ್ತದೆ. ಅಲ್ಲದೇ, ನಿಮ್ಮ ಚರ್ಮ ಕೂಡ ಸುಕ್ಕುಗಟ್ಟುವುದಿಲ್ಲ. ನಿಮ್ಮ ಆರೋಗ್ಯ ಮತ್ತು ಸೌಂದರ್ಯ ಅಭಿವೃದ್ಧಿ ಮಾಡುವುದರಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
ಅಂಜೂರ. ಪ್ರತಿದಿನ ಒಂದು ಅಂಜೂರವನ್ನು ನೀರಿನಲ್ಲಿ ನೆನೆಸಿಟ್ಟು, ತಿಂಡಿಯೊಂದಿಗೆ ತಿನ್ನುವುದರಿಂದ ನೀವು ಹಲವು ರೋಗಗಳಿಂದ ಮುಕ್ತಿ ಪಡೆಯುತ್ತೀರಿ. ಬಿಪಿ, ಶುಗರ್, ಕೈ ಕಾಲು ನೋವು, ನಿಶ್ಶಕ್ತಿ ಇರುವವರಿಗೆ ಇದು ಉತ್ತಮ ಆಹಾರ. ಅಲ್ಲದೇ ಇದರ ಸೇವನೆಯಿಂದ ನಿಮ್ಮ ಚರ್ಮ ಸುಕ್ಕುಗಟ್ಟುವುದಿಲ್ಲ. ನಿಮ್ಮ ಮುಖ ಕಾಂತಿಯುತವಾಗುತ್ತದೆ. ನಿಮ್ಮ ಕೂದಲಿನ ಆರೋಗ್ಯ ಉತ್ತಮವಾಗಿರುತ್ತದೆ.
ಡ್ರೈಯ್ಡ್ ಚೆರ್ರಿಸ್. ಪ್ರತಿದಿನ ಬೆಳಿಗ್ಗೆ ತಿಂಡಿ ತಿನ್ನುವಾಗ ನೀವು 5ರಿದ 6 ಡ್ರೈಯ್ಡ್ ಚೆರ್ರಿ ತಿನ್ನುವುದರಿಂದ ನಿಮ್ಮ ಸೌಂದರ್ಯ ಇಮ್ಮಡಿಯಾಗುತ್ತದೆ. ಮತ್ತು ಇದು ರುಚಿಯಾದ ಪದಾರ್ಥವಾಗಿದೆ.
ಈ ಅಂಗಡಿಗೆ ಬಂದ್ರೆ ಕೆಜಿ ಲೆಕ್ಕದಲ್ಲಿ ಕಡಿಮೆ ಬೆಲೆಗೆ ಬಟ್ಟೆ ತೆಗೆದುಕೊಳ್ಳಬಹುದು..
ಪುಟ್ಟ ಮಕ್ಕಳಿಗೆ ಬಿಕ್ಕಳಿಕೆ ಬರಲು ಕಾರಣವೇನು..? ಇದೊಂದು ಸಮಸ್ಯೆನಾ..?