Shopping: ನಾವು ನಿಮಗೆ ಗೋವಾದ ಓಲ್ಡ್ ಗೋವಾ ಚರ್ಚ್ ವಿಶೇಷತೆಗಳ ಬಗ್ಗೆ ವೀಡಿಯೋ ಸಮೇತವಾಗಿ ಈಗಾಗಲೇ ವಿವರಿಸಿದ್ದೆವು. ಇದೀಗ, ಗೋವಾದ ಮಾಪುಸಾದಲ್ಲಿ ಶಾಪಿಂಗ್ ಅನುಭವ ಹೇಗಿರುತ್ತೆ ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ..
ಗೋವಾದಲ್ಲಿರುವ ಒಂದು ಊರಿನ ಹೆಸರು ಮಾಪುಸಾ. ಇದನ್ನು ಎರಡು ಮೂರು ರೀತಿಯಲ್ಲಿ ಉಚ್ಛಾರ ಮಾಡಲಾಗುತ್ತದೆ. ಮಾಪುಸಾ, ಮಾಪ್ಸಾ, ಮ್ಯಾಪ್ಸಾ. ಹೀಗೆ ಉಚ್ಛರಿಸಲಾಗುತ್ತದೆ. ಇದು ಕೊಂಕಣಿಯಿಂದ ಬಂದಿರುವ ಹೆಸರು. ಮ್ಯಾಪ ಅಂದ್ರೆ ಅಳತೆ, ಸಾ ಅಂದ್ರೆ ತುಂಬಿಸೋದು ಅಂಥ ಅರ್ಥ. ಮಾಪುಸಾ ಮಾರ್ಕೇಟ್‌ನಲ್ಲಿ ಉತ್ತಮ ಕ್ವಾಲಿಟಿಯ ಬಟ್ಟೆ, ಕೂಲಿಂಗ್ ಗ್ಲಾಸ್, ಹ್ಯಾಟ್ ಸೇರಿ ಹಲವು ವಸ್ತುಗಳನ್ನು ನೀವು ಖರೀದಿಸಬಹುದು.
ನೀವು ಇಲ್ಲಿ ಶಾಪಿಂಗ್ ಮಾಡಬೇಕು ಅಂದ್ರೆ, ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯೊಳಗೆ ಈ ಮಾಪುಸಾ ಮಾರ್ಕೆಟ್‌ಗೆ ಹೋಗಬೇಕು. ಇಲ್ಲಿ ಎಲ್ಲ ರೀತಿಯ ಬಟ್ಟೆ, ಸರ, ಬಳೆ, ವ್ಯಾನಿಟಿ ಬ್ಯಾಗ್, ಬೇರೆ ಬೇರೆ ರೀತಿಯ ಬ್ಯಾಗ್‌ಗಳು, ಚಪ್ಪಲಿ ಸೇರಿ ಹಲವು ವಸ್ತುಗಳು ಸಿಗುತ್ತದೆ. ಅಲ್ಲದೇ, ಆ್ಯಂಟಿಕ್ಸ್, ಗೋವನ್ ಪಾಟರೀಸ್, ಬೇರೆ ಬೇರೆ ರೀತಿಯ ಬಟ್ಟೆ ಮೆಟಿರಿಯಲ್‌ಗಳು ಸಿಗುತ್ತದೆ. ಅಲ್ಲದೇ, ಈ ಮಾರುಕಟ್ಟೆಯಲ್ಲಿ ತರಕಾರಿ, ಧಾನ್ಯ, ಡ್ರೈಫ್ರೂಟ್ಸ್ ಎಲ್ಲವೂ ಸಿಗುತ್ತದೆ. ಆದರೆ ಇದನ್ನೆಲ್ಲ ಖರೀದಿಸುವಾಗ, ಸರಿಯಾಗಿ ಗಮನಿಸಿ ಖರೀದಿಸಬೇಕು.
ಇನ್ನು ಗೋವಾಕ್ಕೆ ಹೋದಾಗ ಶುಕ್ರವಾರದ ದಿನ ನೀವು ಮಾಪುಸಾ ಮಾರುಕಟ್ಟೆಗೆ ಹೋದರೆ, ಅಲ್ಲಿ ಬ್ರೋಕರ್ ಅಥವಾ ಮಧ್ಯವರ್ತಿಗಳ ಸಹಾಯವಿಲ್ಲದೇ, ಡೈರೆಕ್ಟ್ ಆಗಿ, ಯಾರು ವಸ್ತುಗಳನ್ನು ತಯಾರಿಸುತ್ತಾರೋ, ಅವರಿಂದಲೇ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಬಹುದು. ಇನ್ನು ಇಲ್ಲಿ ಫ್ರೆಶ್ ಆಗಿರುವ ಊಟ, ತಿಂಡಿಗಳು ಸಿಗುತ್ತದೆ. ನಾನ್‌ವೆಜ್‌ನ್ನು ಇಲ್ಲಿ ಹೆಚ್ಚಾಗಿ ಮಾರಾಟ ಮಾಡುತ್ತಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..