Spiritual: ಉಡುಗೊರೆ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ..? ಅಪರಿಚಿತರು ಕೊಡುವ ಉಡುಗೊರೆಗಿಂತ, ಪರಿಚಯಸ್ಥರು, ಪ್ರೀತಿ ಪಾತ್ರರು ಕೊಡುವ ಉಡುಗೊರೆ, ಮನಸ್ಸಿಗೆ ಖುಷಿ ಕೊಡುತ್ತದೆ. ಆದರೆ ಹಾಗೆ ಗಿಫ್ಟ್ ಕೊಟ್ಟ ಬಳಿಕ, ಆ ಗಿಫ್ಟ್ ಕೊಟ್ಟವರಿಗೂ, ತೆಗೆದುಕೊಂಡವರಿಗೂ ಒಳ್ಳೆಯದಾಗಬೇಕು. ಹಾಗಾಗಬೇಕಾದರೆ, ಎಂಥ ವಸ್ತುಗಳನ್ನು ಗಿಫ್ಟ್ ಆಗಿ ನೀಡಬಾರದು ಅಂತಾ ನಾವಿಂದು ಹೇಳಲಿದ್ದೇವೆ.
ವಾಚ್. ವಾಚ್ ಗಿಫ್ಟ್ ಮಾಡುವ ಪದ್ಧತಿ ಹಲವು ಕಡೆ ಇದೆ. ಆದರೆ ವಾಚ್ ಗಿಫ್ಟ್ ಕೊಡಬಾರದು ಅಂತಾ ಹೇಳಲಾಗತ್ತೆ. ಯಾಕಂದ್ರೆ ನಮ್ಮ ಉತ್ತಮ ಸಮಯ ಅವರೆಡೆಗೆ ವಾಲುತ್ತದೆ. ನಮ್ಮ ಸಮಯ ಕೆಟ್ಟದಾಗಿ ಬದಲಾಗುತ್ತದೆ. ದುರಾದೃಷ್ಟ ನಮ್ಮ ಬೆನ್ನೇರುತ್ತದೆ ಅನ್ನೋ ನಂಬಿಕೆ ಇದೆ. ಅಲ್ಲದೇ, ಪತಿ- ಪತ್ನಿ ವಾಚ್ ಗಿಫ್ಟ್ ಮಾಡಿಕೊಂಡರೆ, ದಾಂಪತ್ಯ ಜೀವನ ಅಷ್ಟು ಉತ್ತಮವಾಗಿರುವುದಿಲ್ಲ ಅಂತಾ ಹೇಳಲಾಗುತ್ತದೆ.
ಮನಿಪ್ಲಾಂಟ್. ಮನಿಪ್ಲಾಂಟ್ ಮನೆಯಲ್ಲಿದ್ದರೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾಗಿ ಅಂಥಹುದನ್ನು ನಾವು ಖರೀದಿಸಿ ತರಬೇಕು. ಅಥವಾ ನಮಗೆ ಯಾರಾದರೂ ಗಿಫ್ಟ್ ಕೊಟ್ಟಿರಬೇಕು. ಅದನ್ನು ಬಿಟ್ಟು ನೀವು ಬೇರೆಯವರಿಗೆ ಮನಿಪ್ಲಾಂಟ್ ಕೊಟ್ಟರೆ, ನಿಮ್ಮ ಅದೃಷ್ಟ ಅವರಿಗೆ ಹೋಗುತ್ತದೆ ಎಂದರ್ಥ.
ಕಬ್ಬಿಣದ ವಸ್ತು. ಕಬ್ಬಿಣದ ಪಾತ್ರೆ, ವಸ್ತುಗಳನ್ನು ಗಿಫ್ಟ್ ಕೊಡಬಾರದು. ಇದರಲ್ಲಿ ವಾಹನವೂ ಬರುತ್ತದೆ. ನೀವು ಯಾರಿಗಾದರೂ ವಾಹನ ಗಿಫ್ಟ್ ಆಗಿ ಕೊಡುವ ಬದಲು, ಅವರಿಗೆ ದುಡ್ಡು ಕೊಟ್ಟು ವಾಹನ ಖರೀದಿಸಲು ಹೇಳಿ.
ಚರ್ಮದ ವಸ್ತುಗಳು. ಚರ್ಮದ ಚಪ್ಪಲಿ, ವಾಚ್, ಬ್ಯಾಗ್ ಇವುಗಳನ್ನ ಗಿಫ್ಟ್ ಕೊಡಬಾರದು ಅಂತಾ ಹೇಳಲಾಗುತ್ತದೆ. ಏಕೆಂದರೆ ಇವುಗಳು ಪ್ರಾಣಿಗಳ ಚರ್ಮದಿಂದ ಮಾಡಿದ್ದು, ಇಂಥ ಉಡುಗೊರೆ ಕೊಡುವುದು ಅಮಂಗಳವೆಂದು ಹೇಳಲಾಗುತ್ತದೆ.