Tuesday, March 11, 2025

Latest Posts

ಈ ಲಕ್ಷಣಗಳು ಯಾರಲ್ಲಿ ಇರುತ್ತದೆಯೋ, ಅಂಥವರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ..

- Advertisement -

Health Tips: ಹಲವು ಕ್ಯಾನ್ಸರ್ ರೋಗಿಗಳು ಕೊನೆಯ ಸ್ಟೇಜ್‌ಗೆ ಹೋದಾಗಲೇ, ಎಚ್ಚೆತ್ತುಕೊಂಡು ಕ್ಯಾನ್ಸರ್‌ಗೆ ಚಿಕಿತ್ಸೆ ತೆಗೆದುಕೊಳ್ಳುತ್ತಾರೆ. ಯಾಕಂದ್ರೆ ಅವರಿಗೆ ಕ್ಯಾನ್ಸರ್ ಬಂದಿರುವುದೇ ಗೊತ್ತಾಗುವುದಿಲ್ಲ. ಯಾಕಂದ್ರೆ ಅವರ ಆರೋಗ್ಯದಲ್ಲಾಗುವ ಬದಲಾವಣೆಯನ್ನು ಅವರು ಗಮನಿಸಿರುವುದಿಲ್ಲ. ಹಾಗಾಗಿ ನಾವಿಂದು ಕ್ಯಾನ್ಸರ್ ಇರುವವರಿಗೆ ಎಂಥ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಅಂತಾ ಮಾಹಿತಿ ನೀಡಲಿದ್ದೇವೆ.

ಮೊದಲನೇಯ ಲಕ್ಷಣ. ದೇಹದ ತೂಕ ಕಡಿಮೆಯಾಗುವುದು. ಟಿಬಿ ಇದ್ದಾಗ, ಬಿಪಿ, ಶುಗರ್ ಇದ್ದಾಗಲೂ ದೇಹದ ತೂಕ ಇದ್ದಕ್ಕಿದ್ದಂತೆ ಕಡಿಮೆಯಾಗುತ್ತದೆ. ಆದರೆ ಕ್ಯಾನ್ಸರ್ ಶುರುವಾದಾಗಲೂ ದೇಹದ ತೂಕ ವಿನಾಕಾರಣ ಕಡಿಮೆಯಾಗುತ್ತದೆ. ನೀವು ಡಯಟ್ ಮಾಡದಿದ್ದರೂ, ಹೆಚ್ಚು ಮನೆಗೆಲಸ ಮಾಡದಿದ್ದರೂ, ಸರಿಯಾಗಿ ಊಟ ಮಾಡಿದರೂ ಕೂಡ, ನಿಮ್ಮ ದೇಹದ ತೂಕ ತೀರಾ ಕಡಿಮೆಯಾಗುತ್ತಿದೆ ಎಂದಲ್ಲಿ, ಇದು ಕ್ಯಾನ್ಸರ್ ಲಕ್ಷಣವಾಗಿರಬಹುದು.

ಎರಡನೇಯ ಲಕ್ಷಣ ಸಿಕ್ಕಾಪಟ್ಟೆ ಸುಸ್ತಾಗುವುದು. ನೀವು ಏನು ಕೆಲಸ ಮಾಡದಿದ್ದರೂ, ಕೊಂಚ ನಡೆದರೂ ಸಿಕ್ಕಾಪಟ್ಟೆ ಸುಸ್ತಾಗುತ್ತಿದ್ದರೆ, ಇದು ಕ್ಯಾನ್ಸರ್ ಲಕ್ಷಣವಾಗಿರುತ್ತದೆ. ಇದೇ ರೀತಿ ಬೇರೆ ಬೇರೆ ಕಾರಣಕ್ಕೂ ಸುಸ್ತಾಗಬಹುದು. ಅದನ್ನು ನೀವು ಪರೀಕ್ಷಿಸಿಕೊಳ್ಳುವುದು ಉತ್ತಮ.

ಮೂರನೇಯ ಲಕ್ಷಣ ದೇಹದಲ್ಲಿ ಸಿಕ್ಕಾಪಟ್ಟೆ ನೋವಾಗುವುದು. ನೀವು ಯಾವುದೇ ಮಾತ್ರೆ ತೆಗೆದುಕೊಂಡರೂ, ಏನೇ ಔಷಧಿ ಹಚ್ಚಿದರೂ, ಆ ನೋವು ವಾಸಿಯಾಗದೇ ಇದ್ದಲ್ಲಿ, ಆ ಬಗ್ಗೆ ವೈದ್ಯರಲ್ಲಿ ವಿಚಾರಿಸುವುದು ಉತ್ತಮ. ಏಕೆಂದರೆ ಇದು ಕ್ಯಾನ್ಸರ್ ಲಕ್ಷಣವಾಗಿದೆ.

ನಾಲ್ಕನೇಯ ಲಕ್ಷಣ. ನಿಮ್ಮ ತ್ವಚೆಯ ಬಣ್ಣ ಬದಲಾಗುವುದು. ಕೆಲವರಿಗೆ ಕ್ಯಾನ್ಸರ್ ಬರುವ ಮುನ್ನ ಕಣ್ಣು, ತ್ವಚೆ ಹಳದಿಯಾಗುತ್ತದೆ. ಗುಳ್ಳೆಗಳಾಗುತ್ತದೆ. ಆ ಗುಳ್ಳೆಗಳು ನಾರ್ಮಲ್ ಅಲ್ಲದೇ, ಕ್ಯಾನ್ಸರ್ ಸೆಲ್ಸ್ ರೀತಿ ಇದ್ದಲ್‌ಲಿ, ಅದು ಕ್ಯಾನ್ಸರ್ ಲಕ್ಷಣವಾಗಿರುತ್ತದೆ.

ಐದನೇಯ ಲಕ್ಷಣ ಮಲಮೂತ್ರ ವಿಸರ್ಜನೆಯಲ್ಲಿ ರಕ್ತ ಹೋಗುವುದು. ಅಥವಾ ಮಲಮೂತ್ರ ಬಂದ ಹಾಗೆ ಆಗಿ, ಬರದಿರುವುದು. ಇದು ಕ್ಯಾನ್ಸರ್ ಲಕ್ಷಣವಾಗಿದೆ. ಇಂಥ ತೊಂದರೆಗಳಾದಾಗ, ಕೆಲವರು ಮನೆಮದ್ದು ಮಾಡುತ್ತಾರೆ. ಹಾಗೆ ಮನೆಮದ್ದು ಮಾಡಿದಾಗ, ನಿಮ್ಮ ಸಮಸ್ಯೆ ದೂರವಾದರೆ ಸರಿ. ಇಲ್ಲದಿದ್ದಲ್ಲಿ, ವೈದ್ಯರ ಬಳಿ ವಿಚಾರಿಸುವುದು ಉತ್ತಮ. ಇನ್ನು ಮುಖ್ಯವಾದ ವಿಷಯ ಅಂದ್ರೆ, ಇವೆಲ್ಲ ಲಕ್ಷಣಗಳು ಬೇರೆ ಬೇರೆ ಕಾರಣಗಳಿಂದಲೂ ಬರಬಹುದು.

ಮುಖದಲ್ಲಿರುವ ಕಲೆ ಕೊಳೆ ಹೋಗಲಾಡಿಸಿ, ಮುಖದ ಕಾಂತಿ ಹೆಚ್ಚಿಸುವುದು ಹೇಗೆ..?

ಮಾನಸಿಕ ಜಗತ್ತಿನ ಡಾರ್ಕ್ ಸೈಡ್ ಯಾವುದು ಗೊತ್ತಾ..?

ಸಮಯಕ್ಕೆ ಸರಿಯಾಗಿ ಮುಟ್ಟಾಗಲು ಏನು ಮಾಡಬೇಕು..?

- Advertisement -

Latest Posts

Don't Miss