Health Tips: ಈಗ ಕೆಲ ದಿನಗಳ ಹಿಂದೆ ಕೆಂಪು ಸುಂದರಿ ಟೊಮೆಟೋ ಹಣ್ಣಿನ ರೇಟ್ ಗಗನಕ್ಕೇರಿತ್ತು. ನೂರು ರೂಪಾಯಿ ದಾಟಿತ್ತು. ಆದರೆ ಕೆಲವರು ನೂರಲ್ಲ ಸಾವಿರವಾದರೂ ನಾವು ಟೊಮೆಟೋ ಹಾಕದೇ ಸಾರು ಮಾಡೋದೇ ಇಲ್ಲ ಅನ್ನುವಂತೆ, ಟೊಮೆಟೋ ಖರೀದಿಸಿ ಕೊಂಡೊಯ್ಯುತ್ತಿದ್ದರು. ಆದರೆ ಇದೇ ಹಣ್ಣನ್ನು ಮೊದಲು ಯಾರೂ ತಿನ್ನುತ್ತಿರಲಿಲ್ಲ. ತಿನ್ನುವುದು ದೂರದ ಮಾತು. ಮುಟ್ಟುತ್ತಲೂ ಇರಲಿಲ್ಲ. ಹಾಗಾದ್ರೆ ಯಾಕೆ ಟೊಮೆಟೋ ಹಣ್ಣನ್ನು ಯಾರು ತಿನ್ನುತ್ತಿರಲಿಲ್ಲ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಹಿಂದಿನ ಕಾಲದಲ್ಲಿ ಯಾಕೆ ಟೊಮೆಟೋ ಹಣ್ಣನ್ನು ತಿನ್ನುತ್ತಿರಲಿಲ್ಲವೆಂದರೆ, ಇದನ್ನು ತಿಪ್ಪೆಯಲ್ಲಿ ಬೆಳೆಯುತ್ತಿದ್ದರು. ಹಾಗಾಗಿ ಈ ಹಣ್ಣನ್ನು ಯಾರೂ ಮುಟ್ಟುತ್ತಿರಲಿಲ್ಲ. ಯಾರೂ ಬೆಳೆಯುತ್ತಲೂ ಇರಲಿಲ್ಲ. ಅಪರೂಪಕ್ಕೆ ಪ್ರಾಣಿ, ಪಕ್ಷಿಗಳ ಮೂಲಕ ಟೊಮೆಟೋ ಬೀಜ ಎಲ್ಲಿಯಾದರೂ ಬಿದ್ದು, ಅಲ್ಲಿ ಟೊಮೆಟೋ ಗಿಡ ಹುಟ್ಟುತ್ತಿದ್ದವು.
ಏಕೆಂದರೆ, ಅಂದಿನ ಕಾಲದವರಿಗೆ ಇದು ಸೇವಿಸಲು ಯೋಗ್ಯವಾದ, ಆರೋಗ್ಯಕರವಾದ ಹಣ್ಣು ಅಂತಾ ಗೊತ್ತಿರಲಿಲ್ಲ. ಆದರೆ ನಾಟಿ ವೈದ್ಯರೊಬ್ಬರು, ಈ ಹಣ್ಣು ಕೂಡ ಸೇವಿಸಲು ಯೋಗ್ಯ ಎಂದು ಹೇಳಿದ ನಂತರ. ಕೆಲವರು ಇದರ ಸೇವನೆ ಮಾಡಲು ಪ್ರಾರಂಭಿಸಿದರು. ಇದರ ಮಹತ್ವ ತಿಳಿದ ಬಳಿಕ, ಇದನ್ನು ಬೆಳೆದು ಮಾರಾಟ ಮಾಡಲು ಶುರು ಮಾಡಿದರು. ಇದೀಗ ಟೊಮೆಟೋ ಹಣ್ಣಿನ ಬೆಲೆ ನೂರಕ್ಕೇರುವಷ್ಟು ಮಹತ್ವವನ್ನು ಪಡೆದುಕೊಂಡಿದೆ.
ಜೀವನದಲ್ಲಿ ಇಂಥ ಕೆಲಸಗಳನ್ನು ಎಂದಿಗೂ ಮಾಡಬಾರದು ಎನ್ನುತ್ತಾರೆ ಚಾಣಕ್ಯರು..
ಪತಿ ಆರೋಗ್ಯವಾಗಿ, ಆರ್ಥಿಕವಾಗಿ ಉತ್ತಮನಾಗಿರಬೇಕು ಅಂದ್ರೆ ಪತ್ನಿ ಈ ಕೆಲಸ ಮಾಡಬೇಕು..