Tuesday, March 11, 2025

Latest Posts

ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳು ವ್ಯಾಕ್ಸಿಂಗ್ ವಿಷಯದಲ್ಲಿ ಈ ತಪ್ಪು ಮಾಡಲೇಬಾರದು..

- Advertisement -

Health Tips: ತಾನು ಸುಂದರವಾಗಿ ಕಾಣಬೇಕು ಅಂತಾ ಯಾವ ಹೆಣ್ಣಿಗೆ ತಾನೇ ಮನಸ್ಸಿರುವುದಿಲ್ಲ ಹೇಳಿ..? ಅದರಲ್ಲೂ ಇಂದಿನ ಹೆಣ್ಣು ಮಕ್ಕಳ ಸೌಂದರ್ಯ ಪ್ರಜ್ಞೆ ಎಲ್ಲಿಯವರೆಗೂ ಇದೆ ಅಂದ್ರೆ, ದೇಹದ ಮೇಲಿನ ಕೂದಲುಗಳನ್ನು ಸಹ, ಸಮಯ ಸಮಯಕ್ಕೆ ರಿಮೂವ್ ಮಾಡುತ್ತಿದ್ದಾರೆ. ಮೊದಲೆಲ್ಲ ಹೆಚ್ಚೆಂದರೆ, ಫೇಸ್‌ಪ್ಯಾಕ್ ಹಾಕುತ್ತಿದ್ದರಷ್ಟೇ. ಆದರೆ ಇದೀಗ, ಫೆೇಸ್ ಪ್ಯಾಕ್, ಫೇಶಿಯಲ್, ಸ್ಕ್ರಬಿಂಗ್, ವ್ಯಾಕ್ಸಿಂಗ್, ಪೆಡಿಕ್ಯೂರ್, ಮೆನಿಕ್ಯೂರ್ ಸೇರಿ, ಹಲವು ಟ್ರೀಟ್‌ಮೆಂಟ್‌ಗಳು ಬ್ಯೂಟಿ ಪಾರ್ಲರ್‌ನಲ್ಲಿ ಸಿಗುತ್ತದೆ. ಜೊತೆಗೆ ಇವುಗಳನ್ನೆಲ್ಲ ಮನೆಯಲ್ಲೇ ಮಾಡಿಕೊಳ್ಳಲು, ಮಾರುಕಟ್ಟೆಯಲ್ಲಿ ಅಗತ್ಯವಿರುವ ಸಾಮಾನುಗಳೂ ಸಿಗುತ್ತದೆ.

ಇವುಗಳನ್ನು ಖರೀದಿಸಿ, ಹೆಣ್ಣು ಮಕ್ಕಳು ಮನೆಯಲ್ಲೇ ಕೆಲ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಅವುಗಳಲ್ಲಿ ತಪ್ಪಾಗಿ, ಮುಖ, ಕೈ ಕಾಲು ವಿಕಾರವಾಗಿರುವ ಎಷ್ಟೋ ಪ್ರಕರಣಗಳಿದೆ. ಹಾಗಾಗಿ ವೈದ್ಯೆಯಾದ ದೀಪಿಕಾ, ವ್ಯಾಕ್ಸಿಂಗ್, ಹೇರ್ ರಿಮೂವಿಂಗ್ ಬಗ್ಗೆ ಹಲವು ಮಾಹಿತಿಗಳನ್ನು ಕೊಟ್ಟಿದ್ದಾರೆ.

ಹಲವು ಹೆಣ್ಣು ಮಕ್ಕಳು ಕೈ, ಕಾಲು, ಮುಖದ ಮೇಲಿನ ಹೇರ್ ರಿಮೂವ್ ಮಾಡಲು, ಶೇವಿಂಗ್ ಮಾಡುವ ಬ್ಲೇಡ್ ಸಹಾಯ ತೆಗೆದುಕೊಳ್ಳುತ್ತಾರೆ. ಆದರೆ ಇದನ್ನು ಸರಿಯಾದ ರೀತಿಯಲ್ಲಿ ಬಳಸಿದಾಗಲಷ್ಟೇ, ಸ್ಕಿನ್ ಆರೋಗ್ಯಕರವಾಗಿರುತ್ತದೆ. ಮನಸ್ಸಿಗೆ ಬಂದ ಹಾಗೆ ಇದನ್ನು ಬಳಸಿದರೆ, ಗಾಯವಾಗುವ ಸ್ಕಿನ್ ರಫ್ ಆಗುವ ಸಾಧ್ಯತೆ ಇರುತ್ತದೆ.

ಇನ್ನು ಕೆಲವರು ವ್ಯಾಕ್ಸಿಂಗ್ ಮಾಡಿಕೊಳ್ಳುತ್ತಾರೆ. ವೈದ್ಯರ ಪ್ರಕಾರ, ಶೇವಿಂಗ್‌ಗಿಂತ, ವ್ಯಾಕ್ಸಿಂಗ್ ಬೆಟರ್. ಅದಕ್ಕಿಂತಲೂ ಉತ್ತಮ ಚಿಕಿತ್ಸೆ ಅಂದ್ರೆ, ಲೇಸರ್ ಟ್ರೀಟ್‌ಮೆಂಟ್. ಈ ಚಿಕಿತ್ಸೆ ತೆಗೆದುಕೊಳ್ಳಲು 2ರಿಂದ 3 ತಿಂಗಳು ಬೇಕಾಗುತ್ತದೆ. ಹೀಗೆ 4ರಿಂದ 5 ಬಾರಿ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಒಬ್ಬರ ಜೊತೆ ಇನ್ನೊಬ್ಬರನ್ನು ಹೋಲಿಕೆ ಮಾಡುವುದು ಯಾಕೆ ತಪ್ಪು ಗೊತ್ತಾ..?

Cancer ಎಚ್ಚರಿಕೆ ನೀಡುವ ಸೂಚನೆಗಳು ಯಾವುವು!?

ಮುಟ್ಟಲು ಹೇಸಿಗೆ ಪಡುತ್ತಿದ್ದ ಹಣ್ಣಿಗೆ(ತರಕಾರಿ) ಈಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ.. ಯಾವುದು ಆ ಹಣ್ಣು..?

- Advertisement -

Latest Posts

Don't Miss