ರಿಸ್ಕ್ ಪ್ರೆಗ್ನೆನ್ಸಿ ಹೆಚ್ಚಾಗಲು ಕಾರಣವೇನು..?

Health Tips: ನಾವು ಈಗಾಗಲೇ ನಿಮಗೆ ಗರ್ಭಾವಸ್ಥೆಯಲ್ಲಿ ಹೇಗೆ ಕಾಳಜಿ ವಹಿಸಬೇಕು. ಯಾವ ಆಹಾರಗಳನ್ನು ಸೇವಿಸಬೇಕು. ಯಾವ ಆಹಾರಗಳನ್ನು ಸೇವಿಸಬಾರದು ಎಂಬ ಬಗ್ಗೆ ಮಾಹಿತಿ ನೀಡಿದ್ದೇವೆ. ಅಂತೆಯೇ, ರಿಸ್ಕ್ ಪ್ರೆಗ್ನೆನ್ಸಿ ಎಂದರೇನು ಎಂಬ ಬಗ್ಗೆ ವಿವರಿಸಿದ್ದೇವೆ. ಅದೇ ರೀತಿ ಇಂದು ರಿಸ್ಕ್ ಪ್ರೆಗ್ನೆನ್ಸಿ ಹೆಚ್ಚಾಗಲು ಕಾರಣವೇನು ಎಂಬ ಬಗ್ಗೆ ವೈದ್ಯೆಯಾದ, ಡಾ. ಸವಿತಾ. ಸಿ. ಹೇಳಿದ್ದಾರೆ.

ವಯಸ್ಸು 21 ದಾಟುವ ಮುನ್ನ ಮತ್ತು ವಯಸ್ಸು 35 ದಾಟಿದ ಬಳಿಕ ಗರ್ಭ ಧರಿಸುವುದನ್ನು ರಿಸ್ಕ್ ಪ್ರೆಗ್ನೆನ್ಸಿ ಎನ್ನಲಾಗುತ್ತದೆ. ಏಕೆಂದರೆ, ಈ ಸಮಯದಲ್ಲಿ ತಾಯಿಯಾದರೆ, ತಾಯಿ ಮಗು ಇಬ್ಬರೂ ಆರೋಗ್ಯಕ್ಕೂ ಹಾನಿಯಾಗುತ್ತದೆ. ಹಾಗಾಗಿ 22ರಿಂದ 30ರೊಳಗೆ ತಾಯಿಯಾಗುವುದು ಉತ್ತಮ.

ಇನ್ನು ಇತ್ತೀಚೆಗೆ ಯಾಕೆ ರಿಸ್ಕ್ ಪ್ರೆಗ್ನೆನ್ಸಿ ಹೆಚ್ಚಾಗುತ್ತಿದೆ ಎಂದರೆ, ಹೆಣ್ಣು ಮಕ್ಕಳು ವಿದ್ಯಾವಂತರಾಗಿದ್ದು, ತಾವೂ ದುಡಿಯಬೇಕೆಂದು ಬಯಸುತ್ತಾರೆ. ಮಕ್ಕಳಾದರೆ, ಅವುಗಳ ಲಾಲನೆ ಪಾಲನೆಯಲ್ಲೇ ಸಮಯ ಹೋಗುತ್ತದೆ. ಹಾಗಾಗಿ ಸಾಧ್ಯವಾದಷ್ಟು ದುಡಿದು, ಮತ್ತೆ ಮಕ್ಕಳು ಮಾಡಿಕೊಂಡರಾಯಿತು ಎನ್ನುವ ಪ್ಲಾನ್ ಅವರದ್ದಾಗಿರುತ್ತದೆ. ಆಗ ಸಮಯ ಮೀರಿ, 30 ದಾಟಿರುತ್ತದೆ.

ಈ ರೀತಿ ರಿಸ್ಕ್ ಪ್ರೆಗ್ನೆನ್ಸಿ ಹೆಚ್ಚಾಗುತ್ತದೆ. 30 ದಾಟಿದ ಬಳಿಕ ಪ್ರೆಗ್ನೆಂಟ್ ಆದಲ್ಲಿ, ಹೆಚ್ಚಿನ ಹೆಣ್ಣು ಮಕ್ಕಳಿಗೆ ಡಯಾಬಿಟೀಸ್ ಬರುವ ಸಾಧ್ಯತೆಗಳಿರುತ್ತದೆ. ಅಲ್ಲದೇ, ಮಗುವಿಗೆ ಹೃದಯದ ಸಮಸ್ಯೆಗಳು ಬರುತ್ತದೆ. ಅದರ ಹೃದಯ ಆರೋಗ್ಯವಾಗಿರುವುದಿಲ್ಲ. ಹಾಗಾಗಿ 30 ದಾಟಿದ ಬಳಿಕ ತಾಯಿಯಾಗುವ ನಿರ್ಧಾರ ಮಾಡದಿರುವುದೇ ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ.

ನಿಮ್ಮ ದೇಹದ ತೂಕ ಬೇಗ ಕಡಿಮೆಯಾಗಬೇಕು ಎಂದಲ್ಲಿ ಈ ಪೇಯ ಕುಡಿಯಿರಿ..

ಉಗುರುಗಳ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು..? ವೈದ್ಯರೇ ಮಾಹಿತಿ ನೀಡಿದ್ದಾರೆ ನೋಡಿ..

ಗರ್ಭಕೋಶ ದಪ್ಪವಾದ್ರೆ ಏನಾಗತ್ತೆ..?

About The Author