Health Tips: ನೀವು ಯಾವುದೇ ಹೇರ್ ಕೇರ್ ಪ್ರಾಡಕ್ಟ್‌ಗಳನ್ನು ಬಳಸಬಹುದು. ಆದರೆ ನಿಮ್ಮ ಕೂದಲು ಆರೋಗ್ಯಕರವಾಗಿರಬೇಕು ಅಂದ್ರೆ, ನೀವು ಆರೋಗ್ಯಕರವಾದ ಎಣ್ಣೆಯನ್ನು ಬಳಸಬೇಕು. ಅಂದ್ರೆ ಯಾವುದೇ ಕೆಮಿಕಲ್ ಇಲ್ಲದ ಎಣ್ಣೆ. ತೆಂಗಿನ ಎಣ್ಣೆ, ಹರಳೆಣ್ಣೆ, ಆಲಿವ್ ಎಣ್ಣೆ ಈ ರೀತಿಯ ಕೆಮಿಕಲ್ ಬಳಸದ ಎಣ್ಣೆಗಳನ್ನು ನೀವು ಬಳಸಬೇಕು. ಹಾಗಾದ್ರೆ ಯಾಕೆ ತಲೆಕೂದಲಿಗೆ ಎಣ್ಣೆ ಮಸಾಜ್ ಅಷ್ಟು ಮುಖ್ಯ ಅಂತಾ ತಿಳಿಯೋಣ ಬನ್ನಿ..
ನಿಮ್ಮ ತ್ವಚೆಯ ಆರೋಗ್ಯ, ಕೂದಲ ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ, ನೀವು ಸರಿಯಾಗಿ ನೀರು ಕುಡಿಯಬೇಕು. ಆರೋಗ್ಯಕರ ಊಟ ಮಾಡಬೇಕು. ಹಣ್ಣು, ತರಕಾರಿ, ಸೊಪ್ಪು, ಮೊಳಕೆ ಕಾಳುಗಳು, ಡ್ರೈಫ್ರೂಟ್ಸ್ ನಂಥ ಆರೋಗ್ಯಕರ ಆಹಾರಗಳನ್ನು ಸೇವಿಸಬೇಕು. ಆಗ ನಮ್ಮ ತ್ವಚೆಯ ಸೌಂದರ್ಯ, ಕೂದಲ ಸೌಂದರ್ಯ, ಆಂತರಿಕ ಆರೋಗ್ಯ ಅತ್ಯುತ್ತಮವಾಗಿರುತ್ತದೆ.
ಇದರ ಜೊತೆಗೆ ಕೂದಲಿಗೆ ಸರಿಯಾದ ರೀತಿಯಲ್ಲಿ ಎಣ್ಣೆ ಮಸಾಜ್, ಮನೆಯಲ್ಲೇ ತಯಾಸಿದ ಹೇರ್ ಪ್ಯಾಕ್, ಕೆಮಿಕಲ್ ಇಲ್ಲದ ಶ್ಯಾಂಪೂವಿನ ಬಳಕೆ ಅತ್ಯಗತ್ಯ. ಅದರಲ್ಲೂ ಎಣ್ಣೆ ಮಸಾಜ್ ಮಾಡುವುದು ತುಂಬಾ ಮುಖ್ಯ. ನೆತ್ತಿಗೆ ಎಣ್ಣೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ, ಬಳಿಕ ಕೂದಲಿಗೆಲ್ಲಾ ತಾಕುವಂತೆ ಎಣ್ಣೆ ಹಚ್ಚಬೇಕು.
ಬರೀ ತೆಂಗಿನ ಎಣ್ಣೆ ಹಚ್ಚಿ, ನಿಮ್ಮ ಕೂದಲು ಬೆಳೆಯುತ್ತಿಲ್ಲವೆಂದಲ್ಲಿ, ಕರಿಬೇವು, ಒಂದೆಲಗ, ಭೃಂಗರಾಜ್, ಪುದೀನಾ, ತುಳಸಿ, ದಾಸವಾಳದ ಹೂವು ಮತ್ತು ಎಲೆ, ಈರುಳ್ಳಿ ರಸ, ಮೆಂತ್ಯೆ ಕಾಳು, ಆ್ಯಲೋವೆರಾ ಇವುಗಳನ್ನೆಲ್ಲ ಸೇರಿಸಿ, ಎಣ್ಣೆ ತಯಾರಿಸಿ, ಅದರಿಂದ ತಲೆಗೆ ಮಸಾಜ್ ಮಾಡಿ. ರಾತ್ರಿ ಮಸಾಜ್ ಮಾಡಿ, ಮರುದಿನ ಬೆಳಿಗ್ಗೆ ಹೇರ್ ವಾಶ್ ಮಾಡಿದರೆ, ನಿಮ್ಮ ಕೂದಲು ಸೊಂಪಾಗಿ ಬೆಳೆಯುತ್ತದೆ.
ವಾರದಲ್ಲಿ ಎರಡು ಬಾರಿ ಎಣ್ಣೆ ಮಸಾಜ್ ಮಾಡಿ, ತಲೆ ಸ್ನಾನ ಮಾಡಲೇಬೇಕು. ಒಂದು ಗಿಡ ಬೆಳೆಯಲು ಅದಕ್ಕೆ ನೀರು ಮತ್ತು ಗೊಬ್ಬರ ಎಷ್ಟು ಮುಖ್ಯವೋ, ತಲೆಗೂದಲು ಸೊಂಪಾಗಿ ಬೆಳೆಯಲು, ಎಣ್ಣೆ ಕೂಡ ಅಷ್ಟೇ ಮುಖ್ಯ. ಎಣ್ಣೆ ಮಸಾಜ್ ಮಾಡದಿದ್ದಲ್ಲಿ, ಬೇಗ ಕೂದಲು ಉದುರಲು ಶುರುವಾಗುತ್ತದೆ. ಕೂದಲು ಸ್ಪ್ಲಿಟ್ ಆಗುತ್ತದೆ. ಅಲ್ಲದೇ, ತುಂಡಾಗಲು ಶುರುವಾಗುತ್ತದೆ. ಹೀಗೆಲ್ಲ ಆಗಬಾರದು ಅಂದ್ರೆ, ಕೂದಲಿಗೆ ಸರಿಯಾಗಿ ಎಣ್ಣೆ ಮಸಾಜ್ ಮಾಡಲೇಬೇಕು.

