Friday, November 22, 2024

Latest Posts

ಅಕ್ಕಿ ಕಳ್ಳರ ವಿರುದ್ಧ ಸಮರ ಸಾರಿದ ಆಹಾರ ಇಲಾಖೆ, ಅಕ್ರಮ ಅಕ್ಕಿ ಸಾಗಾಟಗಾರರ ಗಡಿಪಾರಿಗೆ ಪ್ಲ್ಯಾನ್

- Advertisement -

Gadaga News: ಗದಗ: ಅನ್ನಭಾಗ್ಯ,ಇದು ಸಿಎಂ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆ. ಬಡವರು ಹಸಿವಿನಿಂದ ಬಳಲಬಾರದು ಅಂತ ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದಾರೆ. ಬಡವರ ಹೊಟ್ಟೆ ಸೇರುತ್ತೋ ಇಲ್ವೋ ಗೋತ್ತಿಲ್ಲ ಕಳ್ಳರ ಹೊಟ್ಟೆಯನ್ನ ಮಾತ್ರ ತುಂಬಿಸ್ತಿದೆ. ಅಕ್ಕಿ ಕಳ್ಳರಿಗೆ ಶಾಕ್ ನೀಡಲು ಗದಗ ಜಿಲ್ಲಾಡಳಿತ ಸಿದ್ಧವಾಗಿದೆ.

ಅಕ್ರಮ ಅಕ್ಕಿ ಸಾಗಾಟಗಾರರ ಗಡಿಪಾರಿಗೆ ಪ್ಲ್ಯಾನ್

ಬಡ ಜನರ ಹಸಿವಿನಿಂದ ಬಳಲಬಾರದು ಎಂದು ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಜಾರಿ ತಂದಿದ್ದಾರೆ. ಆದ್ರೆ, ಈ ಯೋಜನೆ ಗದಗ ಜಿಲ್ಲೆಯಲ್ಲಿ ಸಂಪೂರ್ಣ ಹಳ್ಳಹಿಡಿದಿದೆ. ಗದಗ-ಬೆಟಗೇರಿ ಅವಳಿ ನಗರದಲ್ಲೇ ಒಂದು ವಾರದಲ್ಲಿ 4 ಅಕ್ರಮ ಅಕ್ಕಿ ಸಾಗಾಟ ಕೇಸ್ ದಾಖಲಾಗಿವೆ. ದಂಧೆಕೋರರು ಯಾವುದೇ ಭಯವಿಲ್ಲದೇ ರಾಜಾರೋಷವಾಗಿ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಿಸುತ್ತಿದ್ದಾರೆ. ಅಕ್ಕಿ ಸಿಗದೇ ಬೇಸತ್ತ ಜನರು ಪೊಲೀಸರಿಗೆ ದೂರು ನೀಡಿದ್ರು. ಇದ್ರಿಂದ ಎಚ್ಚೆತ್ತ ಅಧಿಕಾರಿಗಳು ದಾಳಿ ನಡೆಸಿ ಅಕ್ಕಿಯನ್ನ ಜಪ್ತಿ ಮಾಡಿದ್ದಾರೆ. ಅಕ್ರಮ ಅಕ್ಕಿ ದಂಧೆ ತಡೆಗೆ ಆಹಾರ ಇಲಾಖೆ ಮಾಸ್ಟರ್ ಪ್ಲ್ಯಾನ್ ಮಾಡಿದೆ.

ಇನ್ನೂ ನಾಲ್ಕು ಕೇಸ್ನಲ್ಲಿ 100 ಕ್ಕೂ ಕ್ವಿಂಟಲ್ ಅಕ್ಕಿಯನ್ನ ವಶಕ್ಕೆ ಪಡೆಯಲಾಗಿದೆ. ವಿಜಯಕುಮಾರ ಮಟ್ಟಿ, ವೀರಣ್ಣ ಬಡಿಗೇರಿ, ಶಿವಾನಂದ ಬಡಿಗೇರಿ, ಖಾಜಾಹುಸೇನ್ ದಂಧೆಕೋರರ ವಿರುದ್ಧ ದೂರು ದಾಖಲಾಗಿದೆ. ಇತ್ತ ಆಹಾರ ಇಲಾಖೆಯೂ ಅಕ್ರಮ ಅಕ್ಕಿ ದಂಧೆಕೋರರ ಪಟ್ಟಿ ರೆಡಿ ಮಾಡ್ತಿದ್ದು, ಗೂಂಡಾ ಕಾಯ್ದೆ ಅಥವಾ ಗಡಿಪಾರು ಮಾಡುವಂತೆ ಡಿಸಿಗೆ ಶಿಫಾರಸು ಮಾಡುತ್ತಿದೆ.

ಕಳೆದ ಬಾರಿ ಅಕ್ರಮ ಅಕ್ಕಿ ದಂಧೆಕೋರನೊಬ್ಬ ಡಿಸಿ, ಎಸ್ಪಿಗೂ ನಾನೂ ಕೇರ್ ಮಾಡಲ್ಲ. ಯಾರಿಗೆ ಹೇಳುತ್ತೀರಿ ಹೇಳಿ ಎಂದು ಅವಾಜ್ ಹಾಕಿರೋ ವಿಡಿಯೋ ಫುಲ್ ವೈರಲ್ ಆಗಿತ್ತು. ಅಕ್ರಮ ಅಕ್ಕಿ ದಾಸ್ತಾನು ಮಾಹಿತಿ ನೀಡಿದವರಿಗೆ ಬೆದರಿಕೆ ಕೂಡ ಹಾಕಿದ್ದರು. ಇನ್ನಾದ್ರೂ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ಮಾಡಬೇಕಿದೆ.

ಗದಗ ಜಿಲ್ಲೆಯಲ್ಲೇ ಮಾತ್ರವಲ್ಲದೇ  ಪಕ್ಕದ  ಹುಬ್ಬಳ್ಳಿ-ಧಾರವಾಡ  ಹಾವೇರಿ ಜಿಲ್ಲೆ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲೂ ಸಹ ಅನ್ನಭಾಗ್ಯ ಅಕ್ಕಿ ಎಗ್ಗಿಲ್ಲದೇ ಸಾಗಾಟ ನಡೆಯುತ್ತಿದ್ದು, ಇದಕ್ಕೆ ಆಹಾರ ಇಲಾಖೆ ಕಡಿವಾಣ ಹಾಕಿಬೇಕಿದೆ.

Varthur Santhosh : ಕನ್ನಡದ ಬಿಗ್‌ಬಾಸ್ ಸೆಟ್‌ನಲ್ಲೇ “ಆ ಸ್ಪರ್ಧಿ” ಅರೆಸ್ಟ್

‘400-500 ಕೋಟಿ ಖರ್ಚು ಮಾಡಿ ಸುವರ್ಣ ಸೌಧವನ್ನ ಭೂತ ಬಂಗಲೆ ಮಾಡುವುದು ಸರಿಯಲ್ಲ’

ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟ ಬದಲಾವಣೆ ಖಚಿತ: ವಿನಯ್ ಕುಲಕರ್ಣಿ

- Advertisement -

Latest Posts

Don't Miss