Health Tips: ನಾವು ಸೇವಿಸುವ ಆಹಾರ, ಕೂಲ್ ಡ್ರಿಂಕ್ಸ್ ಸೇವನೆ, ಸರಿಯಾಗಿ ಮೂತ್ರ ವಿಸರ್ಜನೆ ಮಾಡದೇ ಇರುವ ಕಾರಣಕ್ಕೆ, ಕಿಡ್ನಿಯಲ್ಲಿ ಕಲ್ಲಾಗುತ್ತದೆ. ಆದರೆ ಮನಸ್ಸು ಮಾಡಿದರೆ, ನೀವು ಮನೆಮದ್ದು ಮಾಡಿಯೇ, ನಿಮ್ಮ ಕಿಡ್ನಿಯಲ್ಲಿರುವ ಕಲ್ಲು ಕರಗಿಸಬಹುದು. ಅದೇ ಹೇಗೆ ಎಂಬ ಬಗ್ಗೆ ವೈದ್ಯರೇ ಹೇಳಿದ್ದಾರೆ ಕೇಳಿ.
ವೈದ್ಯರಾದ ಡಾ.ಕಿಶೋರ್ ಈ ಬಗ್ಗೆ ವಿವರಿಸಿದ್ದು, ನಾವು ಮೊದಲು ಎಲ್ಲಿ ಸ್ಟೋನ್ ಆಗಿದೆ ಎಂಬ ಬಗ್ಗೆ ತಿಳಿದುಕೊಳ್ಳಬೇಕು. ಬಳಿಕ ಎಂಥ ಆಹಾರಗಳನ್ನು ಸೇವಿಸಬೇಕು ಮತ್ತು ಎಂಥ ಆಹಾರಗಳನ್ನು ಸೇವಿಸಬಾರದು ಎಂಬ ಬಗ್ಗೆ ತಿಳಿದುಕೊಳ್ಳಬೇಕು. ಬಳಿಕ ಮನೆ ಮದ್ದನ್ನು ಸರಿಯಾದ ರೀತಿಯಲ್ಲಿ ಬಳಸಿ, ಕಲ್ಲನ್ನು ಕರಗಿಸಬೇಕು ಎಂದು ವೈದ್ಯರು ಹೇಳಿದ್ದಾರೆ.
ಪಿತ್ತಾಶಯದಲ್ಲಿ, ಮೂತ್ರ ಮಾರ್ಗದಲ್ಲಿ ಅಥವಾ ಕಿಡ್ನಿಯಲ್ಲಿ, ಈ ಮೂರು ಭಾಗದಲ್ಲಿ ಎಲ್ಲಿ ಕಲ್ಲಾಗಿದೆ ಅನ್ನೋದನ್ನ ನಾವು ಮೊದಲು ತಿಳಿದುಕೊಳ್ಳಬೇಕು. ಇದಾದ ಬಳಿಕ ಕೆಲವು ತರಕಾರಿಗಳ ಸೇವನೆಯನ್ನು ಮಾಡಬಾರದು. ಬ್ರೊಕೋಲಿ, ಟೊಮೆಟೋ, ಕ್ವಾಲಿ ಫ್ಲವರ್, ಪಾಲಕ್ ಸೇರಿ ಇನ್ನು ಕೆಲವು ತರಕಾರಿಗಳನ್ನು, ತರಕಾರಿ ಪದಾರ್ಥಗಳನ್ನು ಸೇವಿಸುವಂತಿಲ್ಲ.
ಇನ್ನು ಏನೇನು ಸೇವನೆ ಮಾಡಬೇಕು ಎಂದು ಹೇಳಿದರೆ, ಮುಸುಕಿನ ಜೋಳದಲ್ಲಿ ಬರುವ ಹಳದಿ ಕೂದಲುಗಳನ್ನು ತೆಗೆದುಕೊಂಡು, ನೀರಿಗೆ ಹಾಕಿ, ಕುದಿಸಿ, ಅದರ ಕಶಾಯ ಮಾಡಬೇಕು. ಇದನ್ನು ಪದೇ ಪದೇ ಸೇವಿಸಬೇಕು. ಎರಡನೇಯದಾಗಿ ಬಾಳೆದಿಂಡಿನ ಪದಾರ್ಥಗಳನ್ನು ಯತೇಚ್ಛವಾಗಿ ಸೇವಿಸಬೇಕು. ಒಂದು ದಿನ ಬಿಟ್ಟು ಒಂದು ದಿನ ಸೇವಿಸಿದರೂ ಉತ್ತಮ.
ನಮಗೆ ಸರಿಯಾಗಿ ಮೂತ್ರ ವಿಸರ್ಜನೆ ಮಾಡಿಸುವಂಥ ಪದಾರ್ಥಗಳ ಸೇವನೆ ನಾವು ಮಾಡಬೇಕು. ಏಕೆಂದರೆ, ಮೂತ್ರ ಸರಿಯಾಗಿ ಹೋದಾಗಲೇ, ಕಿಡ್ನಿಯಲ್ಲಿರುವ ಕಲ್ಲು ಕೂಡ, ಮೂತ್ರದೊಂದಿಗೆ ಕರಗಿ ಹೋಗುತ್ತದೆ. ಹಾಗಾಗಿಯೇ ಮೂತ್ರವನ್ನು ಕಟ್ಟಿಕೊಳ್ಳಬಾರದು. ಕಟ್ಟಿಕೊಂಡರೆ, ಕಿಡ್ನಿಯಲ್ಲಿ ಕಲ್ಲಾಗುತ್ತದೆ ಎಂದು ಹೇಳುತ್ತಾರೆ. ಕಿಡ್ನಿ ಕಲ್ಲಾದಾಗ, ಇನ್ನು ಏನೇನು ಮನೆ ಮದ್ದು ಮಾಡಬಹುದು ಎಂಬ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಅದನ್ನು ತಿಳಿಯಲು ಈ ವೀಡಿಯೋ ನೋಡಿ..