Health Tips: IVF ಚಿಕಿತ್ಸೆ ಎಂದರೇನು..? ಈ ಚಿಕಿತ್ಸೆಗೂ ಮುನ್ನ ಯಾವ ಯಾವ ಪರೀಕ್ಷೆ ಮಾಡಲಾಗುತ್ತದೆ ಅನ್ನೋ ಬಗ್ಗೆ ನಾವು ನಿಮಗೆ ಹೇಳಿದ್ದೆವು. ಇದೀಗ ವೈದ್ಯೆಯಾದ ಡಾ.ವಿದ್ಯಾ ಭಟ್, ಐವಿಎಫ್ ಚಿಕಿತ್ಸೆ ಸಕ್ಸಸ್ ಆಗತ್ತಾ..? ಇಲ್ಲವಾ..? ಇದಕ್ಕೆ ಕಾರಣವೇನು ಅನ್ನೋ ಬಗ್ಗೆ ವಿವರಿಸಿದ್ದಾರೆ. ಅದೇನೆಂದು ತಿಳಿಯೋಣ ಬನ್ನಿ..
IVF ಚಿಕಿತ್ಸೆ ತೆಗೆದುಕೊಂಡವರಿಗೆಲ್ಲ ಮಕ್ಕಳಾಗತ್ತೆ ಅನ್ನೋದು ತಪ್ಪು. ಯಾಕಂದ್ರೆ ಎಷ್ಟೋ ಜನ 5 ರಿಂದ 6 ಸಲ ಈ ಚಿಕಿತ್ಸೆ ಪಡೆದರೂ, ಅದು ಸಕ್ಸಸ್ ಆಗದೇ, ತಂದೆ ತಾಯಿಯಾಗುವ ಕನಸನ್ನು ಕೈ ಬಿಟ್ಟವರಿದ್ದಾರೆ. ಕೆಲವರಿಗೆ ಮೊದಲ ಬಾರಿಯೇ ಮಕ್ಕಳಾಗಿದ್ದಿದೆ. ಇನ್ನು ಕೆಲವರಿಗೆ ಅವಳಿ ಮಕ್ಕಳೂ ಆಗಿದ್ದಿದೆ. ಹಾಗಾಗಿ ಈ ಚಿಕಿತ್ಸೆ ಪಡೆದ ಪ್ರತಿಯೊಬ್ಬರಿಗೂ ಮಕ್ಕಳಾಗುತ್ತದೆ ಎಂಬುದು ತಪ್ಪು ಗ್ರಹಿಕೆ.
ಇನ್ನು ಈ ಚಿಕಿತ್ಸೆ ಪಡೆಯಲು ವಯಸ್ಸಿನ ಮಿತಿ ಕೂಡ ಇದೆ. ಈಗಾಗಲೇ ಹೇಳಿದಂತೆ, ವಯಸ್ಸು 30 ದಾಟುವುದರೊಳಗೆ ಹೆಣ್ಣು ತಾಯಿಯಾದರೆ, ಉತ್ತಮ. ಏಕೆಂದರೆ, ಈ ವಯಸ್ಸು ದಾಟಿದ ಬಳಿಕ, ಅಂಡಾಣುವಿನ ಉತ್ಪತ್ತಿ ಕಡಿಮೆಯಾಗುತ್ತದೆ. ಪುರುಷರಲ್ಲೂ ವೀರ್ಯಾಣುವಿನ ಶಕ್ತಿ ಕಡಿಮೆಯಾಗುತ್ತದೆ. ಹಾಗಾಗಿ ಹೆಣ್ಣು ಮಕ್ಕಳು 22ರಿಂದ 30 ದಾಟುವುದರೊಳಗೇ ತಾಯಿಯಾಗಬೇಕು ಎಂದು ವೈದ್ಯರು ಹೇಳುತ್ತಾರೆ.
ಅದೇ ರೀತಿ ಐವಿಎಫ್ ಚಿಕಿತ್ಸೆ ತೆಗೆದುಕೊಳ್ಳಬೇಕು ಎನ್ನುವವರು ಕೂಡ 35 ವಯಸ್ಸಿಗೂ ಒಳಗಿನವರಾಗಿರಬೇಕು. ಅಂಥವರಿಗೆ ಈ ಚಿಕಿತ್ಸೆ ಹೆಚ್ಚು ಫಲಕಾರಿಯಾಗಿರುತ್ತದೆ. ಈ ಚಿಕಿತ್ಸೆಯ ಬಗ್ಗೆ ವೈದ್ಯರು ಏನು ಹೇಳಿದ್ದಾರೆಂಬುದನ್ನು ತಿಳಿಯಲು ಈ ವೀಡಿಯೋ ನೋಡಿ..
IVF




