Health Tips: ನಿಮ್ಮ ಕರ್ನಾಟಕ ಟಿವಿ ಹೆಲ್ತ್ನಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗೆ, ಹಲವು ವೈದ್ಯರು ಪರಿಹಾರಗಳನ್ನು ಹೇಳಿದ್ದಾರೆ. ಸೌಂದರ್ಯ ಸಮಸ್ಯೆ, ತಾಯಿ ಮಗುವಿನ ಆರೋಗ್ಯ ಸಮಸ್ಯೆ, ಚರ್ಮದ ಸಮಸ್ಯೆ, ಹೊಟ್ಟೆಯ ಸಮಸ್ಯೆ, ಕ್ಯಾನ್ಸ್ರರ್ ಹೀಗೆ ಹಲವು ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ವೈದ್ಯರು ಸುಟ್ಟ ಗಾಯಗಳು ಮಾಸಿ ಹೋಗತ್ತಾ..? ಇಲ್ಲವಾ..? ಅನ್ನೋ ವಿಚಾರವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಸುಟ್ಟಗಾಯಗಳು ಅಷ್ಟು ಬೇಗ ಮಾಸಿ ಹೋಗುವುದಿಲ್ಲ. ಸಣ್ಣ ಪುಟ್ಟ ಸುಟ್ಟಗಾಯಗಳು ಮಾಸಿ ಹೋಗುತ್ತದೆ . ಆದರೆ ತುಂಬಾ ಸುಟ್ಟಿದ್ದರೆ, ಆ ಕಲೆ ಕೊನೆತನಕ ಹಾಗೆಯೇ ಇರುತ್ತದೆ. ಅಲ್ಲದೇ, ಚರ್ಮದ ಒಳಪದರದಲ್ಲೂ ಸುಟ್ಟು ಹೋಗಿದ್ದರೆ, ಅದಕ್ಕಾಗಿ ಚರ್ಮದ ಕಸಿ ಮಾಡಲಾಗುತ್ತದೆ.
ಚರ್ಮ ಸಿಕ್ಕಾಪಟ್ಟೆ ಸುಟ್ಟಾಗ, ಆ ಅಂಗಾಂಗಗಳು ಕಾರ್ಯ ನಿರ್ವಹಿಸುವುದಿಲ್ಲ. ಉದಾಹರಣೆಗೆ ಬೆರಳುಗಳು ಸುಟ್ಟಿದ್ದರೆ, ಕೈಯಿಂದ ಯಾವ ಕೆಲಸವೂ ಮಾಡಲಾಗುವುದಿಲ್ಲ. ಅವು ಪೂರ್ತಿಯಾಗಿ, ಬಾಡಿ ಹೋಗಿರುತ್ತದೆ. ಅಷ್ಟು ತೀವ್ರವಾದ ಗಾಯವಾದಾಗ, ಅವರಿಗೆ ಚಿಕಿತ್ಸೆ ಕೊಟ್ಟು, 3ರಿಂದ 6 ತಿಂಗಳಾಗುವವರೆಗೂ ಕಾದು. ಬಳಿಕ ಮತ್ತೆ ಆಪರೇಷನ್ ಮಾಡಿ, ಆ ಅಂಗಾಂಗಗಳು ಕಾರ್ಯ ನಿರ್ವಹಿಸುವಂತೆ ಮಾಡಲಾಗುತ್ತದೆ. ಕೆಲವರು ಸುಟ್ಟು ಗಾಯ ಮಾಡಿಕೊಂಡಾಗ, ನಿರಂತರವಾಗಿ ಚಿಕಿತ್ಸೆ ನಡೆಯುತ್ತಲೇ ಇರುತ್ತೆ ಅಂತಾರೆ ವೈದ್ಯರು. ಈ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆ ಅನ್ನೋ ಬಗ್ಗೆ ತಿಳಿಯಲು ಈ ವೀಡಿಯೋ ನೋಡಿ..

