ಚರ್ಮ ಕಸಿ ಹೇಗೆ ಮಾಡಲಾಗುತ್ತದೆ..?

Health Tips: ನಿಮ್ಮ ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗೆ, ಹಲವು ವೈದ್ಯರು ಪರಿಹಾರಗಳನ್ನು ಹೇಳಿದ್ದಾರೆ. ಸೌಂದರ್ಯ ಸಮಸ್ಯೆ, ತಾಯಿ ಮಗುವಿನ ಆರೋಗ್ಯ ಸಮಸ್ಯೆ, ಚರ್ಮದ ಸಮಸ್ಯೆ, ಹೊಟ್ಟೆಯ ಸಮಸ್ಯೆ, ಕ್ಯಾನ್ಸ್ರರ್ ಹೀಗೆ ಹಲವು ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ವೈದ್ಯರು, ಚರ್ಮದ ಕಸಿ ಹೇಗೆ ಮಾಡಬೇಕು ಎಂದು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..

ರೋಗಿಯ ಚರ್ಮದಿಂದಲೇ ಚರ್ಮದ ಕಸಿ ಮಾಡಲಾಗುತ್ತದೆ. ರೋಗಿಯ ದೇಹದಲ್ಲಿ ಚರ್ಮದ ಕೊರತೆ ಇದ್ದಾಗ ಮಾತ್ರ, ಸ್ಕಿನ್ ಬ್ಯಾಂಕ್‌ನಿಂದ ಚರ್ಮ ತಗೆದು ಕಸಿ ಮಾಡಲಾಗುತ್ತದೆ ಅಂತಾರೆ ವೈದ್ಯರು. ನಿಧನದ ಬಳಿಕ ಕಣ್ಣಿನ ದಾನ, ಅಂಗಾಂಗ ದಾನ ಇರುವಂತೆ, ಚರ್ಮ ದಾನವೂ ಇದೆ. ನಿಧನವಾದ 6 ಗಂಟೆಯೊಳಗೆ ಚರ್ಮವನ್ನು ದಾನ ಮಾಡಿದರೆ, ಅದನ್ನು ದೇಹ ಸುಟ್ಟುಕೊಂಡವರ ಕಸಿ ಮಾಡಲು ವೈದ್ಯರು ಬಳಸುತ್ತಾರೆ.

ಈ ರೀತಿಯ ಚರ್ಮ ತೆಗೆದು, ಇನ್ನೋರ್ವ ರೋಗಿಗೆ ಕಸಿ ಮಾಡುವುದರಿಂದ, ಅಂಥವರು ಬದುಕುಳಿದು, ಆರೋಗ್ಯವಂತರಾಗಿ ಬದುಕುತ್ತಾರೆ. ಆದರೆ ವೈದ್ಯರು ಯಾವಾಗಲೂ ಮೊದಲ ಆದ್ಯತೆ ಕೊಡುವುದು, ರೋಗಿ ಚರ್ಮಕ್ಕೆ. ರೋಗಿಯ ಚರ್ಮ ಸಿಕ್ಕಲ್ಲಿ, ಅದರಿಂದಲೇ ಕಸಿ ಮಾಡಲಾಗುತ್ತದೆ. ಇಲ್ಲವಾದಲ್ಲಿ ಮಾತ್ರ ಸ್ಕಿನ್ ಬ್ಯಾಂಕ್ ಮೊರೆ ಹೋಗಲಾಗುತ್ತದೆ. ಚರ್ಮದ ಕಸಿ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..

ದೇಹದ ಮೇಲೆ ಬೊಬ್ಬೆಗಳು ಬಂದಿದೆಯಾ..? ಹಾಗಾದ್ರೆ ಎಚ್ಚರ..

Liver Cancer ಇದ್ರೂ ಗೊತ್ತಾಗಲ್ಲಎಚ್ಚರ!

Kidneyಯಲ್ಲಿ ಕಲ್ಲಾಗಿದ್ಯಾ? ನಿಮ್ಮ ತೋಟದಲ್ಲೇ ಇದೆ ಮದ್ದು

About The Author