- Advertisement -
Health Tips: ತಾಯಿ ಮಗುವಿನ ಆರೋಗ್ಯದ ಬಗ್ಗೆ ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ವೈದ್ಯರು ಸಾಕಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಅದೇ ರೀತಿ ಇಂದು ಕೂಡ ವೈದ್ಯೆಯಾದ ಸಹನಾ ದೇವದಾಸ್, ಹುಟ್ಟಿದ ಮಗುವಿಗೆ ಸ್ನಾನ ಬೇಕೋ, ಬೇಡವೋ ಅನ್ನೋ ಬಗ್ಗೆ ಹೇಳಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಮಗು ಹುಟ್ಟಿದ 1 ವಾರ ಸ್ನಾನ ಮಾಡಿಸಬಾರದು. ಸ್ನಾನ ಮಾಡಿಸಲೇಬೇಕು ಎಂದಲ್ಲಿ, ಉಗುರು ಬೆಚ್ಚಗಿನ ನೀರಿನಿಂದ 2 ನಿಮಿಷ ಸ್ನಾನ ಮಾಡಿಸಿದರೆ ಸಾಕು. ಯಾಕಂದ್ರೆ ತಣ್ಣೀರಿನಿಂದ ಸ್ನಾನ ಮಾಡಿಸಿದ್ರೆ, ಮಗುವಿಗೆ ಜ್ವರ ಬರಬಹುದು. ಬಿಸಿ ನೀರಿನಿಂದ ಸ್ನಾನ ಮಾಡಿಸಿದ್ರೆ, ಮಗುವಿನ ಸ್ಕಿನ್ ಹಾಳಾಗುತ್ತದೆ ಅಂತಾರೆ ವೈದ್ಯರು.
ಇನ್ನು ಮಗು ಹುಟ್ಟಿದ 2 ವಾರವಾದ ಬಳಿಕ, ಎಣ್ಣೆ ಮಸಾಜ್ ಮಾಡಿ, ಸ್ನಾನ ಮಾಡಿಸಬಹುದು. ಆದರೆ ಅತೀ ಹೆಚ್ಚು ಎಣ್ಣೆ ಬಳಸಬಾರದು. ಶಿಶುವಿನ ಸ್ನಾನದ ಬಗ್ಗೆ ವೈದ್ಯೆ ಇನ್ನು ಏನೇನು ಹೇಳಿದ್ದಾರೆ ಅಂತಾ ತಿಳಿಯಲು ಈ ವೀಡಿಯೋ ನೋಡಿ..
- Advertisement -