Health Tips: ಹಲವು ಆರೋಗ್ಯ ಸಮಸ್ಯೆಗಳ ಬಗ್ಗೆ ನಾವು ಈಗಾಗಲೇ ನಿಮಗೆ ಪರಿಹಾರಗಳನ್ನು ತಿಳಿಸಿದ್ದೇವೆ. ಅದೇ ರೀತಿ ಇಂದು ವೈದ್ಯರಾದ ಡಾ.ಆಂಜೀನಪ್ಪ ಅವರು ಬೇಸಿಗೆಯಲ್ಲಿ ನಮ್ಮ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಅಂತಾ ಹೇಳಿದ್ದಾರೆ.
ಬೇಸಿಗೆ ಕಾಲದಲ್ಲಿ ಸಾಂಕ್ರಾಮಿಕ ರೋಗಗಳು ಬರುವುದು ಹೆಚ್ಚು. ಹಾಗಾಗಿ ನಾವು ತಂಪಾದ ಆಹಾರ, ಬೀದಿ ಬದಿಯ ಆಹಾರವನ್ನು ಸೇವಿಸಲೇಬಾರದು ಅಂತಾರೆ ವೈದ್ಯರು. ಏಕೆಂದರೆ, ಬೀದಿ ಬದಿ ಆಹಾರದ ಮೇಲೆ ನೋಣಗಳು ಕುಳಿತುಕೊಂಡು, ಸಾಂಕ್ರಾಮಿಕ ಖಾಯಿಲೆ ಹರಡಲು ಕಾರಣವಾಗುತ್ತದೆ. ಹಾಗಾಗಿ ಆದಷ್ಟು ಮನೆಯಲ್ಲಿ ತಯಾರಿಸಿ, ಫ್ರೆಶ್ ಆಹಾರಗಳ ಸೇವನೆ ಮಾಡುವುದು ಉತ್ತಮ.
ಇನ್ನು ಬೇಸಿಗೆಯಲ್ಲಿ ಮನುಷ್ಯನಿಗೆ ಹಸಿವು ಕಡಿಮೆಯಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಹೆಚ್ಚು ನಿಶ್ಶಕ್ತಿ ಕಾಡುತ್ತದೆ. ಅಲ್ಲದೇ, ಬೇಸಿಗೆಯಲ್ಲಿ ತಿಂದ ಆಹಾರ ಸುಲಭವಾಗಿ, ಜೀರ್ಣವಾಗುವುದಿಲ್ಲ. ಇನ್ನು ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯಬೇಕು. ಎಳನೀರು ಕೂಡ ಆರೋಗ್ಯಕ್ಕೆ ತುಂಬಾ ಉತ್ತಮ. ಮನೆಯಲ್ಲೇ ಮಜ್ಜಿಗೆ ಮಾಡಿ ಕುಡಿಯಿರಿ. ಹಣ್ಣುಗಳನ್ನು ಮನೆಗೆ ತಂದು ಕತ್ತರಿಸಿ ತಿನ್ನಿ. ದಾರಿಯಲ್ಲಿ ಮಾರಾಟ ಮಾಡುವ ಕಟ್ ಫ್ರೂಟ್ಸ್ ಯಾವುದೇ ಕಾರಣಕ್ಕೂ ಸೇವಿಸಬೇಡಿ. ಮಾರುಕಟ್ಟೆಯಲ್ಲಿ ಸಿಗುವ ಜ್ಯೂಸ್ ಕೂಡ ಎಂದಿಗೂ ಸೇವಿಸಬೇಡಿ ಎನ್ನುತ್ತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..