Spiritual : ಚಾಣಕ್ಯರು ಎಂಥವರನ್ನು ಮದುವೆಯಾಗಬೇಕು..? ದುಡ್ಡು ಹೇಗೆ ಉಳಿಸಬೇಕು..? ಜೀವನ ಹೇಗೆ ಮಾಡಬೇಕು..? ಎಂಥವರ ಸಂಗ ಮಾಡಬೇಕು ಮತ್ತು ಎಂಥವರ ಸಂಗ ಮಾಡಬಾರದು ಸೇರಿ, ಚಾಣಕ್ಯರು ಹಲವು ವಿಷಯಗಳನ್ನು ಹೇಳಿದ್ದಾರೆ. ಅದೇ ರೀತಿ ಚಾಣಕ್ಯರು, ತಮ್ಮ ಚಾಣಕ್ಯ ನೀತಿಯಲ್ಲಿ ಎಂಥವರು, ಸುಂದರವಾದ ಹೆಣ್ಣನ್ನು ವರಿಸಬಾರದು, ಬಡವರು ಎಂಥ ಕಾರ್ಯಕ್ರಮಕ್ಕೆ ಹೋಗಬಾರದು, ಭೋಜನ ಸೇವನೆಯನ್ನು ಯಾವಾಗ ಸೇವಿಸಬಾರದು ಅನ್ನೋ ಬಗ್ಗೆಯೂ ಹೇಳಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಯಾವ ಸಮಯದಲ್ಲಿ ಮನುಷ್ಯ ಆಹಾರ ಸೇವಿಸಬಾರದು..?
ಚಾಣಕ್ಯರ ಪ್ರಕಾರ, ಮನುಷ್ಯ ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದರೆ, ಅಥವಾ ಯಾವುದೇ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಇಂಥ ಸಮಯದಲ್ಲಿ, ಮನುಷ್ಯ ಹೊಟ್ಟೆ ತುಂಬ ಆಹಾರ ಸೇವಿಸಬಾರದು ಅಂತಾ ಚಾಣಕ್ಯರು ಹೇಳಿದ್ದಾರೆ.
ಸುಂದರ ಸ್ತ್ರೀಯನ್ನು ಯಾರು ವಿವಾಹವಾಗಬಾರದು..?
ಸುಂದರ ಸ್ತ್ರೀಯನ್ನು ವರಿಸಬೇಕು ಅನ್ನೋದು ಎಲ್ಲ ಪುರುಷರ ಆಸೆಯಾಗಿರುತ್ತದೆ. ಆದರೆ ವೃದ್ಧರಿಗೆ ಈ ಆಸೆ ಇರಕೂಡದು ಎನ್ನುತ್ತಾರೆ ಚಾಣಕ್ಯರು. ಪತ್ನಿಯನ್ನು ಕಳೆದುಕೊಂಡ, ಕೆಲ ವೃದ್ಧರು ಕೂಡ ವಿವಾಹವಾಗುವ ಕಾರಣಕ್ಕೆ, ಚಾಣಕ್ಯರು ಈ ರೀತಿ ಹೇಳಿದ್ದು, ವೃದ್ಧರು, ಸುಂದರ ಸ್ತ್ರೀಯನ್ನು ವಿವಾಹವಾದರೆ, ಅವರ ಆಸೆ ಆಕಾಂಕ್ಷೆಗಳನ್ನು ತೀರಿಸಲಾಗದೇ, ಅವರ ಜೀವನದಲ್ಲಿ ಬರೀ ದುಃಖಗಳೇ ತುಂಬಿರುತ್ತದೆ ಎಂದು ಹೇಳಿದ್ದಾರೆ.
ಬಡವರು ಎಂಥ ಕಾರ್ಯಕ್ರಮಗಳಿಗೆ ಹೋಗಬಾರದು..?
ಶ್ರೀಮಂತರ ಕಾರ್ಯಕ್ರಮಗಳಲ್ಲಿ, ಬಡವರು ಭಾಗವಹಿಸಬಾರದು. ಏಕೆಂದರೆ, ಶ್ರೀಮಂತರ ಕಾರ್ಯಕ್ರಮಮಕ್ಕೆ ತಕ್ಕಂತೆ, ಸಿದ್ಧವಾಗಿ ಹೋಗಲು, ಬಡವರ ಬಳಿ ಬಟ್ಟೆ, ಆಭರಣವಿರುವುದಿಲ್ಲ. ಹಾಗಾಗಿ ಅವರು ಸಾಧಾರಣ ಬಟ್ಟೆ ಧರಿಸಿ ಹೋಗಿ, ಅಲ್ಲಿ ಅವರಿಗೆ ಅವಮಾನವಾಗಬಹುದು. ಹಾಗಾಗಿ ಬಡವರು ಶ್ರೀಮಂತರ ಮನೆಯ ಕಾರ್ಯಕ್ರಮಗಳಿಗೆ ಹೋಗುವುದನ್ನು ತಪ್ಪಿಸಬೇಕು ಎನ್ನುತ್ತಾರೆ ಚಾಣಕ್ಯರು.
ಇಂಥ ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ: ಧರಿಸಿದರೆ ನೆಮ್ಮದಿ ಹಾಳಾಗುವುದು ನಿಶ್ಚಿತ
ನಿಮ್ಮ ಅಂಗೈ ನೋಡಿ, ದಿನ ಶುರು ಮಾಡಬೇಕು ಅಂತಾ ಹೇಳುವುದು ಯಾಕೆ ಗೊತ್ತಾ..?