Thursday, November 7, 2024

Latest Posts

‘ಜನರ ಹಿತವನ್ನು ಮರೆತು, ಸಿಎಮ್ ಡಿಸಿಎಮ್ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ’

- Advertisement -

Hubballi Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಬಗ್ಗೆ ಮಾತನಾಡಿದ್ದಾರೆ.

ಬಿ.ವೈ. ವಿಜಯೇಂದ್ರ ಅವರ ಆಯ್ಕೆ ಅತ್ಯಂತ ಸೂಕ್ತ ನಿರ್ಧಾರ. ನಮ್ಮ ರಾಷ್ಟ್ರೀಯ ನಾಯಕತ್ವ ಯುವಕರಿಗೆ ಆದ್ಯತೆ ನೀಡಿದೆ. ವಿಜಯೇಂದ್ರ ಅವರನ್ನು ನಾನು ಅತ್ಯಂತ ಹೃತ್ಪೂರ್ವಕವಾಗಿ ಅಭಿನಂಧಿಸುತ್ತೇನೆ. ವಿಜಯೇಂದ್ರ ನಾಯಕತ್ವದಲ್ಲಿ, ಯಡಿಯೂರಪ್ಪ ನೇತೃತ್ವದಲ್ಲಿ ನಾವು ಪಕ್ಷವನ್ನು ಗಟ್ಟಿಗೊಳಿಸುತ್ತೇವೆ. ಮೋದಿಯವರು ದೇಶಕ್ಕೆ‌ ಮಾಡಿರುವ ಕೆಲಸ, ಜನ ಕಲ್ಯಾಣ ಕಾರ್ಯಗಳಿಂದ 25ಕ್ಕೂ ಹೆಚ್ಚ ಸ್ಥಾನ ಗೆಲ್ಲುತ್ತೇವೆ. ವಿಜಯೇಂದ್ರ ನೇತೃತ್ವದಲ್ಲಿ ನಾವೆಲ್ಲಾ ಒಂದಾಗಿ ಕೆಲಸ ಮಾಡುತ್ತೇವೆ.  ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಅಲ್ಲದೇ, ಯಡಿಯೂರಪ್ಪ ಪಕ್ಷಾತೀತ ನಾಯಕ. ಯಡಿಯೂರಪ್ಪ ಲಿಂಗಾಯತರಿಗೆ ಮಾತ್ರವಲ್ಲ, ಎಲ್ಲ ಜನಾಂಗದ ನಾಯಕರು. ವಿಜಯೇಂದ್ರ ಆ ಹುದ್ದೆಗೆ ಬರುವ ಮುನ್ನ, ಅವರು ಯುವ ಮೋರ್ಚ್ ದಲ್ಲಿ ಕೆಲಸ ಮಾಡಿದ್ದಾರೆ. ಇದು ವಂಶಪಾರಂಪರ್ಯ ಅಧಿಕಾರವಲ್ಲ, ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕ ಖರ್ಗೆದು ವಂಶಪಾರಂಪರ್ಯ. ಇಡೀ ಪಕ್ಷವನ್ನು ಒಂದು ಕುಟುಂಬಕ್ಕೆ ಒಪ್ಪಿಸಿದ್ರೆ ಅದು ವಂಶಪಾರಂಪರ್ಯ. ಕಾಂಗ್ರೆಸ್‌ನವರು ಅತ್ಯಂತ ಬಾಲಿಶತನದ ಹೇಳಿಕೆ ನೀಡುತ್ತಿದ್ದಾರೆ. ಮೂರು ವರ್ಷ ಅವರ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರೇ ಇರಲಿಲ್ಲ ಎಂದು ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲಿ ನಮ್ಮದೇ ತಪ್ಪುಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ‌ ಬಂದಿದೆ. ದೇಶದಲ್ಲಿ ಕಾಂಗ್ರೆಸ್‌ ನ ಪರಿಸ್ಥಿತಿ ಏನಿದೆ? ಎಂದು ಜೋಶಿ ಪ್ರಶ್ನಿಸಿದ್ದಾರೆ. ಇನ್ನು ಸಿದ್ದರಾಮಯ್ಯ ಕಂಡ್ರೆ ಮೋದಿಗೆ ಭಯ ಎಂದು ಹೇಳಿಕೆ‌ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ,  ಈ ಹಿಂದೆ ರಾಹುಲ್ ಗಾಂಧಿ ಸಹ ಬಾಲಿಶ ಹೇಳಿಕೆ‌ ನೀಡಿದ್ದರು. ಮೋದಿಯವರು ನನ್ ಕಣ್ಣಲ್ಲಿ ಕಣ್ಣಿಟ್ಟು ನೋಡಲಿ ಎಂದಿದ್ದರು. ಈಗ ಸಿದ್ದರಾಮಯ್ಯ ಸಹ ರಾಹುಲ್ ಗಾಂಧಿ ಲೇವಲ್‌ಗೆ ಇಳಿದು ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸ್ಥಿತಿ‌ ದೇಶದಲ್ಲಿ ಏನಿದೆ ಮೊದಲು ನೋಡಲಿ. ಭ್ರಷ್ಟಾಚಾರದ ಬಗ್ಗೆ ಮಾತಾಡುವ ನೈತಿಕತೆ ಕಾಂಗ್ರೆಸ್‌ ನವರಿಗೆ ಇಲ್ಲ. ಎಲ್ಲೋ ಕೆಲವರು ಬಿಜೆಪಿ ಟಿಕೆಟ್ ಕೈತಪ್ಪಿ ಕಾಂಗ್ರೆಸ್ ಸೇರಿದ್ದಾರೆ. ಒಬ್ಬಿಬ್ಬರು ಪಕ್ಷ ತೊರೆದರೆ ಏನೂ ಆಗಲ್ಲ, ಪಕ್ಷ ನಿಷ್ಠರು ಪಕ್ಷದಲ್ಲೇ ಇರುತ್ತಾರೆ ಎಂದಿದ್ದಾರೆ.

ಇನ್ನು ಕಾಂಗ್ರೆಸ್‌ನವರು ಫ್ರೀ ಹೆಸರಲ್ಲಿ ಜನತೆಯನ್ನ ಸುಲಿಗೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲಾ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಕಾಂಗ್ರೆಸ್ ಶಾಸಕರೇ ಅಸಮಾಧಾನಗೊಂಡಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುತ್ತಿಲ್ಲ‌ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಅನೇಕ‌ ಶಾಸಕರು ತಾವಾದ್ರು ಅನುದಾನ ಕೊಡಿ ಎಂದು ಬಂದಿದ್ದರು,  ನಾನು ಅವರಿಗೆ ಹೇಳಿದ್ದೇನೆ, ನಾವಾದ್ರು ರಾಜ್ಯ ಸರ್ಕಾರದ ಮೂಲಕವೇ ಅನುದಾನ ಕೊಡಬೇಕು. ರಾಜ್ಯದಲ್ಲಿ ಅರ್ಥಿಕ ಪರಿಸ್ಥಿತಿ ಸಂಪೂರ್ಣ ಕುಸಿದು ಹೋಗಿದೆ. ಜನರ ಹಿತವನ್ನು ಮರೆತು, ಸಿಎಮ್ ಡಿಸಿಎಮ್ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಜೋಶಿ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿಗಳೇ ಮೂರು ಡಿಸಿಎಮ್ ಮಾಡಬೇಕು ಅಂತ  ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ. ಅನಗತ್ಯವಾಗಿ ಬಿಜೆಪಿ ಮೇಲೆ‌ ಆರೋಪ ಮಾಡುತ್ತಿದ್ದಾರೆ. ಜನ ಕಾಂಗ್ರೆಸ್ಗೆ ರಾಜ್ಯದಲ್ಲಿ ಪೂರ್ಣ ಬಹುಮತದ ಅಧಿಕಾರ ಕೊಟ್ಟಿದ್ದಾರೆ, ಕೊಟ್ಟ ಅಧಿಕಾರವನ್ನು ಬಳಿಸಿಕೊಂಡ‌ ಕೆಲಸ‌ಮಾಡಿ. ನಾವು ಎಲ್ಲಿಯೂ ಸರ್ಕಾರವನ್ನು ಅಸ್ಥಿರ ಗೊಳಿಸುವ ಕೆಲಸ‌ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಜೋಶಿ ಸ್ಪಷ್ಟನೆ ನೀಡಿದ್ದಾರೆ.

ಹಮಾಸ್ ಭಯೋತ್ಪಾದಕರ ಮೇಲೆ ದಾಳಿ ಮಾಡಿದ ಇಸ್ರೇಲ್, ರಾಕೇಟ್ ಧ್ವಂಸ, ಹಲವರ ಸಾವು

ಗಾಜಾದಲ್ಲಿ ಯುದ್ಧವಾಗುತ್ತಿದ್ದರೂ, 57 ಮುಸ್ಲಿಂ ರಾಷ್ಟ್ರಗಳ ಶೃಂಗಸಭೆಗೆ ಕರೆ..

ಗಾಜಾದಲ್ಲಿ ಮಕ್ಕಳ ದುರ್ಮರಣ, ಆಹಾರ ನೀರಿಲ್ಲದೇ ಪ್ರಾಣ ಕಳೆದುಕೊಳ್ಳುತ್ತಿರುವ ಕಂದಮ್ಮಗಳು

- Advertisement -

Latest Posts

Don't Miss