Wednesday, October 15, 2025

Latest Posts

ಗಾಜಾದಲ್ಲಿ 20 ಹಮಾಸ್ ಉಗ್ರರನ್ನು ವಶಕ್ಕೆ ಪಡೆದ ಇಸ್ರೇಲ್ ಸೇನೆ..

- Advertisement -

International News: ಗಾಜಾದಲ್ಲಿ ಕಾರ್ಯಾಚರಣೆ ಮುಂದುವರಿಸಿದ ಇಸ್ರೇಲ್ ಸೇನೆ 20 ಹಮಾಸ್ ಉಗ್ರರನ್ನು ವಶಕ್ಕೆ ಪಡೆದಿದೆ. ಅಲ್ಲದೇ ಹಲವು ಉಗ್ರರು ಗಾಜಾದಿಂದ ಕಾಲ್ಕಿತ್ತಿದ್ದು, ಇನ್ನು ಗಾಜಾ ಇಸ್ರೇಲ್ ವಶದಲ್ಲಿರುತ್ತದೆ ಎಂದು, ಇಸ್ರೇಲ್ ಸೇನೆ ಸ್ಪಷ್ಟನೆ ನೀಡಿದೆ.

16 ವರ್ಷದಿಂದ ಹಮಾಸ್ ಉಗ್ರರು ಗಾಜಾದಲ್ಲಿದ್ದರು. ಆದರೆ ಇದೀಗ ದೊಡ್ಡ ಯುದ್ಧ ನಡೆದಿದ್ದು ಸುಮಾರು 40 ದಿನದ ಈ ಯುದ್ಧಕ್ಕೆ ಸದ್ಯದಲ್ಲೇ ಅಂತ್ಯ ಸಿಗುವ ಸೂಚನೆ ಇದೆ. ಇಸ್ರೇಲ್ ಸೇನೆ 20 ಹಮಾಸ್ ಉಗ್ರರನ್ನು ವಶಕ್ಕೆ ಪಡೆದಿದ್ದು, ಇನ್ನು ಕೆಲ ಸೈನಿಕರು ಗಾಜಾ ಬಿಟ್ಟು, ಹೊರ ನಡೆದಿದ್ದಾರೆ. ಈವರೆಗೂ ನಡೆದ ಯುದ್ಧದಲ್ಲಿ 4 ಸಾವಿರಕ್ಕೂ ಹೆಚ್ಚಿನ ಉಗ್ರರನ್ನು, ಇಸ್ರೇಲ್ ಸೇನೆ ಸದೆಬಡೆದಿದೆ.

ಈ ಮೊದಲೇ ಹೇಳಿದಂತೆ, ಗಾಜಾದಲ್ಲಿ ಅಡಗಿ ಕೂತು ಪ್ರಾಣ ಉಳಿಸಿಕೊಳ್ಳಲು ಯಾವುದೇ ಸ್ಥಳಗಳಿಲ್ಲ. ಅಲ್ಲಿನ ಸಾಮಾನ್ಯ ನಾಗರಿಕರೇ ಹೆದರಿ ಬದುಕುತ್ತಿದ್ದಾರೆ. ಇನ್ನು ಇಸ್ರೇಲ್ ಸೇನೆ, ಉಗ್ರರನ್ನು ಹುಡುಕಿ ಹುಡುಕಿ ಕೊಲ್ಲುತ್ತಿದೆ. ಪಾಳು ಬಿದ್ದ ಕಟ್ಟಡ, ಶಾಲೆಯ ಕಟ್ಟಡ, ಆಸ್ಪತ್ರೆಗಳೇ ಉಗ್ರರ ನೆಲೆಯಾಗಿದ್ದು, ಇಲ್ಲಿ ಇರುವ ರೋಗಿಗಳು, ಆಸ್ಪತ್ರೆ ಸಿಬ್ಬಂದಿಗಳನ್ನೇ, ಉಗ್ರರು ಟಾರ್ಗೇಟ್ ಮಾಡಿ, ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ.

ಇದನ್ನರಿತ ಇಸ್ರೇಲ್ ಸೇನೆ, ಗಾಜಾದ ಆಸ್ಪತ್ರೆ, ಶಾಲಾ ಕಟ್ಟಡಗಳ ಮೇಲೆ ದಾಳಿ, ಮಾಡಿ, ಈಗಾಗಲೇ ಹಲವು ಹಮಾಸ್ ಉಗ್ರರನ್ನು ಸದೆಬಡೆದಿದೆ. ಇನ್ನು ಕೆಲ ಆಸ್ಪತ್ರೆಗಳಲ್ಲಿ ಹಮಾಸ್ ಉಗ್ರರು ಸುರಂಗ ಮಾರ್ಗ ನಿರ್ಮಿಸಿದ್ದು, ಅಲ್ಲೇ ಶಸ್ತ್ರಾಸ್ತ್ರಗಳನ್ನು, ರಾಕೇಟ್‌ಗಳನ್ನು ಅಡಿಗಿಸಿಟ್ಟಿದ್ದರೆಂಬ ಮಾಹಿತಿ ಇದೆ. ಇನ್ನು ಇಸ್ರೇಲ್ ಪ್ರಧಾನಿ ನೇತನ್ಯಾಹು ಹೇಳಿದಂತೆ, ಯುದ್ಧ ನಾವು ಶುರು ಮಾಡದಿದ್ದರೂ, ಯುದ್ಧದ ಅಂತ್ಯ ನಾವೇ ಮಾಡುತ್ತೇನೆ ಎಂದು ಹೇಳಿರುವುದನ್ನು, ಸಾಬೀತು ಮಾಡುತ್ತಿದ್ದಾರೆ ಎನ್ನಿಸುತ್ತಿದೆ.

ಗಾಜಾದಲ್ಲಿ ಮಕ್ಕಳ ದುರ್ಮರಣ, ಆಹಾರ ನೀರಿಲ್ಲದೇ ಪ್ರಾಣ ಕಳೆದುಕೊಳ್ಳುತ್ತಿರುವ ಕಂದಮ್ಮಗಳು

1000ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಹಮಾಸ್ ಕಮಾಂಡರ್‌ ಹತ್ಯೆ..

ಹಮಾಸ್ ಉಗ್ರರನ್ನು ಸಂಪೂರ್ಣವಾಗಿ ಸದೆಬಡಿಯುವುದೇ ನಮ್ಮ ಪಾಲಿನ ಕದನ ವಿರಾಮ: ನೇತನ್ಯಾಹು

- Advertisement -

Latest Posts

Don't Miss