ಪಟಾಕಿ ದುರಂತಗಳಿಗೆ ಚಿಕಿತ್ಸೆ ನೀಡಲು ಮಿಂಟೋ ರೆಡಿ..

Health Tips: ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ನಾವು ಹಲವು ರೋಗಗಳಿಗೆ ಏನೇನು ಪರಿಹಾರ ಮಾಡಬಹುದು ಎಂಬ ಬಗ್ಗೆ ಹೇಳಿದ್ದೇವೆ. ಸ್ವತಃ ವೈದ್ಯರೇ ಈ ಬಗ್ಗೆ ವಿವರಣೆ ನೀಡಿದ್ದು, ಹಲವು ರೋಗಗಳಿಂದ, ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತದೆ. ಆ ರೋಗ ಬರದಂತೆ ನಾವು ಹೇಗೆ ಎಚ್ಚರಿಕೆ ವಹಿಸಬೇಕು, ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದಾರೆ. ಅದರಂತೆ ಇಂದು ಪಟಾಕಿ ದುರಂತಗಳಿಗೆ ಉತ್ತಮ ಚಿಕಿತ್ಸೆ ಬೇಕಾಗಿದ್ದಲ್ಲಿ, ಯಾವ ಆಸ್ಪತ್ರೆಗೆ ಬರಬಹುದು ಎಂದು ಹೇಳಲಿದ್ದೇವೆ.

ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಪಟಾಕಿ ದುರಂತಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ. ಬರೀ ಪಟಾಕಿ ದುರಂತವಷ್ಟೇ ಅಲ್ಲದೇ, ಯಾವುದೇ ಬೆಂಕಿಯ ಅಪಘಾತಗಳಾಗಿದ್ದರೂ, ಇವರು ಅಲರ್ಟ್ ಆಗಿದ್ದು, ಚಿಕಿತ್ಸೆ ನೀಡುತ್ತಾರೆ. ಮಹಿಳೆಯರ ವಾರ್ಡ್‌ನಲ್ಲಿ 10 ಬೆಡ್‌ಗಳು, ಪುರುಷರ ವಾರ್ಡ್‌ನಲ್ಲಿ 10 ಬೆಡ್‌ಗಳು ಇದೆ. ಮಕ್ಕಳ ವಾರ್ಡ್‌ನಲ್ಲಿ 15 ಬೆಡ್ ಇದೆ. ದೀಪಾವಳಿಯಲ್ಲಿ ಹೆಚ್ಚು ಪಟಾಕಿ ದುರಂತವಾಗುವ ಕಾರಣಕ್ಕೆ, 35 ಬೆಡ್‌ಗಳನ್ನು ಈ ಆಸ್ಪತ್ರೆ ರೆಡಿ ಮಾಡಿಟ್ಟುಕೊಂಡಿದೆ.

ಇನ್ನು ಪ್ರತಿದಿನ 6ರಿಂದ 8 ವೈದ್ಯರು ಆಸ್ಪತ್ರೆಯಲ್ಲಿ ಇರುತ್ತಾರೆ. ಪ್ರತಿದಿನ ಒಂದೊಂದು ಟೀಂ ಇದ್ದು, 24 ತಾಸು ಕೂಡ ಸರ್ಜನ್, ಅನಸ್ತೇಷಿಯಾ ಕೊಡುವ ವೈದ್ಯರು ಇರುತ್ತಾರೆ. ಈ ಆಸ್ಪತ್ರೆಯಲ್ಲಿ ಇನ್ನೂ ಏನೇನು ಸೌಲಭ್ಯಗಳಿದೆ ಎಂದು ತಿಳಿಯಲು ಈ ವೀಡಿಯೋ ನೋಡಿ..

ಮಗು ಹುಟ್ಟಿದ 30 ದಿನಗಳಲ್ಲಿ ಕಣ್ಣಿನ ಟೆಸ್ಟ್ ಮಾಡಿಸಬೇಕು.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣವೇನು..?

ಒಂದೇ ಕಡೆಯಲ್ಲಿ ಕುಳಿತು ಕೆಲಸ ಮಾಡ್ತೀರಾ..? ಎಚ್ಚರ..!

About The Author