ಪುಟಾಣಿ ಮಕ್ಕಳಿಗೆ ಇಲ್ಲಿದೆ ಚಂದದ ಬಟ್ಟೆಗಳು

Shopping tips: ನಾವು ನಿಮಗೆ  ಕಡಿಮೆ ಬೆಲೆಗೆ, ಉತ್ತಮ ಕ್ವಾಲಿಟಿಯ ಬಟ್ಟೆ, ಸೀರೆ, ಚಪ್ಪಲಿ ಸೇರಿ ಹಲವು ವಸ್ತುಗಳು ಎಲ್ಲೆಲ್ಲಿ ಸಿಗುತ್ತದೆ ಅನ್ನೋ ಬಗ್ಗೆ ಹೇಳಿದ್ದೆವು. ಇಂದು ಚಿಕ್ಕ ಮಕ್ಕಳಿಗೆ ಚೆಂದದ, ಉತ್ತಮಕ್ವಾಲಿಟಿಯ, ಕಡಿಮೆ ಬೆಲೆಯ ಬಟ್ಟೆಗಳು ಎಲ್ಲಿ ಸಿಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ.

ಬೆಂಗಳೂರಿನ ರಾಮೇಶ್ವರಂ ಕೆಫೆ ರೋಡ್, ರಾಜಾಜಿನಗರದಲ್ಲಿ, ದಿ ಗರ್ಲ್ಸ್ ಕಲೆಕ್ಷನ್ ಅನ್ನೋ ಶಾಪ್‌ನಲ್ಲಿ ನಿಮಗೆ ಪುಟ್ಟ ಮಕ್ಕಳಿಗೆ ಬೇಕಾದ ಬಟ್ಟೆಗಳು ಸಿಗುತ್ತದೆ. ಫ್ರಾಕ್, ಲೆಹೆಂಗಾ ಬ್ಲೌಂಸ್, ಎಲ್ಲವೂ ಸಿಗುತ್ತದೆ. ಆದರೆ ಈ ಅಂಗಡಿ ಟ್ರೆಡಿಷನಲ್ ಬಟ್ಟೆ ಮಾರಾಟಕ್ಕೆ ಫೇಮಸ್ ಆಗಿದೆ.

ಪುಟ್ಟ ಮಕ್ಕಳಿಗೆ ಹಬ್ಬದ ಸಮಯದಲ್ಲಿ, ಮದುವೆ ಮುಂಜಿ ಸಮಯದಲ್ಲಿ ಹಾಕಬಹುದಾದ ಟ್ರೆಡಿಷನಲ್‌ ಬಟ್ಟೆಗಳು ನಿಮಗೆ ಇಲ್ಲಿ ಸಿಗುತ್ತದೆ. ಪುಟ್ಟ ಮಕ್ಕಳಿಗೆ ಲಂಗಾ ದಾವಣಿ ಅಂದ್ರೆ ಇಷ್ಟವಾಗಬಹುದು. ಯಾಕಂದ್ರೆ ಇದರೊಂದಿಗೆ ದುಪಟ್ಟಾ ಇರುವ ಕಾರಣಕ್ಕೆ, ಅಂಥ ಬಟ್ಟೆಯನ್ನು ಮಕ್ಕಳು ಇಷ್ಟಪಡುತ್ತಾರೆ. ನಿಮಗೆ ಇಲ್ಲಿ ಸಾವಿರ ರೂಪಾಯಿಯ ಒಳಗೆ ಉತ್ತಮ ಕ್ವಾಲಿಟಿ, ಬೇರೆ ಬೇರೆ ಡಿಸೈನ್ ಇರುವ ಲಂಗಾ ದಾವಣಿ ಸಿಗುತ್ತದೆ.

ಇಷ್ಟೇ ಅಲ್ಲದೇ, ಕ್ಯೂಟ್ ಕ್ಯೂಟ್ ಆಗಿರುವ ಫ್ರಾಕ್, ಸ್ಕರ್ಟ್-ಬ್ಲೌಸ್ ಕೂಡ ನಿಮಗಿಲ್ಲಿ ಸಿಗುತ್ತದೆ. ಇನ್ನು ಈ ಅಂಗಡಿಯಲ್ಲಿ ಎಂಥೆಂಥ ಡಿಸೈನ್ ಬಟ್ಟೆ ಸಿಗುತ್ತದೆ ಅಂತಾ ತಿಳಿಯಲು ನೀವು ಈ ವೀಡಿಯೋ ನೋಡಿ..

ಶುಗರ್ ಇದೆ ಎಂದು ಚಕೋತಾ, ಹಾಗಲಕಾಯಿ ತಿಂತೀರಾ..?

ಚರ್ಮದ ಮೇಲೆ ಗುಳ್ಳೆಗಳು ಎದ್ದಿವೆಯಾ..? ಏನಿದು ಅರ್ಟಿಕೇರಿಯಾ..?

ಬಾಯಿ ಹುಣ್ಣಿನ ನೋವಿಗೆ ಇಲ್ಲಿದೆ ರಾಮಬಾಣ..

About The Author