Health Tips: ಮಕ್ಕಳಿಗೆ ದೃಷ್ಟಿ ದೋಷ, ಕಣ್ಣಿನ ಆರೋಗ್ಯ, ಕಣ್ಣಿನ ತಪಾಸಣೆ ಬಗ್ಗೆ ವೈದ್ಯೆಯಾದ ಮೈತ್ರಿಯವರು ನಿಮಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ. ಇಂದು ಮಕ್ಕಳಿಗೆ ಕನ್ನಡಕವನ್ನು ಆಯ್ಕೆ ಮಾಡುವಾಗ, ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಮಕ್ಕಳಿಗೂ ಸ್ಟೈಲಿಶ್ ಆಗಿರುವಂಥ ಕನ್ನಡಕಗಳು ಬಂದಿದೆ. ಅದರಲ್ಲೂ ಹಲವಾರು ವಿಧಗಳಿದೆ. ಮಕ್ಕಳಿಗೆ ಕನ್ನಡ ಆರಿಸಬೇಕಾದರೆ, ರೌಂಡ್ ಅಥವಾ ಓವಲ್ ಶೇಪ್ ಕನ್ನಡಕವನ್ನು ಆರಿಸಬೇಕು. ಏಕೆಂದರೆ, ಮಕ್ಕಳು ಬೆಳವಣಿಗೆಯಲ್ಲಿ ಕುಳ್ಳರಾಗಿರುವುದರಿಂದ, ಬೋರ್ಡ್, ಟೀಚರ್, ತಂದೆ ತಾಯಿ ಸೇರಿ ಇತರರನ್ನ ನೋಡಬೇಕಾದರೆ, ಕತ್ತು ಎತ್ತಿ ಮೇಲೆ ನೋಡಬೇಕು. ಹಾಗಾಗಿ ರೌಂಡ್ ಶೇಪ್ ಕನ್ನಡಕ ಹಾಕುವುದರಿಂದ, ಅವರಿಗೆ ಕತ್ತು ಮೇಲೆತ್ತಿ ನೋಡಲು ಅನುಕೂಲವಾಗುತ್ತದೆ.
ಚೌಕಾಕಾರದ ಫ್ರೇಮ್ ಇರುವ ಕನ್ನಡ ಧರಿಸಿದರೆ, ಅವರಿಗೆ ಮೇಲೆ ನೋಡುವಾಗ, ತೊಂದರೆಯಾಗಬಹುದು. ಹಾಗಾಗಿ ಮಕ್ಕಳಿಗೆ ಗೋಲಾಕಾರದ ಕನ್ನಡಕ ತೆಗೆದುಕೊಳ್ಳುವುದು ಉತ್ತಮ. ಇನ್ನು ಕಿವಿ ಬಳಿ ಬರುವ ಬೆಂಡ್ ಸರಿಯಾಗಿ ಇರಬೇಕು. ಮಕ್ಕಳ ಕಣ್ಣಿಗೆ ಕನ್ನಡಕ ಕರೆಕ್ಟ್ ಆಗಿ ಕೂರಬೇಕು. ಇಲ್ಲವಾದಲ್ಲಿ, ಕನ್ನಡಕ ಪದೇ ಪದೇ ಜಾರಿ, ಕೆಳಗೆ ಬಂದು, ಮಕ್ಕಳ ಓದಿಗೆ ಅಡ್ಡಿಯಾಗುತ್ತದೆ. ಹಾಗಾಗಿ ಮಕ್ಕಳ ಕನ್ನಡಕದ ಶೇಪ್ ಮತ್ತು ಫಿಟ್ಟಿಂಗ್ ಪರೀಕ್ಷಿಸುವುದು ತುಂಬಾ ಮುಖ್ಯ. ಈ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..

